ಮಣಿಪಾಲ್ ಹಾಸ್ಪಿಟಲ್ಸ್ ನೊಂದಿಗೆ ಕೊಲಂಬಿಯಾ ಏಷ್ಯಾ ಹಾಸ್ಪಿಟಲ್ಸ್ ವಿಲೀನ ಪ್ರಕ್ರಿಯೆ 

ನವದೆಹಲಿ- ಮಣಿಪಾಲ್ ಹಾಸ್ಪಿಟಲ್ಸ್ ನಲ್ಲಿ ಕೊಲಂಬಿಯಾ ಏಷ್ಯಾ ಹಾಸ್ಪಿಟಲ್ಸ್ ವಿಲೀನ . ಇದಕ್ಕಾಗಿ ಈಗಾಗಲೇ  ಒಪ್ಪಂದ ಏರ್ಪಟ್ಟಿದೆ. ಇದು ಎರಡು ಸಾವಿರ ಕೋಟಿ ಮೊತ್ತದ ವ್ಯವಹಾರ ಎಂದು  ಮೂಲಗಳು ತಿಳಿಸಿವೆ.

ಮಣಿಪಾಲ್ ಗ್ರೂಪ್ ಗೆ  ಕೊಲಂಬಿಯಾ ಏಷ್ಯಾ ಹಾಸ್ಪಿಟಲ್ಸ್ ಸೇರಲಿದ್ದು ಅದರ 100% ಪಾಲನ್ನು ಖರೀದಿಸಲು ಮುಂದಾಗಿದೆ‌‌. ಈಗಾಗಲೇ ರೆಗುಲೇಟರಿ ಅಪ್ರೂವಲ್ ಗಳನ್ನು ಪಡೆದುಕೊಳ್ಳಲಾಗಿದೆ. ಉಳಿದ ಪ್ರಕ್ರಿಯೆಗಳು ನಡೆಯುತ್ತಿವೆ. ಕೊಲಂಬಿಯಾ ಏಷ್ಯಾ ಹಾಸ್ಪಿಟಲ್ಸ್ ಸಂಸ್ಥೆ ಉತ್ತಮ ಆರೋಗ್ಯ ಸೇವೆಗೆ ಹೆಸರಾಗಿದೆ. ಆ ಪ್ರಶಂಸೆಯನ್ನು ನಾವು ಗೌರವಿಸುತ್ತೇವೆ ಎಂದು ಮಣಿಪಾಲ್ ಎಜುಕೇಶನ್ ಆ್ಯಂಡ್ ಮೆಡಿಕಲ್ ಗ್ರೂಪ್ ಚೇರ್ಮನ್ ರಂಜನ್ ಪೈ ಹೇಳಿದ್ದಾರೆ.

 
 
 
 
 
 
 
 
 
 
 

Leave a Reply