ಉಡುಪಿ ಜಿಲ್ಲಾ ಸಮುದಾಯ ಆರೋಗ್ಯ ಅಧಿಕಾರಿಗಳಿಗೆ ತರಬೇತಿ ಕಾರ್ಯಗಾರ

ಮಣಿಪಾಲ : ಸಮುದಾಯ ವೈದ್ಯಕಿಯ ವಿಭಾಗ ಕೆ ಎಮ್ ಸಿ ಮಣಿಪಾಲ ಮತ್ತುಉಡುಪಿ ಜಿಲ್ಲಾ ರೊಗ ಸರ್ವೇಕ್ಷಣಾಧಿಕಾರಿಗಳ ಕಚೇರಿ ಜಂಟಿಯಾಗಿ ಆಸಾಂಕ್ರಮಿಕ ರೋಗಗಳಿಗಾಗಿ (ಡಯಾಬಿಟಿಕ್, ರಕ್ತದೊತ್ತಡ,ಕ್ಯಾನ್ಸರ್, ಉಪಶಮನ ಚಿಕಿತ್ಸೆಗಳು)ತಪಾಸಣೆ, ತಡೆಗಟ್ಟುವಿಕೆ ಮತ್ತು ಚಿಕಿತ್ಸೆ ಬಗ್ಗೆ ಉಡುಪಿ ಜಿಲ್ಲೆಯ ಸುಮಾರು 250ಕ್ಕೂ ಅಧಿಕ ಸಮುದಾಯ ಆರೋಗ್ಯ ಅಧಿಕಾರಿಗಳಿಗೆ 2 ದಿನಗಳ ತರಬೇತಿ ಕಾರ್ಯಾಗಾರವು ಕೆ ಎಮ್ ಸಿ ಕಾಲೇಜಿನ ಸಭಾಂಗಣದಲ್ಲಿ ನಡೆಯಿತು.

ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದ ಜಿಲ್ಲಾಆರೋಗ್ಯ ಅಧಿಕಾರಿ ಡಾ. ನಾಗಭೂಷಣ್ ಉಡುಪ ಅವರು ಸಮುದಾಯ ಆರೋಗ್ಯ ಅಧಿಕಾರಿಗಳ ಕರ್ತವ್ಯ ಮತ್ತು ಜವಾಭ್ದಾರಿಗಳ ಹಾಗೂ ಅವರ ಕಾರ್ಯವ್ಯಾಪ್ತಿಯಲ್ಲಿರುವ ಜನರ ಆರೋಗ್ಯದ ಬಗ್ಗೆ ಸಂಪೂರ್ಣ ಅರಿವು ಇರಬೇಕೆಂದು ಸೂಚಿಸಿದರು.

ಕೆ ಎಮ್ ಸಿ ಯ ಡೀನ್ ಡಾ ಶರತ್ ಕೆ ರಾವ್ ಮಾತನಾಡಿ ಸಮುದಾಯದಲ್ಲಿಯ ಡಯಾಬಿಟಿಸ್ ರಕ್ತದೊತ್ತಡ ಕ್ಯಾನ್ಸರ್ ಇನ್ನಿತರ ರೋಗಗಳ ನಿರ್ವಹಣೆಗೆ ಬಗ್ಗೆ ಮತ್ತು ಇಂತಹ ನಿರಂತರ ಕಾರ್ಯಗಾರಗಳ ಅಗತ್ಯತೆಯ ಮಹತ್ವ ವಿವರಿಸಿದರು . ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ ನಾಗರತ್ನ ಶಾಸ್ತಿç ಅವರು ಸಮುದಾಯದಲ್ಲಿಯ ವಿವಿಧ ಆಸಾಂಕ್ರಮಿಕ ಖಾಯಿಲೆಗಳ ಬಗ್ಗೆ ವಿವರಿಸಿ ಅವುಗಳನ್ನು ನಿರ್ವಹಿಸುವ ಬಗ್ಗೆ ಸೂಚನೆಗಳನ್ನು ನೀಡಿದರು. ಸಮುದಾಯ ವೈದ್ಯಕೀಯ ವಿಭಾಗದ ಮುಖ್ಯಸ್ಥ ಡಾ ಅಶ್ವಿನಿ ಕುಮಾರ್ ಅವರು ಸಮುದಾಯ ಆರೋಗ್ಯ ಅಧಿಕಾರಿಗಳ ಕಾರ್ಯವ್ಯಾಪ್ತಿಯಲ್ಲಿರುವ ಸುಮಾರು 5000 ಜನಸಂಖ್ಯೆಯಲ್ಲಿ ಕಂಡುಬರುವ ರೋಗಗಳನ್ನು ಪತ್ತೆ ಹಚ್ಚುವ ಬಗ್ಗೆ ಹಾಗೂ ಆ ಮೂಲಕ ಎಲ್ಲರಿಗೂ ಆರೊಗ್ಯಎನ್ನುವ ಸರಕಾರದ ಆಶಯಗಳನ್ನು ನೆರವೆರಿಸಬೇಕೆಂದು ಅಶಿಸಿದರು ಸಂಪನ್ಮೂಲ ವ್ಯಕ್ತಿಗಳಾಗಿ ಡಾ ಟಿ ಎಮ್ ಎ ಆಸ್ಪತ್ರೆಯ ವೈದ್ಯಕೀಯ ಅಧಿಕ್ಷಕ ಡಾ ಶಶಿಕಿರಣ್, ಡಾ ಸಹನಾ ಶೆಟ್ಟಿ, ಡಾ.ಸೀಮಾ ಶೆಟ್ಟಿ ,ಡಾ.ನವಿನ್ ಸಲಿನ್ಸ್,ಡಾ ಕೃತಿಕಾ , ಡಾ.ರಂಜಿತಾ ಶೆಟ್ಟಿ, ಡಾ.ಚೈತ್ರಾ ರಾವ್, ಡಾ ಸಂಜಯ್ ಕಿಣಿ , ಡಾ ದೀಕ್ಷಿತ್ ಶೆಟ್ಟಿ, ಡಾ ಸ್ನೇಹಾ ದಿಪಕ್ ಮಲ್ಯ , ಡಾ ಈಶ್ವರಿ ಕೆ, ಶ್ರೀಮತಿ ಸುವರ್ಣಾ ಹೆಬ್ಬಾರ್ ಭಾಗವಹಿಸಿದರು.

ಕಸ್ತೂರ್ಭಾ ಆಸ್ಪತ್ರೆಯ ವೈದ್ಯಕೀಯ ಅಧಿಕ್ಷಕ ಡಾ ಅವಿವಾಶ್ ಶೆಟ್ಟಿ ಸ್ವಾಗತಿಸಿದರು. ಡಾ ಮುರಳೀಧರ್ ಕುಲಕರ್ಣೆ, ಡಾ ಅಫ್ರಾಜ್ ಕಾರ್ಯಕ್ರಮ ನಿರ್ವಹಿಸಿದರು.

 
 
 
 
 
 
 
 
 
 
 

Leave a Reply