Janardhan Kodavoor/ Team KaravaliXpress
27 C
Udupi
Thursday, December 3, 2020

ಮೂರನೇ ರಾಷ್ಟ್ರೀಯ ಪ್ರಕೃತಿ ಚಿಕಿತ್ಸಾ ದಿನಾಚರಣೆ – ಶಾಸಕ ರಘುಪತಿ ಭಟ್ ಭಾಗಿ

ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ನ್ಯಾಚುರೋಪತಿ, ಪುಣೆ ಇದರ ಸಹಯೋಗದಲ್ಲಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಯೋಗ ಮತ್ತು ನೇಚರ್ ಕ್ಯೂರ್ ಹಾಸ್ಪಿಟಲ್ ಸೌಖ್ಯವನ ಪರೀಕ ಉಡುಪಿ ಇಲ್ಲಿ ಇಂದು ದಿನಾಂಕ 19-11-2020 ರಂದು ನಡೆದ ಮೂರನೇ ರಾಷ್ಟ್ರೀಯ ಪ್ರಕೃತಿ ಚಿಕಿತ್ಸಾ ದಿನಾಚರಣೆ ಕಾರ್ಯಕ್ರಮ ದಲ್ಲಿ ಶಾಸಕ ಶ್ರೀ ಕೆ ರಘುಪತಿ ಭಟ್ ಭಾಗವಹಿಸಿ ಶುಭ ಹಾರೈಸಿದರು.ಬಳಿಕ ಪರ್ಕಳ ವಾರ್ಡ್ ದೇವಿ ನಗರದ ಬಳಿಯಲ್ಲಿ ವಾಹನ ದಟ್ಟಣೆಯನ್ನು ನಿಯಂತ್ರಿಸುವ ಸಲುವಾಗಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಆಸ್ಪತ್ರೆ ಪರೀಕಾ ವತಿಯಿಂದ ಬ್ಯಾರಿಕೇಟ್ ಅಳವಡಿಸಲಾಗಿದ್ದು, ಶಾಸಕ ಕೆ. ರಘುಪತಿ ಭಟ್ ಉದ್ಘಾಟಿಸಿದರು.ಈ ಸಂದರ್ಭದಲ್ಲಿ ನಗರ ಬಿಜೆಪಿ ಅಧ್ಯಕ್ಷರಾದ ಮಹೇಶ್ ಠಾಕೂರ್, ಜಿಲ್ಲಾ ಆಯುಷ್ ಅಧಿಕಾರಿಗಳಾದ ಡಾಕ್ಟರ್ ಅಲಕಾನಂದ ರಾವ್, ಶಾಂತಿವನ ಟ್ರಸ್ಟಿನ ಕಾರ್ಯದರ್ಶಿಗಳಾದ ಶ್ರೀ ಬಿ. ಎಸ್ ತೋಳ್ಪಡಿತ್ತಾಯ, ಪರೀಕಾದ ಮುಖ್ಯ ವೈದ್ಯಾಧಿಕಾರಿಗಳಾದ ಡಾಕ್ಟರ್ ಶಿವರಾಜ್ ವಿ ಪಾಟೀಲ್ ಹಾಗೂ ಆಸ್ಪತ್ರೆಯ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

ವ್ಯಕ್ತಗೊಂಡ ಪ್ರಮೋದಾಂತರಂಗ

ನನ್ನನ್ನು ಜನಪ್ರತಿನಿಧಿಯಾಗಿ ಆಯ್ಕೆ ಮಾಡಿದಾಗ ನನ್ನ ಮನಸ್ಸಿನಲ್ಲಿ ನಾನು ಅಧಿಕಾರಕ್ಕಾಗಿ ಕೆಲಸ ಮಾಡಬಾರದು, ನನ್ನ ಕೆಲಸ ಜನರಿಗೆ ಅಧಿಕಾರ ನೀಡುವಂತಿರಬೇಕು ಎಂಬುದಾಗಿತ್ತು. ನಾನು ಕೇವಲ ರಾಜಕೀಯ ಮಾಡುವುದಿದ್ದರೇ ಹೇಗೂ ಮಾಡಬಹುದು, ರಾಜಕೀಯ ವೃತ್ತಿಯಲ್ಲ ಅದೊಂದು...

Click: Swathi Shenoy

Indian Roller.... State bird of Karnataka.. Clicked at Haleangadi

ಪಣಂಬೂರಿನಲ್ಲಿ ಸಚಿವರಿಂದ ಪೊಲೀಸ್ ವಸತಿ ಗೃಹಗಳ ಉದ್ಘಾಟನೆ

ಮಂಗಳೂರು: ಪೊಲೀಸ್ ವಸತಿ ಯೋಜನೆ 2020ರ ಅಡಿಯಲ್ಲಿ ಮಂಗಳೂರು ನಗರ ಪೊಲೀಸ್ ಸಿಬ್ಬಂದಿಗಾಗಿ ಪಣಂಬೂರಿನಲ್ಲಿ ರೂ.21.57 ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಲಾದ ಪೊಲೀಸ್ ವಸತಿ ಗೃಹಗಳನ್ನು ಗೃಹ ಸಚಿವ ಬಸವರಾಜ ಬೊಮ್ಮಾಯಿ ಗುರುವಾರ...

‘ಪೊರ್ಲುಡೆ ಪೊರ್ಲು ನಮ್ಮ ತುಳುನಾಡು’~ತುಳು ಲಿಪಿ ಪರೀಕ್ಷೆ 

ಮಲ್ಪೆ~ ​‘ಪೊರ್ಲುಡೆ ಪೊರ್ಲು ನಮ್ಮ ತುಳುನಾಡು’. ತುಳುವರ ಮಾತೃಭಾಷೆ ತುಳು. ಈ ಸುಂದರ​ಭಾಷೆಯನ್ನು ಎಷ್ಟು ಬಣ್ಣಿಸಿದರೂ ಸಾಲದು. ಮೇರು ಮಟ್ಟದ ಇತಿಹಾಸ ಇರುವ ತುಳುಭಾಷೆಗೆ ಸ್ವಂತ ಲಿಪಿ ಇದೆ​ಎಂದು ಡಾ|ವೆಂಕಟರಾಜ ಪುಣಿಂಚಿತ್ತಾಯರು ತಮ್ಮ...

ಉಡುಪಿ ಜಿಲ್ಲಾಸ್ಪತ್ರೆಯಲ್ಲಿ ದ್ರವರೂಪದ ಆಮ್ಲಜನಕ ಸ್ಥಾವರ ಉದ್ಘಾಟಿಸಿದ ಸಚಿವ ಬೊಮ್ಮಾಯಿ

ಉಡುಪಿಯ ಅಜ್ಜರಕಾಡು ಜಿಲ್ಲಾಸ್ಪತ್ರೆ ಆವರಣದಲ್ಲಿ ನೂತನವಾಗಿ ಸ್ಥಾಪಿಸಲಾದ ದ್ರವರೂಪದ ಆಮ್ಲಜನಕದ ಸ್ಥಾವರ (ಲಿಕ್ವಿಡ್ ಆಕ್ಸಿಜನ್ ಪ್ಲಾಂಟ್)ನ ಉದ್ಘಾಟನೆಯನ್ನು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ ಅವರು ಗುರುವಾರ ನೆರವೇರಿಸಿದರು.50ಲಕ್ಷ ರೂ. ವೆಚ್ಚದಲ್ಲಿ...
error: Content is protected !!