ಉಡುಪಿ ಜಿಲ್ಲಾ ಕೋವಿಡ್ ಸಹಾಯವಾಣಿ

ಉಡುಪಿ : ಜಿಲ್ಲೆಯಲ್ಲಿ ಕೋವಿಡ್ -19 ನಿಯಂತ್ರಣಕ್ಕೆ ಸಂಬಂಧಿಸಿ ಈಗಾಗಲೇ ಕರೋನಾ ಸೋಂಕಿತರನ್ನು ಕಡ್ಡಾಯವಾಗಿ ಸಾಂಸ್ದಿಕ ಕ್ವಾರಂಟೈನ್ ಗೆ ಸ್ದಳಾಂತರ, ಸೋಂಕಿತರ ಮನೆಯನ್ನು ಸೀಲ್ ಡೌನ್ ಮಾಡುವುದು ಹಾಗೂ ಮತ್ತಿತ್ತರ ಮುಂಜಾಗೃತ ಕ್ರಮಗಳಿಗೆ ಸಂಬಂಧಿಸಿ ಆದೇಶ ಹೊರಡಿಸಲಾಗಿದೆ.

ಅದಾಗ್ಯೂ ಕರೋನಾ ಭಾಧಿತ ವ್ಯಕ್ತಿಗಳು ಕೋವಿಡ್ -19 ರ ನಿಯಮಗಳನ್ನು ಉಲ್ಲಂಘಿಸಿ, ನಿರಾಯಸವಾಗಿ ಓಡಾಡುತ್ತಿರುವ ಪ್ರಕರಣಗಳು ಕಂಡುಬರುತ್ತಿದ್ದು, ಇದು ಜಿಲ್ಲೆಯಲ್ಲಿ ಮತ್ತಷ್ಟು ಕೋವಿಡ್ ಪಾಸಿಟಿವ್ ಪ್ರಕರಣಗಳು ಹೆಚ್ಚಾಗಲು ಕಾರಣವಾಗಿರುತ್ತದೆ.

ಆದುದರಿಂದ ಈ ಬಗ್ಗೆ ಜಿಲ್ಲೆಯ ಜನರಲ್ಲಿ ಅರಿವು ಮೂಡಿಸಲು ಹಾಗೂ ಸಾರ್ವಜನಿಕರೇ ಸ್ವಯಂ ಕೋವಿಡ್ – 19 ನ್ನು ನಿಯಂತ್ರಿಸುವಲ್ಲಿ ಜಾಗೃತರನ್ನಾಗಿಸುವ ನಿಟ್ಟಿನಲ್ಲಿ ಇನ್ನು ಮುಂದೆ ಜಿಲ್ಲೆಯಲ್ಲಿ ಕರೋನಾ ಭಾದಿತ ವ್ಯಕ್ತಿಗಳು ಕೋವಿಡ್ 19 ನಿಯಮಗಳನ್ನು ಉಲ್ಲಂಘಿಸಿ ಓಡಾಟ ನಡೆಸುವುದು ಕಂಡುಬಂದಲ್ಲಿ ಆ ಬಗ್ಗೆ ಸಾರ್ವಜನಿಕರು ಮಾಹಿತಿಯನ್ನು ಜಿಲ್ಲಾಡಳಿತದಿಂದ ಸ್ದಾಪಿಸಿರುವ ಕೋವಿಡ್ -19 ಸಹಾಯವಾಣಿಗೆ ಕರೆಮಾಡಿ ದೂರನ್ನು ಸಲ್ಲಿಸಬಹುದು.

ಅಲ್ಲದೇ, ಕೋವಿಡ್ ಕೇರ್ ಸೆಂಟರ್, ಹೋಮ್ ಐಸೋಲೇಶನ್ ಹಾಗೂ ಕೋವಿಡ್ -19ಗೆ ಸಂಬಂಧಿಸಿದ ಇನ್ನಿತರ ಮಾಹಿತಿಯನ್ನು ಪಡೆಯಲು ಅಥವಾ ಯಾವುದಾದರು ದೂರುಗಳನ್ನು ಸಲ್ಲಿಸಲು ಸಾರ್ವಜನಿಕರು ಕೋವಿಡ್ -19 ಸಹಾಯವಾಣಿ ಸಂಖ್ಯೆ : 96639 57222 ಸೇವೆಯನ್ನು ಪಡೆಯುವಂತೆ ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ ತಿಳಿಸಿದ್ದಾರೆ.

 
 
 
 
 
 
 
 
 
 
 

Leave a Reply