ಜೂನ್ 8 ರಂದು ಲಸಿಕಾ ಲಭ್ಯತೆ ವಿವರ

​ಉಡುಪಿ: ಜಿಲ್ಲೆಯಲ್ಲಿಜೂನ್ 8 ರಂದು 45 ವರ್ಷ ಮೇಲ್ಪಟ್ಟ ಸಾರ್ವಜನಿಕರಿಗೆ ಹಾಗೂ ಕೇಂದ್ರ ಸರಕಾರ ಗುರುತಿಸಿರುವ ಮುಂಚೂಣಿ ಕಾರ್ಯಕರ್ತರಿಗೆ ಅಜ್ಜರಕಾಡು ಜಿಲ್ಲಾಆಸ್ಪತ್ರೆಯಲ್ಲಿ (ಸೇಂಟ್ ಸಿಸಿಲಿ ಶಾಲೆ) 200 ಡೋಸ್, ಮಣಿಪಾಲದನಗರ ಪ್ರಾಥಮಿಕಆರೋಗ್ಯಕೇಂದ್ರದಲ್ಲಿ (ಮಾಧವ ಕೃಪಾ ಶಾಲೆ, ಮಣಿಪಾಲ) 100 ಡೋಸ್, ಉಡುಪಿಯನಗರ ಪ್ರಾಥಮಿಕಆರೋಗ್ಯಕೇಂದ್ರದಲ್ಲಿ (ಸರಕಾರಿ ಪ್ರಾಥಮಿಕ ಶಾಲೆ ಆದಿಉಡುಪಿ) 100 ಡೋಸ್ ಹಾಗೂ ಕುಕ್ಕಿಕಟ್ಟೆಯಎಫ್.ಪಿ.ಎ.ಐ ನಲ್ಲಿ (ಇಂದಿರಾನಗರಅನುದಾನಿತ ಹಿರಿಯ ಪ್ರಾಥಮಿಕ ಶಾಲೆ, ಇಂದಿರಾನಗರ) 50 ಡೋಸ್‌ಪ್ರಥಮಡೋಸ್ ಕೋವಿಶೀಲ್ಡ್ ಲಸಿಕೆಯನ್ನು ನೀಡಲಾಗುವುದು.

ರಾಜ್ಯ ಸರಕಾರ ಗುರುತಿಸಿರುವ ಅನುಬಂಧ-1ರಲ್ಲಿರುವಕೊರೋನ ಮುಂಚೂಣಿಕಾರ್ಯಕರ್ತರು ಹಾಗೂ ದುರ್ಬಲ ಗುಂಪಿನ ಫಲಾನುಭವಿಗಳಿಗೆಪ್ರಥಮ ಡೋಸ್ ಕೋವಿಶೀಲ್ಡ್ ಲಸಿಕೆಯನ್ನು ಉಡುಪಿಯ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದ ಹಳೆ ಕಟ್ಟಡದಲ್ಲಿ (ಅಲಂಕಾರ್‌ಥಿಯೇಟರ್ ಹತ್ತಿರ) 200 ಡೋಸ್ ಹಾಗೂ ಕುಕ್ಕಿಕಟ್ಟೆ ಯಎಫ್.ಪಿ.ಎ.ಐ ನಲ್ಲಿ (ಇಂದಿರಾ ನಗರ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ, ಇಂದಿರಾನಗರ) 50 ಡೋಸ್ ಲಸಿಕೆ ನೀಡಲಾಗುವುದು.

45 ವರ್ಷ ಮೇಲ್ಪಟ್ಟ ಸಾರ್ವಜನಿಕರಿಗೆ ಹಾಗೂ ಕೇಂದ್ರ ಸರಕಾರ ಗುರುತಿಸಿರುವ ಮುಂಚೂಣಿ ಕಾರ್ಯಕರ್ತರಿಗೆ 2 ನೇ ಡೋಸ್ ಕೋವಿಶೀಲ್ಡ್ ಲಸಿಕೆಯನ್ನು ಮಣಿಪಾಲದ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ (ಮಾಧವ ಕೃಪಾ ಶಾಲೆ, ಮಣಿಪಾಲ) 100 ಡೋಸ್ ಹಾಗೂ ನಗರದ ಸರಕಾರಿತಾಯಿ ಮತ್ತು ಮಕ್ಕಳ (ಬಿ.ಆರ್.ಎಸ್) ಆಸ್ಪತ್ರೆಯಲ್ಲಿ 100 ಡೋಸ್‌ಅನ್ನು ಮತ್ತು 45 ವರ್ಷ ಮೇಲ್ಪಟ್ಟ ಸಾರ್ವಜನಿಕರಿಗೆ ಹಾಗೂ ಕೇಂದ್ರ ಸರಕಾರ ಗುರುತಿಸಿರುವ ಮುಂಚೂಣಿ ಕಾರ್ಯಕರ್ತರಿಗೆ ಕೋವ್ಯಾಕ್ಸಿನ್ 2 ನೇ  ಡೋಸ್ ಲಸಿಕೆಯನ್ನು ನಗರದ ಸರಕಾರಿ ತಾಯಿ ಮತ್ತು ಮಕ್ಕಳ (ಬಿ.ಆರ್.ಎಸ್) ಆಸ್ಪತ್ರೆಯಲ್ಲಿ200 ಡೋಸ್‌ ಅನ್ನು ನೀಡಲಾಗುವುದು.

ಗ್ರಾಮೀಣ ಪ್ರದೇಶದಲ್ಲಿ ರಾಜ್ಯ ಸರಕಾರ ಗುರುತಿಸಿರುವ ಅನುಬಂಧ-1ರಲ್ಲಿರುವ ಕೊರೋನ ಮುಂಚೂಣಿ ಕಾರ್ಯಕರ್ತರು ಹಾಗೂ ದುರ್ಬಲ ಗುಂಪಿನ ಫಲಾನುಭವಿಗಳು ಮತ್ತು 45 ವರ್ಷ ಮೇಲ್ಪಟ್ಟ ಸಾರ್ವಜನಿಕರು, ಕೇಂದ್ರ ಸರಕಾರ ಗುರುತಿಸಿರುವ ಮುಂಚೂಣಿ ಕಾರ್ಯಕರ್ತರಿಗೆ ಪ್ರಥಮ ಡೋಸ್ ಕೋವಿಶೀಲ್ಡ್ ಲಸಿಕೆ, 2ನೇ ಡೋಸ್ ಕೋವಿಶೀಲ್ಡ್ ಲಸಿಕೆ ಹಾಗೂ ಕೋವ್ಯಾಕ್ಸಿನ್ 2ನೇ ಡೋಸ್ ಲಸಿಕೆ ಪಡೆಯಲು ಹತ್ತಿರದ ಸರಕಾರಿ ಆಸ್ಪತ್ರೆ ಅಥವಾ ಆಶಾ ಕಾರ್ಯಕರ್ತೆಯರನ್ನು ಸಂಪರ್ಕಿಸಿ ಲಸಿಕೆ ಲಭ್ಯತೆಯನ್ನು ಖಚಿತಪಡಿಸಿ ಕೊಂಡು ಜೂನ್ 8 ರಂದು ಲಸಿಕಾ ಕೇಂದ್ರಕ್ಕೆ ಬಂದು ಲಸಿಕೆ ಪಡೆಯಬೇಕು.
ಕೋವಿಶೀಲ್ಡ್ ಮೊದಲ ಡೋಸ್ ಲಸಿಕೆ ಪಡೆದು 84 ದಿನಗಳು ಮೀರಿದವರು 2ನೇ ಡೋಸ್ ಕೋವಿಶೀಲ್ಡ್ ಲಸಿಕೆ ಪಡೆಯಲು ಹಾಗೂ ಕೋವ್ಯಾಕ್ಸಿನ್ ಪ್ರಥಮಡೋಸ್ ಲಸಿಕೆ ಪಡೆದು 6 ವಾರ ಮೀರಿದವರು ಕೋವ್ಯಾಕ್ಸಿನ್ 2ನೇ ಡೋಸ್ ಲಸಿಕೆ ಪಡೆಯಲು ಅರ್ಹರಿರುತ್ತಾರೆ. ಜಿಲ್ಲೆಯಲ್ಲಿ ಕೋವ್ಯಾಕ್ಸಿನ್‌ ಪ್ರಥಮ ಡೋಸ್ ಲಭ್ಯವಿರುವುದಿಲ್ಲ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ನಾಗಭೂಷಣ ಉಡುಪ ಪ್ರಕಟಣೆಯಲ್ಲಿ ತಿಳಿಸಿದ್ದಾರೆ
 
 
 
 
 
 
 
 
 
 
 

Leave a Reply