ಮುನಿಯಾಲು ಆಯುರ್ವೇದ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಏಡ್ಸ್ ದಿನಾಚರಣೆ

ಮಣಿಪಾಲ : ಇಲ್ಲಿನ ಶಿವಳ್ಳಿ ಇಂಡಸ್ಟ್ರಿಯಲ್ ಏರಿಯಾದಲ್ಲಿರುವ ಮುನಿಯಾಲು ಆಯುರ್ವೇದ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಡಿ.1ರಂದು ಏಡ್ಸ್ ದಿನವನ್ನು ಆಚರಿಸಲಾಯಿತು.

ಸಂಸ್ಥೆಯ ಪ್ರಾಂಶುಪಾಲ ಡಾ| ಸತ್ಯನಾರಯಣ ಬಿ ಇವರು ಏಡ್ಸ್ ದಿನಾಚರಣೆ ಮಹತ್ವ ಮತ್ತು ಏಡ್ಸ್ ನಿರ್ಮೂಲನೆಗಾಗಿ ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ವಿವರಿಸಿದರು.

ವೆಸ್ಟ್ ಇಂಡೀಸ್ ವಿಶ್ವವಿದ್ಯಾಲಯದ ಬಯೋಕೆಮಸ್ಟಿ ವಿಭಾಗದ ಮುಖ್ಯಸ್ಥರಾಗಿದ್ದ ಹಾಗೂ ಸಂಶೋಧಕ ಡಾ.ಶಿವಾನಂದ ನಾಯಕ್ ಇವರು ಏಡ್ಸ್ ರೋಗ ಪರೀಕ್ಷೆಗಳ
ಬಗ್ಗೆ ಹಾಗೂ ಇತರ ಪ್ರಯೋಗಾಲಯ ಪರೀಕ್ಷೆಗಳ
ಪ್ರಾಮುಖ್ಯತೆಯ ಬಗ್ಗೆ ಉಪನ್ಯಾಸ
ನೀಡಿದರು.

ಸ್ನಾತಕೋತ್ತರ ವಿದ್ಯಾರ್ಥಿನಿ ಡಾ.ಕೃತಿ
ನಿರೂಪಿಸಿದರು. ಶಿಕ್ಷಕ ವೃಂದ ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.

 
 
 
 
 
 
 
 
 
 
 

Leave a Reply