ಮೇ 21 ರಂದು ನಗರ ಪ್ರದೇಶದ ಸರ್ಕಾರಿ ಆಸ್ಪತ್ರೆಗಳಲ್ಲಿ 45 ವರ್ಷ ಮೇಲ್ಪಟ್ಟವರ ಲಸಿಕೆ ಬಗ್ಗೆ ಮಾಹಿತಿ 

ಮೇ 21 ರಂದು ನಗರ ಪ್ರದೇಶದ ಸರ್ಕಾರಿ ಆಸ್ಪತ್ರೆಗಳಲ್ಲಿ 45 ವರ್ಷ ಮೇಲ್ಪಟ್ಟವರು ಪ್ರಥಮ ಡೋಸ್  ಕೋವಿಶೀಲ್ಡ್ ಲಸಿಕೆ ಹಾಗೂ ಕೋವಿಶೀಲ್ಡ್ ಮೊದಲ ಡೋಸ್ ಲಸಿಕೆ ಪಡೆದು 84 ದಿನಗಳು ಪೂರ್ಣಗೊಂಡು , 2ನೇ ಡೋಸ್ ಲಸಿಕೆ ಪಡೆಯಲು ಬಾಕಿ ಇರುವವರಿಗೆ ನಗರ ಪ್ರಾಥಮಿಕ ಆರೋಗ್ಯ ಕೇಂದ್ರ ಉಡುಪಿಯಲ್ಲಿ (100 ಡೋಸ್), ನಗರ ಪ್ರಾಥಮಿಕ ಆರೋಗ್ಯ ಕೇಂದ್ರ ಮಣಿಪಾಲದಲ್ಲಿ (100 ಡೋಸ್), ಜಿಲ್ಲಾಆಸ್ಪತ್ರೆಅಜ್ಜರಕಾಡುಉಡುಪಿಯಲ್ಲಿ( ಸೇಂಟ್ ಸಿಸಿಲಿ ಶಾಲೆ 250 ಡೋಸ್) ಹಾಗೂ ಸರಕಾರಿ ತಾಯಿ ಮತ್ತು ಮಕ್ಕಳ (ಬಿ.ಆರ್.ಎಸ್) ಆಸ್ಪತ್ರೆ, ಉಡುಪಿಯಲ್ಲಿ (100 ಡೋಸ್) ನೀಡಲಾಗುವುದು. 
ಅರ್ಹ ಫಲಾನುಭವಿಗಳು ಆಸ್ಪತ್ರೆಯನ್ನು ಸಂಪರ್ಕಿಸಿ ಲಸಿಕೆ ಲಭ್ಯತೆಯನ್ನು ಖಚಿತಪಡಿಸಿಕೊಂಡು ಲಸಿಕಾ ಕೇಂದ್ರಕ್ಕೆ ಬಂದು ಲಸಿಕೆ ಪಡೆಯುಬಹುದಾಗಿದೆ ಎಂದುಜಿಲ್ಲಾಆರೊಗ್ಯ ಮತ್ತು ಕು.ಕ ಇಲಾಖೆ ಪ್ರಕಟಣೆ ತಿಳಿಸಿದೆ.
 
 
 
 
 
 
 
 
 
 
 

Leave a Reply