ಗಾಂಧಿ ಆಸ್ಪತ್ರೆಯಲ್ಲಿ ಮೇ 5ರಂದು ರಕ್ತದಾನ ಶಿಬಿರ, ಲಸಿಕೆ ಪಡೆಯುವ ಮುನ್ನ ರಕ್ತದಾನ ಮಾಡಿ

​​ಸದ್ಯದ ಕೋರೊನಾ ಪರಿಸ್ಥಿತಿಯಲ್ಲಿ ದೇಹದ ಆರೋಗ್ಯ ಕಾಪಾಡೋ ಕೋರೊನಾ ಲಸಿಕೆ ಹಾಕಿಸಿಕೊಂಡು ರಾಷ್ಟ್ರೀಯ ಕಾರ್ಯಕ್ರಮದಲ್ಲಿ ಕೈಜೋಡಿಸುವುದು ಎಷ್ಟು ಮುಖ್ಯವೋ, ಅಷ್ಟೆ ಮುಖ್ಯವಾದದ್ದು ಕೋರೊನಾ ನಿರೋಧಕ ಲಸಿಕೆ ಪಡೆಯುವ ಮುನ್ನ ಅರ್ಹರಾದವರು ರಕ್ತದಾನ ಮಾಡಿ ಜೀವಗಳನ್ನು ಉಳಿಸಲು ನೆರವಾಗುವುವಲ್ಲಿ ರಕ್ತನಿಧಿ ಕೇಂದ್ರ ಹಾಗೂ ಸಂಸ್ಥೆಗಳೊಂದಿಗೆ ಕೈಜೋಡಿಸುವಂತದ್ದು.
ಗಾಂಧಿ ಆಸ್ಪತ್ರೆ ಉಡುಪಿಯು ಸಾರ್ವಜನಿಕ ಆರೋಗ್ಯ ಸೇವೆಯಲ್ಲಿ ಯಶಸ್ವಿ 25ಸಂವತ್ಸರಗಳನ್ನು ಪೂರೈಸಿ, 27ನೇ ವರ್ಷಕ್ಕೆ ಪಾದಾರ್ಪಣೆಗೊಳ್ಳುತ್ತಿರುವ ಈ ಸಂದರ್ಭದಲ್ಲಿ, ರಕ್ತನಿಧಿ, ಜಿಲ್ಲಾಸ್ಪತ್ರೆ, ಉಡುಪಿ ಇವರ ಸಹಯೋಗದೊಂದಿಗೆ ಮೇ 5, ಬುಧವಾರದಂದು ಬೆಳ್ಳಿಗ್ಗೆ 9.00 ರಿಂದ ಮಧ್ಯಾಹ್ನ 1.00 ಗಂಟೆಯವರೆಗೆ “ರಕ್ತದಾನ ಶಿಬಿರ”ವು ಗಾಂಧಿ ಆಸ್ಪತ್ರೆಯಲ್ಲಿ ನಡೆಯಲಿದೆ.

ಕಳೆದ 17 ವರ್ಷಗಳಿಂದ ಸಾಮಾಜಿಕ ಕಳಕಳಿಯಿಂದ ರಕ್ತದಾನ ಶಿಬಿರವು ನಮ್ಮ ಸಂಸ್ಥೆಯಲ್ಲಿ ಪಂಚಮಿ ಟ್ರಸ್ಟ್ ಸಹಕಾರ ದಿಂದ ನಡೆಯುತ್ತಿದ್ದು, ಕೋವಿಡ್-19ರ ಎರಡನೇ ಅಲೆಯ ಸಂದರ್ಭದಲ್ಲಿ ರಕ್ತನಿಧಿಗಳಲ್ಲಿ ರಕ್ತದ ಕೊರತೆಯಿದ್ದು, ಸಾರ್ವಜ ನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸಮಾಜಸೇವೆಯಲ್ಲಿ ಗಾಂಧಿ ಆಸ್ಪತ್ರೆ ಯೊಂದಿಗೆ  ಕೈಜೋಡಿಸಬೇಕಾಗಿ ವಿನಂತಿ. ಶಿಬಿರವು ಕೋವಿಡ್ ಮಾರ್ಗಸೂಚಿಯಂತೆ ನಡೆಯುವುದು.

ರಕ್ತನಿಧಿಗಳು ರಕ್ತ ಸಂಗ್ರಹಕ್ಕಾಗಿ 18 ರಿಂದ 55 ವರ್ಷದೊಳಗಿನ ಸ್ವಯಂ ಪ್ರೇರಿತ ರಕ್ತದಾನಿಗಳನ್ನೇ ಹೆಚ್ಚು ಅವಲಂಬಿ ಸಿದೆ. ಆದರೆ ಮೇ 1 ರಿಂದ ಪ್ರೌಡ ವಯಸ್ಕರ ಲಸಿಕೆ ಅಭಿಯಾನ ಆರಂಬಿಸಿದರೆ ಎನ್.ಬಿ.ಟಿ.ಸಿ. ಯ ನಿರ್ದೇಶನದಂತೆ ಮೊದಲ ಮತ್ತು ಎರಡನೆ ಲಸಿಕೆ ಪಡೆದು ಒಟ್ಟಾರೆ 25 ದಿನ ರಕ್ತದಾನ ಸಾಧ್ಯವಾಗುವುದಿಲ್ಲ.

ಅದ್ದರಿಂದ ಮುಂದಿನ 2-3 ತಿಂಗಳು ರಕ್ತದಾನ ಮಾಡಲು ಅಗದೆ ಇರುವುದರಿಂದ ರಕ್ತ ಸಂಗ್ರಹದಲ್ಲಿ ಕೊರತೆಯಾಗಿ, ಅಗತ್ಯ ರಕ್ತ ಮರುಪೂರಣ ಅವಶ್ಯವಿರುವ ಕೆಲವು ಮರಣಾಂತಿಕ ಕಾಯಿಲೆ, ಅಪಘಾತ ಚಿಕಿತ್ಸೆ, ಹೆರಿಗೆ ಹಾಗೂ ತುರ್ತು ಶಸ್ತ್ರ ಚಿಕಿತ್ಸೆ ಸಂದರ್ಭದಲ್ಲಿ ರಕ್ತಮರುಪೂರಣ ದೊಡ್ಡ ಸವಾಲಾಗಿರುವುದರಿಂದ,
ಕರ್ನಾಟಕದ ಹೆಮ್ಮೆಯ ರಕ್ತದಾನಿಗಳ ಜಿಲ್ಲೆ – “ಉಡುಪಿ ಜಿಲ್ಲೆ” ಎಂದೆನಿಸಿಕೊಳ್ಳುವಲ್ಲಿ ಕೈ ಜೋಡಿಸಿದ ಸಾಮಾಜಿಕ ಕಳಕಳಿಯುಳ್ಳ ಪ್ರೌಡರು ಕೋವಿಡ್ ಲಸಿಕೆ ಪಡೆಯುವ ಮೊದಲು ರಕ್ತದಾನ ಶಿಬಿರದಲ್ಲಿ ಭಾಗವಹಿಸಿ ಅಥವಾ ರಕ್ತನಿಧಿ ಕೇಂದ್ರಗಳಲ್ಲಿ ರಕ್ತದಾನ ಮಾಡಬೇಕೆಂದು ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕರು ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
 
 
 
 
 
 
 
 
 
 
 

Leave a Reply