ಕಸ್ತೂರ್ಬಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ಮಣಿಪಾಲದಲ್ಲಿ ಬದುಕುಳಿದವರ ಪುನಶ್ಚೇತನ ಸೌಕರ್ಯಗಳ ಉದ್ಘಾಟನೆ 

ಮಣಿಪಾಲ: ಕಸ್ತೂರ್ಬಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಕ್ಯಾನ್ಸರ್ ಶಸ್ತ್ರಚಿಕಿತ್ಸಾ ವಿಭಾಗವು, ಮಣಿಪಾಲ ಸಮಗ್ರ ಕ್ಯಾನ್ಸರ್ ಆರೈಕೆ ಕೇಂದ್ರದ ಸಹಭಾಗಿತ್ವದಲ್ಲಿ ದೊಡ್ಡ ಕರುಳಿನ ಕ್ಯಾನ್ಸರ್ ಕುರಿತು ನಿರಂತರ ವೈದ್ಯಕೀಯ ಶಿಕ್ಷಣ ಕಾರ್ಯಕ್ರಮ ನಡೆಸಲಾಯಿತು. ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಮಾಹೆ ಸಹ ಕುಲಾಧಿಪತಿ ಡಾ.ಎಚ್.ಎಸ್. ಬಲ್ಲಾಳ್, ಡಾ.ಪಿ.ಎಲ್.

ಎನ್.ಜಿ ರಾವ್ ಸಹ ಉಪಕುಲಪತಿಗಳು ಮಾಹೆ ಮಣಿಪಾಲ, ಡಾ. ಶರತ್ ಕುಮಾರ್ ರಾವ್, ಡೀನ್ ಕೆಎಂಸಿ, ಕಸ್ತೂರ್ಬಾ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ಅವಿನಾಶ್ ಶೆಟ್ಟಿ, ಮಣಿಪಾಲ ಸಮಗ್ರ ಕ್ಯಾನ್ಸರ್ ಅರೈಕೆ ಕೇಂದ್ರ ಸಂಯೋಜಕ ಡಾ.ನವೀನ್ ಎಸ್ ಸಲಿನ್ಸ್ ಮತ್ತು ಕ್ಯಾನ್ಸರ್ ಶಸ್ತ್ರಚಿಕಿತ್ಸಾ ವಿಭಾಗದ ಮುಖ್ಯಸ್ಥ ಡಾ.ನವೀನ ಕುಮಾರ್ ಉಪಸ್ಥಿತರಿದ್ದರು.

ಡಾ. ಎಚ್ ಎಸ್ ಬಲ್ಲಾಳ್ ದೊಡ್ಡ ಕರುಳಿನ ಕ್ಯಾನ್ಸರ್ ನಿಂದ ಬದುಕುಳಿದವರ ಪುನಶ್ಚೇತನ ಸೌಕರ್ಯಗಳ ಕಾರ್ಯಕ್ರಮವನ್ನು ಉದ್ಘಾಟಿಸಿದರು ಮತ್ತು ಗುಣಮಟ್ಟದ ಬಗ್ಗೆ ಯಾವುದೇ ರಾಜಿ ಮಾಡಿಕೊಳ್ಳದೆ ಅತ್ಯುತ್ತಮ ಸೇವೆಗಳನ್ನು ಒದಗಿಸಲು ಕಸ್ತೂರ್ಬಾ ಆಸ್ಪತ್ರೆ ಬದ್ಧವಾಗಿದೆ ಎಂದು ಅವರು ಹೇಳಿದರು. ಈ ರೀತಿಯ ಮುಂದು ವರಿದ ವೈದ್ಯಕೀಯ ಶಿಕ್ಷಣ ಕಾರ್ಯಕ್ರಮಗಳನ್ನು ಆಯೋಜಿಸುದರಿಂದ ಶಸ್ತ್ರಚಿಕಿತ್ಸಾ ತಂತ್ರಜ್ಞಾನ ಮತ್ತು ತಂತ್ರಗಳಲ್ಲಿ ಇತ್ತೀಚಿನ ಪ್ರಗತಿಯನ್ನು ಅರಿಯಲು ಸಹಕಾರಿಯಾಗಿದೆ.

ಇಂತಹ ಪುನಶ್ಚೇತನ ಸೌಕರ್ಯಗಳಿಂದ, ಚಿಕಿತ್ಸೆಯ ತಡವಾದ ಪರಿಣಾಮಗಳು, ಕುಟುಂಬದ ಯೋಗಕ್ಷೇಮ ಮತ್ತು ಕ್ಯಾನ್ಸರ್ ರೋಗಿಗಳ ಜೀವನಶೈಲಿಯ ಬದಲಾವಣೆಗಳನ್ನು ಅರಿತು ರೋಗಿಗಳಿಗೆ ಸಹಾಯ ಮಾಡ ಲಾಗುತ್ತದೆ. ಇದರಿಂದ ಕ್ಯಾನ್ಸರ್ ರೋಗದಿಂದ ಬದುಕುಳಿದವರು ಒಟ್ಟಿಗೆ ಸೇರುವುದು ಮಾತ್ರವಲ್ಲದೆ ಅವರ ಪ್ರೇರಣೆ, ಅನುಭವಗಳನ್ನು ಹಂಚಿಕೊಳ್ಳುವುದು ಮತ್ತು ಹೊಸದಾಗಿ ಪತ್ತೆಹಚ್ಚಿದ ಕ್ಯಾನ್ಸರ್ ರೋಗಿಗಳಿಗೆ ಬೆಂಬಲ ನೀಡಿದಂತಾಗುತ್ತದೆ.  

ಗೌರವಾನ್ವಿತ ಅತಿಥಿಗಳಾದ ಡಾ. ಪಿ.ಎಲ್.ಎನ್.ಜಿ ರಾವ್ ಮಾತನಾಡಿ, ಜೀವನಶೈಲಿಯ ಬದಲಾವಣೆ ಯಿಂದಾಗಿ ದೊಡ್ಡ ಕರುಳಿನ ಕ್ಯಾನ್ಸರ್ ದಕ್ಷಿಣ ಏಷ್ಯಾದಲ್ಲಿ ಸಾಮಾನ್ಯವಾಗಿದೆ ಮತ್ತು ಎಲ್ಲಾ ವಯಸ್ಸಿನ ಜನರಲ್ಲಿ ಇದನ್ನು ಕಾಣಬಹುದು. ಈ ರೀತಿಯ ವೈದ್ಯಕೀಯ ಶಿಕ್ಷಣ ಕಾರ್ಯಕ್ರಮಗಳು ಉತ್ತಮ ಶಸ್ತ್ರಚಿಕಿತ್ಸಕರನ್ನಾಗಿ ಮಾಡಲು ಸಹಾಯ ಮಾಡುತ್ತದೆ.

ಕ್ಯಾನ್ಸರ್ ಗಳಲ್ಲಿ ದೊಡ್ಡ ಕರುಳಿನ ಕ್ಯಾನ್ಸರ್ 3 ನೇ ಸಾಮಾನ್ಯ ಕ್ಯಾನ್ಸರ್ ಆಗಿದೆ ಮತ್ತು 2020 ರಲ್ಲಿ ಬಿಡುಗಡೆಯಾದ ವಿಶ್ವ ಅರೋಗ್ಯ ಸಂಸ್ಥೆಯ ಮಾಹಿತಿಯ ಪ್ರಕಾರ ಮರಣ ಪ್ರಮಾಣದಲ್ಲಿ ದೊಡ್ಡ ಕರುಳಿನ ಕ್ಯಾನ್ಸರ್ ಎರಡನೇ ಸ್ಥಾನದಲ್ಲಿದೆ. ಮಾರ್ಚ್ ತಿಂಗಳು ದೊಡ್ಡ ಕರುಳಿನ ಕ್ಯಾನ್ಸರ್ ಜಾಗೃತಿ ತಿಂಗಳು ಆದ ಕಾರಣ ನಿರಂತರ ವೈದ್ಯಕೀಯ ಶಿಕ್ಷಣ ಪಡೆಯಲು ಉತ್ತಮ ಸಮಯವಾಗಿದೆ.  

ಈ ಕಾರ್ಯಕ್ರಮದಲ್ಲಿ ದೊಡ್ಡ ಕರುಳಿನ ಕ್ಯಾನ್ಸರ್ ಆರೈಕೆಯಲ್ಲಿನ ಇತ್ತೀಚಿನ ಚಿಕಿತ್ಸಾ ವಿಧಾನಗಳ ಬಗ್ಗೆ ಚರ್ಚಿಸ ಲಾಯಿತು. ಕ್ಯಾನ್ಸರ್ ಶಸ್ತ್ರಚಿಕಿತ್ಸೆ, ಕೀಮೋಥೆರಪಿ, ರೇಡಿಯೊಥೆರಪಿ ಮತ್ತು ಪ್ರಶಾಮಕ ಮತ್ತು ಸಹಾಯಕ ಆರೈಕೆ ವಿಭಾಗದ, 6 ಕ್ಯಾನ್ಸರ್ ಕೇಂದ್ರಗಳ 28 ವೈದ್ಯರು ಭಾಗವಹಿಸಿದರು. ಮುಖ್ಯ ಟಿಪ್ಪಣಿಯನ್ನು ಮುಂಬೈನ ಟಾಟಾ ಸ್ಮಾರಕ ಆಸ್ಪತ್ರೆಯ, ಕರುಳಿನ ಕ್ಯಾನ್ಸರ್ ಮತ್ತು ರೊಬೊಟಿಕ್ ಸರ್ಜನ, ಪ್ರೊಫೆಸರ್ ಡಾ. ಅವನಿಶ್ ಸಕ್ಲಾನಿ ಅವರು ನೀಡಿದರು.

ನಿರಂತರ ವೈದ್ಯಕೀಯ ಶಿಕ್ಷಣ ಕಾರ್ಯಕ್ರಮದಲ್ಲಿ ಉಡುಪಿ, ಮಂಗಳೂರು, ಶಿವಮೊಗ್ಗ, ದಾವಣಗೆರೆ, ಉತ್ತರ ಕನ್ನಡ ಮತ್ತು ಕೊಡಗು ಜಿಲ್ಲೆಗಳಿಂದ 150 ಕ್ಕೂ ಹೆಚ್ಚು ವೈದ್ಯರು ಭಾಗವಹಿಸಿದ್ದರು.  

ಕಳೆದ ಎರಡು ವರ್ಷಗಳಲ್ಲಿ ಕಸ್ತೂರ್ಬಾ ಆಸ್ಪತ್ರೆಯ ಕ್ಯಾನ್ಸರ್ ಶಸ್ತ್ರಚಿಕಿತ್ಸಾ ವಿಭಾಗದಿಂದ ಸುಮಾರು 200 ಕರುಳಿನ ಕ್ಯಾನ್ಸರ್ ಸಂಬಂಧಿತ ಶಸ್ತ್ರಚಿಕಿತ್ಸೆಗಳು ನಡೆದಿವೆ ಎಂದು ಡಾ.ನವೀನ್ ಕುಮಾರ್ ಎ ಎನ್ ತಮ್ಮ ಅವಲೋಕನದಲ್ಲಿ ತಿಳಿಸಿದರು. ಪ್ರಸ್ತುತ ಹೆಚ್ಚಿನ ಕರುಳಿನ ಕ್ಯಾನ್ಸರ್ ಶಸ್ತ್ರಚಿಕಿತ್ಸೆಗಳನ್ನು ಲ್ಯಾಪರೊಸ್ಕೋಪಿಕ (ಕೀ ಹೋಲ್ ಸರ್ಜರಿ) ಮೂಲಕ ನಡೆಸಲಾಗುತ್ತದೆ.

ಇದರಿಂದ ರೋಗಿಗಳು ವೇಗವಾಗಿ ಚೇತರಿಸಿಕೊಳ್ಳುತ್ತಾರೆ. ಹೈಪರ್ಥರ್ಮಿಕ್ ಇಂಟ್ರಾಪೆರಿಟೋನಿಯಲ್ ಕೀಮೋಥೆರಪಿ (ಹೈಪೆಕ್) ಶಸ್ತ್ರಚಿಕಿತ್ಸೆಗಳು ಮತ್ತು ಶ್ವಾಸಕೋಶ ಮತ್ತು ಯಕೃತ್ತಿಗೆ ಕರುಳಿನ ಕ್ಯಾನ್ಸರ್ ನಿಂದ ಹರಡಿದ ಸಂಕೀರ್ಣ ಶಸ್ತ್ರಚಿಕಿತ್ಸೆಗಳನ್ನು ಕ್ಯಾನ್ಸರ್ ಶಸ್ತ್ರಚಿಕಿತ್ಸಾ ವಿಭಾಗವು ನಿರ್ವಹಿಸಿದೆ. ಡಾ. ಶರತ್ ಕುಮಾರ್ ರಾವ್ ಅವರು ಸಭೆಯನ್ನು ಸ್ವಾಗತಿಸಿದರು ಮತ್ತು ಡಾ ಅವಿನಾಶ್ ಶೆಟ್ಟಿ ಅವರು ವಂದಿಸಿದರು. 

 
 
 
 
 
 
 
 
 

Leave a Reply