ಭಯಾನಕ ಮೇ ತಿಂಗಳು, 8 ಲಕ್ಷ ಸೋಂಕು ದಿನನಿತ್ಯ: ಅಮೇರಿಕಾ ತಜ್ಞರ ಸ್ಪೋಟಕ ಮಾಹಿತಿ

ನವದೆಹಲಿ : ಕೊರೊನಾ‌ ವೈರಸ್ ಸೋಂಕಿನ ಎರಡನೇ ಅಲೆಗೆ ಭಾರತ ತತ್ತರಿಸಿ ಹೋಗಿದೆ. ಆದರೆ ಮೇ ತಿಂಗಳು ಇನ್ನಷ್ಟು ಭಯಾನಕವಾಗಿರಲಿದೆ ಎಂಬ ಮಾಹಿತಿಯನ್ನು ಅಮೇರಿಕಾ ವಿಜ್ಞಾನಿಗಳು ನೀಡಿದ್ದಾರೆ.​​

ದೇಶದಲ್ಲಿ ದಿನೇ ದಿನೇ ಕೊರೊನಾ ವೈರಸ್ ಸೋಂಕಿತ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಲೇ ಇದೆ. ನಿತ್ಯವೂ 3 ಲಕ್ಷಕ್ಕೂ ಅಧಿಕ ಸಂಖ್ಯೆಯಲ್ಲಿ ಸೋಂಕಿತರು ಹೆಮ್ಮಾರಿ ಕೊರೊನಾಗೆ ತುತ್ತಾಗಿದ್ದಾರೆ. ಆದರೆ ಮೇ ತಿಂಗಳಲ್ಲಿ ಪ್ರತಿನಿತ್ಯ 8 ಲಕ್ಷ ಮಂದಿ ಸೋಂಕಿಗೆ ತುತ್ತಾಗಲಿದ್ದಾರೆ.

ಅಲ್ಲದೇ ಸಾವಿನ ಸಂಖ್ಯೆಯಲ್ಲಿ ಹೆಚ್ಚಳವಾಗಲಿದ್ದು, ದಿನ ನಿತ್ಯ 5 ಸಾವಿರಕ್ಕೂ ಅಧಿಕ ಮಂದಿಯನ್ನು ಕೊರೊನಾ ಸೋಂಕು ಬಲಿ ಪಡೆ​ಯುವ ಸಾಧ್ಯತೆ ಇದೆ.  

ಅಮೇರಿಕಾದ ಮಿಚೆಗನ್ ವಿವಿಯ ವಿಜ್ಞಾನಿ ಡಾ. ಭ್ರಮರಾ ಮುಖರ್ಜಿ ​ಈ  ಮಾಹಿತಿಯನ್ನು ನೀಡಿದ್ದಾರೆ. ಎಪ್ರೀಲ್ 12 ರಿಂದ ಅಗಸ್ಟ್ 10ರ‌ ವರೆಗೆ ದೇಶದಲ್ಲಿ ಬರೋಬ್ಬರಿ 3.29 ಲಕ್ಷ ಜನರು ಸಾವನ್ನಪ್ಪಲಿ ​​ದ್ದಾರೆ ಅನ್ನೋ ಮಾಹಿತಿಯನ್ನು ನೀಡಿದ್ದಾರೆ.

ಒಟ್ಟಾರೆಯಾಗಿ ಕೊರೊನಾ ಸೋಂಕು ದಿನೇ ದಿನೇ ಆತಂಕವನ್ನು ತಂದೊಡ್ಡು​ತ್ತಿರುವುದು ನಿಜ.  

 
 
 
 
 
 
 
 
 
 
 

Leave a Reply