ಕಾರ್ಕಳ : ಪ್ರಾಥಮಿಕ ಫಿಸಿಯೋ ಥೆರಪಿ ಚಿಕಿತ್ಸೆ ಉದ್ಘಾಟನೆ ಕಾರ್ಯಕ್ರಮ

ಕಾರ್ಕಳ : ಆದಿತ್ಯ ಟ್ರಸ್ಟ್ (ರಿ )ನಕ್ರೆ, ಕಾರ್ಕಳ, ಲಯನ್ಸ್ ಕ್ಲಬ್ ನಕ್ರೆ, ಯುವ ಸಂಗಮ ನಕ್ರೆ ಇವರ ಸಂಯುಕ್ತ ಆಶ್ರಯದಲ್ಲಿ ಪ್ರಾಥಮಿಕ ಫಿಸಿಯೋ ಥೆರಪಿ ಚಿಕಿತ್ಸೆ ಉದ್ಘಾಟನೆ ಕಾರ್ಯಕ್ರಮ ಕಾರ್ಕಳ ನಕ್ರೆ ಯುವಸಂಗಮ ಕೇಂದ್ರದಲ್ಲಿ ನಡೆಯಿತು.

ಕಾರ್ಯಕ್ರಮದ ಉದ್ಘಾಟನೆಯನ್ನು ದೀಪ ಬೆಳಗಿಸುವುದರ ಮೂಲಕ ನಿವೃತ್ತ ಡೆಪ್ಯೂಟಿ ತಹಶೀಲ್ದಾರ್ ಶ್ರೀ ಕೆ. ಪಿ. ನಾಯ್ಕ್ ಮಾಡಿದರು. ಅವರು ಮಾತನಾಡುತ್ತ ಭಾರತದ ಸಂವಿಧಾನದಲ್ಲಿ ಪ್ರಜೆಗಳಿಗಿರುವ ಹಕ್ಕುಗಳು, ಅದನ್ನು ಉಪಯೋಗಿಸಿಕೊಂಡು ಹೇಗೆ ಬದುಕಬೇಕು ಎಂಬುದನ್ನು ವಿವರಿಸಿ ಹೇಳಿದರು. 

ಆದಿತ್ಯ ಟ್ರಸ್ಟಿನ ಅಧ್ಯಕ್ಷ ಮಂಜುನಾಥ್ ತೆಂಕಿಲ್ಲಾಯ ಇವರು ವಿಕಲ ಚೇತನರ ಅಧಿನಿಯಮ 2016ರಲ್ಲಿ ವಿವರಿಸಿದ ಸಾಮಾಜಿಕ ನ್ಯಾಯ, ಸಮಾನ ಅವಕಾಶ, ಪೂರ್ಣ ಭಾಗವಹಿಸುವಿಕೆಯ ಬಗ್ಗೆ ಮಾತನಾಡಿದರು. ಎಡ್ಮಂಡ್ ಡಿಸೋಜಾ, ಫಿಸಿಯೋ ಥೇರಪಿಸ್ಟ್, ಇವರು ಫಿಸಿಯೋ ಥೆರಪಿಯಿಂದ ವಿಕಲ ಚೇತನರಿಗೆ ಆಗುವ ಉಪಯೋಗ, ವಿಧಾನಗಳ ಬಗ್ಗೆ ವಿವರಿಸಿ ಹೇಳಿದರು.

 

ಉಮೇಶ್ ಸೂಡ ಮರಾಠಿ ಸಂಘದ ಮಾಜಿ ಅಧ್ಯಕ್ಷರು ಇವರು ಗ್ರಾಮೀಣ ಭಾಗದ ವಿಕಲ ಚೇತನರಿಗೆ ಇಂಥ ಸೌಲಭ್ಯ ಒದಗಿಸಿ ಕೊಡುವಲ್ಲಿ ಆದಿತ್ಯ ಟ್ರಸ್ಟ್ ಉತ್ತಮ ಕಾರ್ಯಕ್ರಮವನ್ನು ಮಾಡುತ್ತಿದೆ ಎಂದರು. ಬಡ ವಿಕಲ ಚೇತನರಿಗೆ ಶ್ರೀ ಅರವಿಂದ ಭಟ್ ಕೊಡಮಾಡಿದ ಆರ್ಥಿಕ ಸಹಾಯವನ್ನು ವಿತರಿಸಲಾಯಿತು ಮತ್ತು ಮಣಿಪಾಲ ಆರೋಗ್ಯ ಕಾರ್ಡ್ ಕೊಡಲಾಯಿತು. 

ಜಯಕರ ಶೆಟ್ಟಿ, ಅಧ್ಯಕ್ಷರು ಯುವ ಸಂಗಮ ನಕ್ರೆ, ಸೂರಜ್ ಶೆಟ್ಟಿ, ಅಧ್ಯಕ್ಷರು ಲಯನ್ಸ್ ಕ್ಲಬ್ ನಕ್ರೆ, ಶೇಖರ್ ಸುವರ್ಣ ಸದಸ್ಯರು, ಗ್ರಾಮ ಪಂಚಾಯತ್ ಕುಕ್ಕುಂದೂರು ಉಪಸ್ಥಿತರಿದ್ದರು. ರಕ್ಷಾ ಪ್ರಾರ್ಥನೆಯನ್ನು ಮಾಡಿದರು. ಟ್ರಸ್ಟಿನ ಕಾರ್ಯದರ್ಶಿ ಸ್ವಾಗತಿಸಿ, ವಂದಿಸಿದರು.

 
 
 
 
 
 
 
 
 
 
 

Leave a Reply