ಖ್ಯಾತ ಹಾಸ್ಯನಟ ರಾಜು ಶ್ರೀವಾತ್ಸವ ನಿಧನ

ಚಿಕಿತ್ಸೆ ಫಲಕಾರಿಯಾಗದೇ ಖ್ಯಾತ ಹಾಸ್ಯನಟ ರಾಜು ಶ್ರೀವಾತ್ಸವ ಅವರು ನಿಧನ ಹೊಂದಿದ್ದಾರೆ.
ರಾಜು ಅವರು  ಕಳೆದ 41 ದಿನಗಳಿಂದ ಆಸ್ಪತ್ರೆಯಲ್ಲಿದು ಇಂದು ಬೆಳಿಗ್ಗೆ ನಿಧನರಾಗಿದ್ದಾರೆ.ಜಿಮ್‌ನಲ್ಲಿ ವ್ಯಾಯಾಮ ಮಾಡುವಾಗ ಎದೆನೋವು ಕಾಣಿಸಿಕೊಂಡು ಹಾಸ್ಯನಟ ರಾಜು ಶ್ರೀವಾತ್ಸವ ಅವರು  ಕುಸಿದು ಬಿದಿದ್ದರು. ಅವರನ್ನು ಬಳಿಕ ಆಗಸ್ಟ್ 10 ರಂದು ದೆಹಲಿಯ ಏಮ್ಸ್‌ಗೆ ದಾಖಲಿಸಲಾಗಿತ್ತು.
ಹೃದಯಾಘಾತದಿಂದ ಆಸ್ಪತ್ರೆಗೆ ದಾಖಲಾಗಿ ಒಂದು ತಿಂಗಳು ರಾಜು  ಅವರು ವೆಂಟಿಲೇಟರ್‌ನಲ್ಲಿದ್ದರು.ರಾಜು ಶ್ರೀವಾತ್ಸವ ಅವರ ಸಹೋದರ ದಿಪೂ ಶ್ರೀವಾಸ್ತವ್ ಅವರು ಇತ್ತೀಚೆಗೆ  ಹಾಸ್ಯನಟ ನಿಧಾನವಾಗಿ ಚೇತರಿಸಿಕೊಳ್ಳುತ್ತಿದ್ದಾರೆ ಆದರೆ ಪ್ರಜ್ಞಾಹೀನರಾಗಿದ್ದಾರೆ ಎಂದು ಹೇಳಿದ್ದರು.
ಆದರೆ ಚಿಕಿತ್ಸೆ ಫಲಕಾರಿಯಾಗದೇ ಇಂದು ಸಾವನಪ್ಪಿದ್ದಾರೆ. ಹಾಸ್ಯ ನಟ ಶ್ರೀವಾತ್ಸವ ಅವರ ನಿಧನಕ್ಕೆ ಬಾಲಿವುಡ್ ನ ಆನೇಕ ನಟ ನಟಿಯರು ಸಂತಾಪ ವ್ಯಕ್ತಪಡಿಸಿದ್ದಾರೆ.

Leave a Reply