ಕೆ.ಎಂ.ಸಿ ಮಣಿಪಾಲದ “ಫ್ಸಾಲಿಯೇಟೀವ್ ಕೇರ್ ” ವಿಭಾಗದ ಪ್ರಯೋಜನವನ್ನು ಹೆಚ್ಚಿನ ರೋಗಿಗಳು ಪಡೆಯುವಂತಾಗಬೇಕು~ ಡಾI ನವೀನ್ ಸಾಲಿನ್ಸ್

ಮಣಿಪಾಲ – ಕೆ.ಎಂ.ಸಿ ಮಣಿಪಾಲದಲ್ಲಿ ಕ್ಯಾನ್ಸರ್, ಕಿಡ್ನಿ ಫೆಲ್ಯೂರ್, ಮುಂದುವರೆದ ಮೆದುಳಿನ ಕಾಯಿಲೆ ಇನ್ನಿತರ ಕೊನೆಯ ಹಂತದ ಕಾಯಿಲೆಗಳ ಚಿಕಿತ್ಸೆಯಲ್ಲಿರುವ ರೋಗಿಗಳ ಸ್ಥಿತಿ ಚಿಂತಾಜನಕ ಅವರನ್ನು ಅನೇಕ ವಷ೯ಗಳಿಂದ ಆರೈಕೆ ಮಾಡುತ್ತಿರುವ ಮನೆಯವರ ಪರಿಸ್ಥಿತಿ ಹೇಳತೀರದು ಇಂತಹ ರೋಗಿಗಳ ಕಾಳಜಿಗಾಗಿ ಇರುವ ವಿಭಾಗವೇ “ಫ್ಸಾಲಿಯೇಟೀವ್ ಕೇರ್ ” ವಿಭಾಗ ಇದರ ಪ್ರಯೋಜನವನ್ನು ಹೆಚ್ಚಿನ ರೋಗಿಗಳು ಪಡೆಯುವಂತಾಗಬೇಕು ಎಂದು ವಿಭಾಗದ ಮುಖ್ಯಸ್ಥರಾದ ಡಾI ನವೀನ್ ಸಾಲಿನ್ಸ್ ಕರೆ ನೀಡಿದರು.
ಅವರು ಜು.29 ರಂದು ಮಣಿಪಾಲ ರೋಟರಿ ಸದಸ್ಯರೊಂದಿಗೆ ನಡೆದ ಸಂವಾದ ಕಾಯ೯ಕ್ರಮದಲ್ಲಿ ಮಾಹಿತಿ ನೀಡಿದರು. ಕ್ಯಾನ್ಸರ್ ಮುಂತಾದ ದೀಘ೯ ಕಾಲದ ಚಿಕಿತ್ಸೆಯಲ್ಲಿರುವ ರೋಗಿಗಳು ಹಾಗೂ ಮನೆಯವರ ಮನೋಸ್ಥಯ೯ವನ್ನು ಹೆಚ್ಚಿಸಲು ಅನೇಕ ಜನ ಮನೋ ಸಾಮಾಜಿಕ ಆಪ್ತ ಸಮಾಲೋಚಕರ ಅಗತ್ಯತೆಯ ಕುರಿತು ತಿಳಿಸಿದರು.
ರೋಟರಿ ಕ್ಲಬ್ ಮಣಿಪಾಲದ ಅಧ್ಯಕ್ಷ ಡಾI ವಿರೂಪಾಕ್ಷ ದೇವರಮನೆ ರೋಟರಿ ವತಿಯಿಂದ ಈ ವಷ೯ ನಡೆಯುವ ಚಟುವಟಿಕೆಯ ಕುರಿತು ತಿಳಿಸಿದರು. ಡಾI ಗಿರಿಜಾ, ಡಾI ಹೆಚ್.ಜೆ ಗೌರಿ ಹಾಗೂ ಇನ್ನಿತರ ಹಲವಾರು ಜನ ರೋಟರಿ ಸದಸ್ಯರು ಭಾಗವಹಿಸಿದ್ದರು.
ಡಾ|ವಿನಯ್ ವೆಂಕಟೇಶ್ ಡಾ|ಅಚ೯ನಾ ಮಕ್ಕಳ.ಕ್ಯಾನ್ಸರ್ ಚಿಕಿತ್ಸೆ ಪ್ರಗತಿ ಕುರಿತು ಮಾತನಾಡಿದರು.
 
 
 
 
 
 
 
 
 
 
 

Leave a Reply