Janardhan Kodavoor/ Team KaravaliXpress
25.6 C
Udupi
Sunday, July 3, 2022
Sathyanatha Stores Brahmavara

ಕೋರನಾ ಜಾಗೃತಿಗೆ ಸಾಥ್ ಕೊಟ್ಟ ಗೂಗಲ್ 

ಇಂದು ಗೂಗಲ್ ಹೋಮ್ ಪೇಜ್ ನೋಡಿದಾಗ ಆರು ಅಕ್ಷರಗಳು ಕೂಡ ವೈವಿಧ್ಯಮಯ ಬಣ್ಣದ ಮಾಸ್ಕ್ ಗಳನ್ನು ಹಾಕಿಕೊಂಡು ಕುಣಿಯುತ್ತಿರುವ ದೃಶ್ಯ ಕಣ್ಣ ಮುಂದೆ ಹಾದು ಹೋಗುತ್ತದೆ. ಕೋವಿಡ್ ಜಾಗೃತಿಗಾಗಿ ಜನರಲ್ಲಿ ಸ್ವ-ರಕ್ಷಣೆಯ ಬಗ್ಗೆ ಅರಿವನ್ನು ಮೂಡಿಸುವ ಸಲುವಾಗಿ ಗೂಗಲ್ ಇದೊಂದು ವಿನೂತನ ಪ್ರಯೋಗಕ್ಕೆ ಮುಂದಾಗಿ ದೊಡ್ಡ ಅಲೆಯನ್ನೇ ಎಬ್ಬಿಸಿದೆ. 

ಗೂಗಲ್ ತನ್ನ ಲೋಗೋವನ್ನು ತಾತ್ಕಾಲಿಕವಾಗಿ ಅತ್ಯಾಕರ್ಷಕ ಶೈಲಿಯಲ್ಲಿ ಸಂದೇಶವನ್ನು ಪ್ರತಿಬಿಂಬಿಸುವುದೇ ಗೂಗಲ್ ಡೂಡಲ್. ವಿಶೇಷ ದಿನದಂದು, ಜಾಗತಿಕ ಮಟ್ಟದಲ್ಲಿ ಸಂಚಲನ ಮೂಡಿಸಿದ ಸಾಧನೆ, ಘಟನೆಯನ್ನು ಆಧಾರವಾಗಿಟ್ಟುಕೊಂಡು ಗೂಗಲ್ ವಿನೂತನವಾಗಿ ಡೂಡಲ್ ನಿರ್ಮಿಸುತ್ತದೆ. ವಿಶ್ವ ಆರೋಗ್ಯ ಸಂಸ್ಥೆಯು ಬಿಡುಗಡೆ ಮಾಡಿದ ಮುಂಜಾಗೃತ ವಿಧಾನಗಳ ಬಗ್ಗೆ ಇಂದಿನ ಗೂಗಲ್ ಡೂಡಲ್ ನಲ್ಲಿ ಸಂದೇಶವು ಅಡಗಿದೆ.

ಅಂದ ಹಾಗೆ ಇಲ್ಲಿಯವರೆಗೆ ಗೂಗಲ್ ಸಂಸ್ಥೆ ಸುಮಾರು 4000 ಗೂಗಲ್ ಡೂಡಲ್ ಗಳನ್ನು ನಿರ್ಮಿಸಿವೆ. ಮೊಟ್ಟಮೊದಲ ಗೂಗಲ್ ಡೂಡಲ್ ಆಗಸ್ಟ್ 31, 1998 ರಲ್ಲಿ ಬಂದಿತ್ತು. ಕೋಟ್ಯಾಂತರ ಜನರು ಇಂದು ಗೂಗುಲ್ ಪೇಜ್ ನೋಡಿ ಸಂತಸ ವ್ಯಕ್ತ ಪಡಿಸಿದ್ದಾರೆ 

- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

error: Content is protected !!