ಮಾಸ್ಕ್‌ನಿಂದಲೂ ಕೊರೋನಾ ಬರುವ ಸಾಧ್ಯತೆ

ಬೆಂಗಳೂರು: ಕೊರೋನಾ ತಡೆಗಟ್ಟುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಮಾಸ್ಕ್ ಧರಿಸದಿದ್ದರೆ ದುಬಾರಿ ದಂಡ ವಿಧಿಸುವ ಪ್ರಕ್ರಿಯೆಯನ್ನು ಕೈಗೆತ್ತಿಕೊಂಡಿದೆ. ಆದರೆ ಇದೀಗ ಮಾಸ್ಕ್ ನಿಂದಲೆ ಕೊರೋನಾ ಬರುವ ಸಾಧ್ಯತೆ ಹೆಚ್ಚಿದೆ. ಹೌದು
ಅನೇಕರು ಮಾಸ್ಕ್ ಎಲ್ಲಿಂದ ತರುತ್ತಾರೆ, ಹೇಗೆ ಧರಿಸುತ್ತಾರೆ ಎಂಬುದರ ಅರಿವು ಹೆಚ್ಚಿನ ಮಂದಿಗೆ ಸರಿಯಾಗಿ ಇಲ್ಲ .

ಸರಿಯಾಗಿ ಗಮನಿಸಿದರೆ ಚಿಕ್ಕ ಪುಟ್ಟ ಕೆಲಸ  ಮಾಡುವವರು ಗಲೀಜಾದ ಮಾಸ್ಕ್‌ಗಳನ್ನೇ ಧರಿಸಿಕೊಂಡಿರುತ್ತಾರೆ. ಇನ್ನು ಕೆಲವರಿಗೆ ಮಾಸ್ಕ್ ಕೊಳ್ಳಲು ಹಣವೆ ಇಲ್ಲದೆ ರಸ್ತೆ ಬದಿಯಲ್ಲಿ ಮತ್ತು ಕಸದಲ್ಲಿ ಯಾರೋ ಬಳಸಿ ಎಸೆದ ಮಾಸ್ಕ್‌ಗಳನ್ನೇ ಸ್ವಚ್ಛಗೊಳಿಸದೆ ತಾವೇ ಧರಿಸುತ್ತಾರೆ.​ ​ಅದೆಷ್ಟೋ ಬಡವರು, ನಿರ್ಗತಿಕರು​, ಬಾರಿ ದಂಡದ ಭೀತಿಗೊಳಗಾಗಿ  ಈ ರೀತಿ ಯಾಗಿ ಮಾಡುತ್ತಿದ್ದಾರೆ.

ಸ್ವಚ್ಛಗೊಳಿಸದ ಮತ್ತು ಬೇರೊಬ್ಬರು ಬಳಸಿದ ಮಾಸ್ಕ್‌ಗಳನ್ನು ಮರುಬಳಕೆ ಮಾಡುವುದರಿಂದ ಸೋಂಕು ಹೆಚ್ಚಾಗಿ ಹರಡುವ ಸಾಧ್ಯತೆಗಳಿವೆ.

 
 
 
 
 
 
 
 
 
 
 

Leave a Reply