ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯಲ್ಲಿ ಶನಿವಾರದ ಹೊರರೋಗಿ ಸೇವೆಗಳು ಮಧ್ಯಾಹ್ನದವರಗೆ ಮಾತ್ರ

ಮಣಿಪಾಲ 22ನೇ ಏಪ್ರಿಲ್ 2021 :ಕಸ್ತೂರ್ಬಾ ಆಸ್ಪತ್ರೆ ಮಣಿಪಾಲದ ವೈದ್ಯಕೀಯ ಅಧೀಕ್ಷಕರಾದ ಡಾ. ಅವಿನಾಶ ಶೆಟ್ಟಿ ಅವರು, “24ನೇ ಏಪ್ರಿಲ್2021ರಿಂದ ಜಾರಿಗೆ ಬರುವಂತೆ, ಎಲ್ಲಾ ಶನಿವಾರ ಹೊರರೋಗಿ ಸೇವೆಗಳು ಬೆಳಿಗ್ಗೆ 9.00 ರಿಂದ ಮಧ್ಯಾಹ್ನ 1.00 ರವರೆಗೆ ಅರ್ಧ ದಿನ ಮಾತ್ರ ಕಾರ್ಯನಿರ್ವಹಿಸಲಿವೆ. ಇದು ಸರ್ಕಾರದ ವಾರಾಂತ್ಯದ ಕರ್ಫ್ಯೂ ಆದೇಶ ಇರುವವರೆಗೆ ಮುಂದುವರಿಯುತ್ತದೆ. ” ಎಂದು ತಿಳಿಸಿದ್ದಾರೆ.

ಉಳಿದಂತೆ ಇತರ ಎಲ್ಲಾ ಕೆಲಸದ ದಿನಗಳಲ್ಲಿ, ಹೊರರೋಗಿ ಸೇವೆಗಳು ಮೊದಲಿನಂತೆ ಬೆಳಿಗ್ಗೆ 8.00 ರಿಂದ ಸಂಜೆ 4.00 ರವರೆಗೆ ಕಾರ್ಯನಿರ್ವಹಿಸಲಿದೆ. ಆದಾಗ್ಯೂ, ತುರ್ತು ಸೇವೆಗಳು ಎಂದಿನಂತೆ ಎಲ್ಲಾ ದಿನಗಳಲ್ಲಿ 24 * 7 ಲಭ್ಯವಿರುತ್ತವೆ.

 
 
 
 
 
 
 
 
 
 
 

Leave a Reply