ಜ್ಯೋತಿರ್ವಿಜ್ಞಾನಂ ಪ್ರಕಾಶ್ ಅಮ್ಮಣ್ಣಾಯರ ಕೃತಿ ” ಜೀವನಾಮೃತ” ಲೋಕಾರ್ಪಣೆ

ಶಿರ್ವ: ಧಾರ್ಮಿಕ, ಸಾಂಸ್ಕೃತಿಕ ಚಿಂತಕರೂ, ಅದೆಷ್ಟೋ ಜನರಿಗೆ ಸೂಕ್ತ ಮಾರ್ಗದರ್ಶನ ನೀಡಿ, ಉತ್ತಮ ಮಾರ್ಗದಲ್ಲಿ ಮುನ್ನಡೆಯಲು ಪ್ರೇರಣಾಕರ್ತರಾಗಿ ಸ್ಪೂರ್ತಿ ತುಂಬಿದ ಕಾಪು ಪ್ರಕಾಶ್ ಅಮ್ಮಣ್ಣಾಯರವರು ಉತ್ತಮ ಕಾದಂಬರಿಕಾರರಾಗಿ, ಅತ್ಯುತ್ತಮ ಚಿಂತನ ಬರೆಹಗಾರರಾಗಿ ಸಾಹಿತ್ಯ ಕ್ಷೇತ್ರದಲ್ಲಿ ತನ್ನದೇ ಆದ ಛಾಪನ್ನು ಮೂಡಿಸಿದ್ದಾರೆ, ಇವರು “ಜೀವನಾಮೃತ” ಇದು ದ್ವೆತ ಪ್ರಪಂಚ ಎನ್ನುವ ಕೃತಿಯನ್ನು ರಚಿಸುವ ಮೂಲಕ ಇದೀಗ ಎಲ್ಲರಿಗೂ ಮಾರ್ಗದರ್ಶನವಾಗಬಲ್ಲ ತಾರ್ಕಿಕವಾಗಿ ಯೋಚಿಸಿ ಯಾವುದು ಸರಿ,ಯಾವುದು ತಪ್ಪು ಎಂದು ಗುರುತಿಸಿ ಜ್ಞಾನ ಕಟ್ಟಲು ಅನುವು ಮಾಡಿ ಕೊಡುವ ಕೃತಿಯನ್ನು ಹೊರ ತರುತ್ತಿರುವುದು ಶ್ಲಾಘನೀಯ ಎಂದು ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಇದರ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ನುಡಿದರು.

ಗುರುವಾರ ಕಾಪು ಶ್ರೀ ಜನಾರ್ದನ ದೇವಳದ ಸಭಾಂಗಣದಲ್ಲಿ ಜ್ಯೋತಿರ್ವಿಜ್ಞಾನಂ ಪ್ರಕಾಶ್ ಅಮ್ಮಣ್ಣಾಯರ ಪುತ್ರಿ ನವ್ಯತಾಳ ವಿವಾಹದ ಶುಭಾವಸರದಲ್ಲಿ ಏರ್ಪಡಿಸಿದ ಸರಳ ಕಾರ್ಯಕ್ರಮದಲ್ಲಿ “ಜೀವನಾಮೃತ” ಕೃತಿ ಲೋಕರ್ಪಣೆಗೊಳಿಸಿ ಮಾತನಾಡುತ್ತಾ, ಇದು ಉತ್ತಮ ಜೀವನಮೌಲ್ಯಗಳನ್ನು ನೀಡುವ ಸಂಗ್ರಹ ಯೋಗ್ಯವಾದ ಹೊತ್ತಿಗೆಯಾಗಿದೆ. ವಿವಾಹ ಮಂಗಲ ಕಾರ್ಯದಲ್ಲಿ ಸಾಹಿತ್ಯ ಕೃತಿ ಬಿಡುಗಡೆಗೊಳಿಸಿ ವಿತರಿಸುವುದು ಅತ್ಯಂತ ಸ್ತುತ್ಯ ಕಾರ್ಯವಾಗಿದೆ ಎಂದರು.

ಚಲನಚಿತ್ರರಂಗದ ಹಿರಿಯ ನಟ ದೊಡ್ಡಣ್ಣ ಶುಭಾಶಂಸನೆ ಗೈದು ನೂತನ ವಧೂವರರಾದ ನವ್ಯತಾ, ಪ್ರಶಾಂತ್‌ರವರಿಗೆ ಶುಭ ಹಾರೈಸಿದರು. ಕಾಪು ತಾಲೂಕು ಕಸಾಪ ಪೂರ್ವಾಧ್ಯಕ್ಷ ಬಿ.ಪುಂಡಲೀಕ ಮರಾಠೆ, ಮಂಜುನಾಥ್ ವೈಟ್‌ಫೀಲ್ಡ್ ಬೆಂಗಳೂರು, ಶಾಂತಾದೊಡ್ಡಣ್ಣ, ವಿದ್ಯಾ ಅಮ್ಮಣ್ಣಾಯ, ನಮೃತಾ ಅಮ್ಮಣ್ಣಾಯ, ಸೀತಾರಾಮ ಭಟ್ ದಂಡತೀರ್ಥ, ಶ್ರೀನಿವಾಸ ಭಟ್ ಮಲ್ಲಾರು ಉಪಸ್ಥಿತರಿದ್ದರು. ವಿದ್ಯಾಧರ್ ಪುರಾಣಿಕ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

 
 
 
 
 
 
 
 
 
 
 

Leave a Reply