ಮೂಡುಬೆಳ್ಳೆಯಲ್ಲಿ ಉಚಿತ ಆರೋಗ್ಯ ಮತ್ತು ನೇತ್ರ ತಪಾಸಣಾ ಶಿಬಿರ ಉದ್ಘಾಟನೆ

ಶಿರ್ವ:- ಮೂಡುಬೆಳ್ಳೆ ಲಯನ್ಸ್ ಮತ್ತು ಲಿಯೊ ಕ್ಲಬ್ ಆಶ್ರಯದಲ್ಲಿ ಗಾಂಧೀ ಆಸ್ಪತ್ರೆ ಉಡುಪಿ, ಪ್ರಸಾದ್ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆ, ನೇತ್ರಜ್ಯೋತಿ ಚಾರಿಟೇಬಲ್ ಟ್ರಸ್ಟ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಇದರ ಅಂಧತ್ವ ನಿವಾರಣಾ ಸಂಘ ಉಡುಪಿ ಜಿಲ್ಲೆ, ಆರೋಗ್ಯ ಸಮಿತಿ ಮತ್ತು ಕೆಥೋಲಿಕ್ ಸಭಾ ಸಂತ ಲಾರೆನ್ಸ್ ಚರ್ಚ್ ಮೂಡುಬೆಳ್ಳೆ ಇದರ ಜಂಟಿ ಸಹಭಾಗಿತ್ವದಲ್ಲಿ ರವಿವಾರ ಮೂಡುಬೆಳ್ಳೆ ಲಯನ್ಸ್ ಸಭಾಭವನದಲ್ಲಿ “ಉಚಿತ ಆರೋಗ್ಯ ಮತ್ತು ನೇತ್ರ ತಪಾಸಣಾ ಶಿಬಿರ ಜರುಗಿತು.

ಕಾರ್ಯಕ್ರಮವನ್ನು ಉಡುಪಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ನಾಗಭೂಷಣ ಉಡುಪ ಉದ್ಘಾಟಿಸಿ ಮಾತನಾಡುತ್ತಾ, ಸರಕಾರದ ಸೌಲಭ್ಯಗಳನ್ನು ಶಿಬಿರಗಳ ಮೂಲಕ ಸಂಘ ಸಂಸ್ಥೆಗಳು ಸಾರ್ವಜನಿಕರಿಗೆ ತಲುಪಿಸುವ ಕಾರ್ಯ ಮಾಡುತ್ತಿರುವುದು ಶ್ಲಾಘನೀಯ. ಲಯನ್ಸ್ ಕ್ಲಬ್‌ನ ಸೇವೆ ಅನುಕರಣೀಯ ಎಂದರು. ಸಂತ ಲಾರೆನ್ಸ್ ಚರ್ಚ್ನ ಸಹಾಯಕ ಧರ್ಮಗುರು ರೆ.ಫಾ.ಪೌಲ್ ಲೋಬೊ ಆಶೀರ್ವಚನ ನೀಡಿದರು.  

ವೇದಿಕೆಯಲ್ಲಿ ತಜ್ಞ ವೈದ್ಯ ಉಡುಪಿ ಗಾಂಧೀ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ. ವ್ಯಾಸರಾಜ ತಂತ್ರಿ, ಪ್ರಸಾದ್ ನೇತ್ರಾಲಯದ ಆಡಳಿತ ನಿರ್ದೇಶಕ ಡಾ.ಕೃಷ್ಣಪ್ರಸಾದ್, ಹೃದಯ ರೋಗ ತಜ್ಞ ಡಾ.ಕಿರಣ್ ಕುಮಾರ್ ಎನ್. ಎಲುಬು ಮತ್ತು ಕೀಲು ತಜ್ಞ ಡಾ.ಪ್ರಕಾಶ್ ಭಟ್ ಮರ್ಣೆ, ಚರ್ಮರೋಗ ತಜ್ಞ ಡಾ.ಲೋಕೇಶ್ ರಾವ್ ಉಪಸ್ಥಿತರಿದ್ದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಲಯನ್ಸ್ ಅಧ್ಯಕ್ಷ ವಲೇರಿಯನ್ ನೊರೋನ್ಹಾ ವಹಿಸಿ ಸ್ವಾಗತಿಸಿದರು. ಶಿಬಿರದ ಸಂಯೋಜಕ ಕಟ್ಟಿಂಗೇರಿ ದೇವದಾಸ್ ಹೆಬ್ಬಾರ್ ಪ್ರಾಸ್ತಾವಿಕ ಮಾತುಗಳೊಂದಿಗೆ ಕಾರ್ಯಕ್ರಮ ನಿರೂಪಿಸಿದರು. ಲಯನ್ಸ್ ಕಾರ್ಯದರ್ಶಿ ಜೋಸೆಫ್ ಮಾರ್ಟಿಸ್ ಧನ್ಯವಾದವಿತ್ತರು. 250ಕ್ಕೂ ಅಧಿಕ ಸಾರ್ವಜನಿಕರು ಶಿಬಿರದ ಪ್ರಯೋಜನ ಪಡೆದರು.

 
 
 
 
 
 
 
 
 
 
 

Leave a Reply