Janardhan Kodavoor/ Team KaravaliXpress
25.6 C
Udupi
Saturday, July 2, 2022
Sathyanatha Stores Brahmavara

ಉಡುಪಿ ಒಳಕಾಡು ವಾರ್ಡಿನ ವಲಸೆ ಕಾರ್ಮಿಕರಿಗೆ ಗಂಟಲು ಮತ್ತು ಮೂಗಿನ ದ್ರವ್ಯ ತಪಾಸಣೆ

ಉಡುಪಿ ಜಿಲ್ಲಾಡಳಿತ ಸಹಕಾರದೊಂದಿಗೆ ಶಾಸಕ ರಘುಪತಿ ಭಟ್  ಮಾರ್ಗ ದರ್ಶನದಲ್ಲಿ ಅರೋಗ್ಯ ಇಲಾಖೆ ಸಹಯೋಗದೊಂದಿಗೆ ಕೊರೋನಾ ಸೋಂಕಿನ ಉಚಿತ  ತಪಾಸಣೆ ಶಿಬಿರ ನೆಡೆಯುತಿದೆ.ಉಡುಪಿ ನಗರದ ಒಳಕಾಡು ವಾರ್ಡಿನ ನಗರಸಭಾ ಸದಸ್ಯೆ ರಜನಿ ಹೆಬ್ಬಾರ್  ಉಪಸ್ಥಿತಿಯಲ್ಲಿ ವಲಸೆ ಕಾರ್ಮಿಕರಿಗೆ ಬೀಡಿನಗುಡ್ಡೆ ಅಂಗನವಾಡಿ ಕೇಂದ್ರದಲ್ಲಿ ಕಳೆದ 1 ವಾರದಿಂದ ಪ್ರತಿ ದಿನ ಗಂಟಲು ಮತ್ತು ಮೂಗಿನ ದ್ರವ್ಯ ತಪಾಸಣೆ ಮೂಲಕ ಕೋರನಾ ರೋಗದ ಪತ್ತೆ ಹಚ್ಚುವ ಕಾರ್ಯಕ್ರಮ ನೆಡೆಯುತಿದೆ.

ಇದುವರೆಗೆ ಸುಮಾರು 1350 ಕ್ಕೂ ಹೆಚ್ಚಿನ ಜನರ ತಪಾಸಣೆ ನೆಡೆಸಿದೆ.  ಕೊರೋನಾ ಪಾಜಿಟಿವ್ ಬಂದ 35 ಜನರನ್ನು  ಚಿಕಿತ್ಸೆಗೆ ಒಳಪಡಿಸಿ ಗುಣಮುಖರಾಗುತ್ತಾ ಬಂದಿರುತ್ತಾರೆ.   ಎಲ್ಲವೂ ಉಚಿತವಾಗಿ ನೆಡೆಯುತಿದೆ ಎಂದು ರಜನಿ ಹೆಬ್ಬಾರ್ ತಿಳಿಸಿದರು. 
ವಲಸೆ ಕಾರ್ಮಿಕರು ಪರಿಸ್ಥಿತಿಯನ್ನು ಅರಿತು ತಾವಾಗಿಯೇ ಬಂದು ತಪಾಸಣೆಯಲ್ಲಿ ಸಹಕರಿ ಸುವುದು ಹೆಮ್ಮೆಯ ಸಂಗತಿ. ಮಂಜುನಾಥ್ ಹೆಬ್ಬಾರ್, ಅರೋಗ್ಯ ಇಲಾಖೆಯ ಲ್ಯಾಬ್ ಟೆಕ್ನಿಶೆನ್ ಪ್ರಮೋದ್ ,ಕಿರಣ್ ಕುಮಾರ್ , ಸುಧಾ , ರಶ್ಮಿತ್ ,ಸಿಸ್ಟೆರ್ ಮೀನಾಕ್ಷಿ , ಆಶಾ ಕಾರ್ಯಕರ್ತೆ  ಹಿಮಾ, ಚಂದ್ರಾವತಿ, ಅಂಗನವಾಡಿ ಶಿಕ್ಷಕಿ ಪೂರ್ಣಿಮಾ, ಪ್ರೇಮ, ಅಫಿಯ ಬಾನು,    ಪೊಲೀಸ್ ಅಧಿಕಾರಿ ಪ್ರಮೋದ್ ಕುಮಾರ್ ಹಾಗು ಸಿಬ್ಬಂದಿ  ಉಪಸ್ಥಿತರಿದ್ದರು.  
- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

error: Content is protected !!