Janardhan Kodavoor/ Team KaravaliXpress
30.6 C
Udupi
Tuesday, August 16, 2022
Sathyanatha Stores Brahmavara

ಮಲ್ಲಾರ್ ಪಕೀರ್ಣ ಕಟ್ಟೆಯ ಆಯುಷ್ ಕ್ಲಿನಿಕ್ ನಲ್ಲಿ ಉಚಿತ ಚಿಕಿತ್ಸೆ ಶಿಬಿರ

ಕಾಪು : ಜಮೀಯ್ಯತುಲ್ ಫಲಾಹ್ ಕಾಪು, ಉಡುಪಿ ಜಿಲ್ಲಾ ಮುಸ್ಲಿಂ ಒಕ್ಕೂಟ ಕಾಪು, ಲಾಂಬೋರ್ಡ್ ಸ್ಮಾರಕ ಆಸ್ಪತ್ರೆ ಉಡುಪಿ, ಇವರ ಸಹಭಾಗಿತ್ವದಲ್ಲಿ ಉಚಿತ ಚಿಕಿತ್ಸೆ ಶಿಬಿರವನ್ನು ಮಾ. 25 ರ ಗುರುವಾರ ಮಲ್ಲಾರ್ ಪಕೀರ್ಣ ಕಟ್ಟೆ ಹಿಂದೂಸ್ತಾನಿ ಶಾಲೆಯ ಬಳಿ ಆಯುಷ್ ಕ್ಲಿನಿಕ್ ನಲ್ಲಿ ಹಮ್ಮಿಕೊಳ್ಳಲಾಗಿದೆ.

ಬೆಳಿಗ್ಗೆ 9.00 ರಿಂದ 1.00 ರ ವರೆಗೆ ನಡೆಯುವ ಈ ಶಿಬಿರದಲ್ಲಿ ತಜ್ಞ ವೈದ್ಯರು ಸಾಮಾನ್ಯ ಆರೋಗ್ಯ , ಕಣ್ಣಿನ ಹಾಗೂ ದಂತದ ತಪಾಸಣೆ ನಡೆಸಿ ಲಭ್ಯವಿರುವ ಔಷದವನ್ನು ನೀಡಲಿದ್ದಾರೆ.

ಹಾಲಿ ಶಾಸಕರು ಲಾಲಾಜಿ ಮೆಂಡನ್ , ಮಾಜಿ ಸಚಿವರು ವಿನಯ ಕುಮಾರ್ ಸೊರಕೆ , ಸಿ. ಏ. ಬ್ಯಾಂಕ್ ಅಧ್ಯಕ್ಷರು ಡಾ | ದೇವಿ ಪ್ರಸಾದ್ ಶೆಟ್ಟಿ ಭಾಗವಹಿಸಲಿದ್ದಾರೆ ಎಂದು ಸಂಘಟನೆಯ ಅಧ್ಯಕ್ಷರುಗಳು ಜಂಟಿಯಾಗಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ. ಕಾರ್ಯಕ್ರಮದಲ್ಲಿ ಭಾಗವಹಿಸುವವರು ಕಡ್ಡಾಯವಾಗಿ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕಾಗಿ ವಿನಂತಿಸಿದ್ದಾರೆ.

- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

error: Content is protected !!