ಮೇಲ್ಪೇಟೆ ನಿವಾಸಿ ರೋಬರ್ಟ್ ಕಸ್ತಲಿನೊ ನಿಧನ

ಉದ್ಯಾವರ : 50 ವರ್ಷ ಉದ್ಯಾವರ ಸಂತ ಫ್ರಾನ್ಸಿಸ್ ಝೇವಿಯರ್ ದೇವಾಲಯದ ವ್ಯಾಪ್ತಿಯ ಸ್ಮಶಾನದ ಕೆಲಸ ನಿರ್ವಹಿಸುತ್ತಿದ್ದ ಮತ್ತು ಗ್ರಾಮ ಪಂಚಾಯತ್ ಪೌರ ನೌಕರರಾಗಿ ಸೇವೆ ಸಲ್ಲಿಸುತ್ತಿದ್ದ ಉದ್ಯಾವರ ಮೇಲ್ಪೇಟೆ ನಿವಾಸಿ ರೋಬರ್ಟ್ ಕಸ್ತಲಿನೊ (60) ರವರು ಇಂದು ಸೆ. 21ರಂದು ಅಸೌಖ್ಯದಿಂದ ನಿಧನ ಹೊಂದಿದರು. 

ಸರಳ ಸ್ವಭಾವದವರಾಗಿದ್ದ ಅವರು, ತನ್ನ 8ನೇ ವಯಸ್ಸಿನಲ್ಲಿಯೇ ತನ್ನ ತಂದೆ ದಿ. ಜಿಲ್ಲು ಅವರೊಂದಿಗೆ ಸ್ಮಶಾನದ ಕೆಲಸದಲ್ಲಿ ತೊಡಗಿಕೊಂಡಿದ್ದರು. ತಂದೆಯ ನಿಧನದ ಬಳಿಕ ಆ ಕೆಲಸವನ್ನು ರೋಬರ್ಟ್ ಕಸ್ತಲಿನೊ ಮುಂದುವರಿಸಿಕೊಂಡಿದ್ದರು. ಇವರ ಸೇವೆಯನ್ನು ಗುರುತಿಸಿ ಹಲವು ಸಂಘ ಸಂಸ್ಥೆಗಳು ಸನ್ಮಾನಿಸಿದ್ದರು.

ಅವರ ಅಂತ್ಯಕ್ರಿಯೆಯ ಅಂತಿಮ ವಿಧಿವಿಧಾನಗಳು ಇಂದು ಸಂಜೆ ಗಂಟೆ 3.30ಕ್ಕೆ ಮನೆಯಿಂದ ಬಳಿಕ ಸಂತ ಫ್ರಾನ್ಸಿಸ್ ಝೇವಿಯರ್ ದೇವಾಲಯದಲ್ಲಿ ನಡೆಯಲಿದೆ.

ಅವರು ಪತ್ನಿ, ಪುತ್ರ ಮತ್ತು ಬಂಧು ಬಳಗವನ್ನು ಅಗಲಿದ್ದಾರೆ.

Leave a Reply