ಸ್ತನ ಕ್ಯಾನ್ಸರ್, ಅಸಾಂಕ್ರಮಿಕ ರೋಗಗಳ ತಪಾಸಣಾ ಶಿಬಿರ

ಜಿಲ್ಲಾ ಆರೊಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಉಡುಪಿ ಮತ್ತು ಜಿಲ್ಲಾ ಸರ್ವೇಕ್ಷಣಾ ಘಟಕ ಎನ್ ಸಿ ಡಿ ವಿಭಾಗ ಜಂಟಿಯಾಗಿ ಸಮುದಾಯ ವೈದ್ಯಕೀಯ ವಿಬಾಗ ಕೆ ಎಂ ಸಿ ಮಣಿಪಾಲ ಇವರ ಸಹಯೋಗದೋದಿಗೆ ಉಚಿತ ಸ್ತನ ಕ್ಯಾನ್ಸರ್ ಮತ್ತು ಅಸಾಂಕ್ರಮಿಕ ರೋಗಗಳ ತಪಾಸಣಾ ಶಿಬಿರ ನಡೆಯಿತು.

ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ.ನಾಗಭೂಷಣ್ ಉಡುಪ ಅವರು ಶಿಬಿರವನ್ನು ಉದ್ಘಾಟಿಸಿ ಜನರ ಬದಲಾಗುತ್ತಿರುವ ವಾತಾವರಣ, ಆಹಾರ ಪದ್ಧತಿ, ಜೀವನ ಶೈಲಿಗಳ ಈ ಸಂದರ್ಭದಲ್ಲಿ ಇಂತಹ ಕ್ಯಾನ್ಸರ್ ತಪಾಸಣಾ ಶಿಬಿರಗಳ ಅಗತ್ಯತೆಯನ್ನು ವಿವರಿಸಿದರು.

ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ನಾಗರತ್ನ ಅವರು ಈ ಸಂದರ್ಭದಲ್ಲಿ ಮಹಿಳೆಯರ ಆರೋಗ್ಯದ ಬಗ್ಗೆ ಮಾಹಿತಿ ನೀಡಿದರು. ಉಡುಪಿ ತಾಲೂಕು ಆರೊಗ್ಯಧಿಕಾರಿ ಡಾ.ವಾಸುದೇವ ಉಪಾದ್ಯಾಯ ಮತ್ತು ಆರೋಗ್ಯಾಧಿಕಾರಿ ಡಾ.ಸಾತ್ವಿಕ್ ಉಪಸ್ಥಿತರಿದ್ದರು.

ಸಮುದಾಯ ವೈದ್ಯಕೀಯ ವಿಭಾಗದ ಪ್ರಾದ್ಯಾಪಕಿ ಡಾ.ಅಫ್ರೋಜ್ ಶಿಬಿರದ ಉದ್ದೇಶ ಹಾಗೂ 30ವರ್ಷದ ನಂತರ ಪ್ರತಿಯೊಬ್ಬ ಮಹಿಳೆಯರು ಇಂತಹ ಉಚಿತ ಶಿಬಿರದ ಸದುಪಯೋಗ ಪಡೆದುಕೊಳ್ಳಬೇಕೆಂದು ಮನವಿ ಮಾಡಿದರು.

 
 
 
 
 
 
 
 
 
 
 

Leave a Reply