ಉಡುಪಿ ಬೋರ್ಡ್ ಹೈಸ್ಕೂನಲ್ಲಿ ಆಶ್ರಯ ಪಡೆದಿರುವ ಭಿಕ್ಷುಕರು, ನಿರ್ಗತಿಕರು ಹಾಗೂ ಹೊರ ಜಿಲ್ಲೆಗಳಿಂದ ಬಂದಿರುವ ವಲಸೆ ಕಾರ್ಮಿಕರಲ್ಲಿ ಹೆಚ್ಚಿನವರಿಗೆ ಕೊರೋನಾ ಸೋಂಕು ತಗಲಿರುವ ಬಗ್ಗೆ ಸಂಶಯವಿದ್ದು ಅವರಿಂದ ಉಳಿದ ಸಾರ್ವಜನಿಕರಿಗೆ ಹರಡುವುದನ್ನು ತಪ್ಪಿಸಿ ಕೊರೋನಾ ಮುಕ್ತ ಉಡುಪಿ ನಿರ್ಮಾಣಕೋಸ್ಕರ ಬೋರ್ಡಿಂಗ್ ಸ್ಕೂಲ್ ಆವರಣದಲ್ಲಿ ಇವರೆಲ್ಲರ ಕೊರೋನ ತಪಾಸಣೆ ನಡೆಸಲು HOPE INDIA FOUNDATION ವ್ಯವಸ್ಥೆ ಮಾಡಿರುತ್ತದೆ.

ಪಾಸಿಟಿವ್ ಬಂದವರಿಗೆ ಅವರ ನಿಗಾ ವಹಿಸಲು ಬೇಕಾದ ಎಲ್ಲಾ ವ್ಯವಸ್ಥೆ ಮಾಡಿಸಿಕೊಟ್ಟು ಅವರ ಸಂಪೂರ್ಣ ಜವಾಬ್ದಾರಿಯನ್ನು ಹೋಪ್ ಇಂಡಿಯಾ ಫೌಂಡೇಶನ್ ವಹಿಸಿಕೊಳ್ಳಲಿದೆ.
ಇಂದು ಒಟ್ಟು 70 ಜನರಿಗೆ ಕೊರೋನಾ ಸಂಬಂಧಿತ ತಪಾಸಣೆ ನಡೆಸಲಾಯಿತು ಎಂದು ಹೋಪ್ ಇಂಡಿಯಾ ಫೌಂಡೇಶನ್ ಸ್ಥಾಪಕಾಧ್ಯಕ್ಷ ಅನ್ಸರ್ ಅಹಮದ್ ತಿಳಿಸಿರುತ್ತಾರೆ.