ಕೊನೊಗು ಮುಂದಿನ ತಿಂಗಳೊಳಗೆ ಭಾರತಕ್ಕೆ ಕಾಲಿಡಲಿದೆ ಕೊರೋನಾ ಲಸಿಕೆ

ಕೊರೋನಾ ಲಸಿಕೆಗೆ ಬ್ರಿಟನ್ ನಲ್ಲಿ ಅನುಮೋದನೆ ನೀಡಿದ ಬೆನ್ನಲ್ಲೇ ಭಾರತದ ಕೊರೊನಾ ಲಸಿಕೆಯ ಕುರಿತು ಎಐಐಎಂಎಸ್ ನ ನಿರ್ದೇಶಕ ಗುಲೇರಿಯಾ ಅವರು ಮಹತ್ವದ ಮಾಹಿತಿಯೊಂದನ್ನು ಹೇಳಿದ್ದಾರೆ.

ಈ ಕುರಿತು ಮಾಹಿತಿ ನೀಡಿದ ಕೊರೋನಾ ನಿರ್ವಹಣೆಯ ರಾಷ್ಟ್ರೀಯ ಕಾರ್ಯಪಡೆ ಸದಸ್ಯ ಡಾ.ರಣದೀಪ್ ಗುಲೇರಿಯಾ ಅವರು, ಸದ್ಯ ಭಾರತದಲ್ಲಿ ಕೊರೋನಾ ಲಸಿಕೆ ಕೊನೆಯ ಹಂತದ ಪ್ರಯೋಗದಲ್ಲಿದೆ. ಈ ತಿಂಗಳ ಕೊನೆಯಲ್ಲಿ ಅಥವಾ ಮುಂದಿನ ತಿಂಗಳ ಆರಂಭದಲ್ಲಿ ಲಸಿಕೆ ಜನರಿಗೆ ಲಭ್ಯವಾಗಲಿದೆ ಎಂದು ಹೇಳಿದರು.

ಇನ್ನು ಈ ಲಸಿಕೆಗಳು ತುಂಬಾ ಸುರಕ್ಷಿತ ಹಾಗೂ ಉತ್ತಮ ಎಂಬ ಮಾಹಿತಿ ಲಭ್ಯವಿದೆ ಎಂದು ಏಮ್ಸ್ ನಿರ್ದೇಶಕರು ತಿಳಿಸಿದ್ದಾರೆ. ಈಗಾಗಲೇ ಸುಮಾರು 70,000-80,000 ಸ್ವಯಂಸೇವಕರು ಲಸಿಕೆ ಪಡೆದಿದ್ದು, ಅದರಿಂದ ಯಾವುದೇ ದುಷ್ಪರಿಣಾಮ ಕಂಡುಬಂದಿಲ್ಲ ಎಂದು ಗುಲೇರಿಯಾ ತಿಳಿಸಿದ್ದಾರೆ, ಹೀಗೆಂದು ಎಎನ್ ಐ ತನ್ನ ವರದಿಯಲ್ಲಿ ತಿಳಿಸಿದೆ.

 
 
 
 
 
 
 
 
 
 
 

Leave a Reply