ವಿಶ್ವ ಮಹಿಳಾ ದಿನಾಚರಣೆಯನ್ನು ಆರೋಗ್ಯ ವರ್ಧಕ ವಾಗಿ ಆಚರಿಸುವುದಕ್ಕಾಗಿ ನಮ್ಮ ಕೊಡುಗೆ~ಡಾ. ರಾಜಲಕ್ಷ್ಮೀ, ಕಾರ್ಯದರ್ಶಿ, ಮಣಿಪಾಲ್ OBG ಸೊಸೈಟಿ.      

ಗರ್ಭ ಕೊರಳಿನ ಕ್ಯಾನ್ಸರ್ ತಡೆಗಟ್ಟಬಹುದೇ ? ಹೌದು: ನಾವೆಲ್ಲರೂ ಪ್ರಯತ್ನ ಪಟ್ಟರೆ ಖಂಡಿತ ಸಾಧ್ಯ .

ಭಾರತೀಯ ಮಹಿಳೆಯರಲ್ಲಿ ಅತೀ ಹೆಚ್ಚು ಕಂಡುಬರುವ ಕ್ಯಾನ್ಸರ್ ಗರ್ಭಕೊರಳಿನ ಕ್ಯಾನ್ಸರ್. Human Papilloma Virus ಎಂಬ ವೈರಾಣು ಈ ಕ್ಯಾನ್ಸರಿಗೆ ಕಾರಣವಾಗಿರುತ್ತದೆ. ಸಾಮಾನ್ಯವಾಗಿ 30-60  ವರ್ಷದ ಮಹಿಳೆಯರಲ್ಲಿ ಇದು ಕಂಡು ಬರುತ್ತದೆ.  

ಅಂಕಿ ಅಂಶಗಳ ಪ್ರಕಾರ ಪ್ರತೀ ವರ್ಷ ಭಾರತದಲ್ಲಿ 1,32000 ಮಹಿಳೆಯರು ಗರ್ಭಕೊರಳಿನ ಕ್ಯಾನ್ಸರಿಗೆ ತುತ್ತಾಗುತ್ತಿದ್ದು, 74,000 ದಷ್ಟು ಮಹಿಳೆಯರು ಈ ಕಾಯಿಲೆಯಿಂದಾಗಿ ಸಾವನ್ನಪ್ಪುತ್ತಿದ್ದಾರೆ.
ಈ ಗರ್ಭ ಕೊರಳಿನ ಕ್ಯಾನ್ಸರ್ ತಡೆಗಟ್ಟಬಹುದಾದ ಕಾಯಿಲೆಯಾಗಿದೆ. ಕ್ಯಾನ್ಸರ್ ಪೂರ್ವ ಹಂತವನ್ನು screening ವಿಧಾನಗಳಿಂದ ಪತ್ತೆ ಮಾಡುವುದು ಹಾಗೂ HPV ಲಸಿಕೆ (vaccine) ಹಾಕಿಸಿಕೊಳ್ಳುವುದರಿಂದ ಗರ್ಭಕೊರಳಿನ ಕ್ಯಾನ್ಸರನ್ನು ತಡೆಗಟ್ಟಬಹುದು.

ಕ್ಯಾನ್ಸರ್ ಪೂರ್ವ ಹಂತದಲ್ಲಿ ಗರ್ಭಕೊರಳ ಕ್ಯಾನ್ಸರನ್ನು ಪತ್ತೆಹಚ್ಚಲು ಮಾಡುವ ಸರಳ ಪರೀಕ್ಷೆ ಪ್ಯಾಪ್ ಸ್ಮಿಯರ್ (Pap Test).  

ಗರ್ಭ ಕೊರಳಿನ  ಜೀವಕೋಶಗಳು ಕ್ಯಾನ್ಸರ್ ಗೆ ಪರಿವರ್ತನೆಯಾಗುವ ಮೊದಲು ಅನೇಕ ಬದಲಾವಣೆಗೊಳಗಾಗುತ್ತವೆ.  ಈ ಬದಲಾವಣೆಗಳು ಆರಂಭವಾದ 5-10  ವರ್ಷಗಳ ನಂತರ ಕ್ಯಾನ್ಸರ್ ಲಕ್ಷಣಗಳು ಕಾಣಿಸಿಕೊಳ್ಳುತ್ತದೆ.  

ಜೀವಕೋಶಗಳಲ್ಲಿ ಈ ಬದಲಾವಣೆಯ ಹಂತದಲ್ಲಿ ಈ ಕ್ಯಾನ್ಸರನ್ನು ಪತ್ತೆ ಹಚ್ಚಿ ಚಿಕಿತ್ಸೆ ನೀಡಿದರೆ ಗರ್ಭಕೊರಳಿನ  ಕ್ಯಾನ್ಸರನ್ನು ಸಂಪೂರ್ಣ ತಡೆಗಟ್ಟಲು ಸಾಧ್ಯ.  Pap Smear ಈ ಬದಲಾವಣೆಗಳನ್ನು ಪತ್ತೆ ಹಚ್ಚಲು ಸಹಕಾರಿಯಾಗಿದೆ

25-60 ವರ್ಷ ವಯಸ್ಸಿನ ಎಲ್ಲಾ ಮಹಿಳೆಯರು ಈ ಪರೀಕ್ಷೆ ಗೊಳಗಾಗುವುದು ಉತ್ತಮ. ಅದರಲ್ಲೂ ಬಿಳಿಸ್ರಾವದ ಮುಟ್ಟಿನ ತೊಂದರೆ ಇರುವವರು, ಹಲವು ಪುರುಷರೊಂದಿಗೆ ಲೈಂಗಿಕ ಸಂಪರ್ಕ ಹೊಂದಿರುವವರು ಅಗತ್ಯವಾಗಿ ಈ ಪರೀಕ್ಷೆ ಮಾಡಿಸಿಕೊಳ್ಳಬೇಕು

ಪರೀಕ್ಷೆಯ ವಿಧಾನ: ಗರ್ಭಕಂಠದ ಜೀವಕೋಶಗಳನ್ನು Ayer’s Spatula ಬಳಸಿ ಸಂಗ್ರಹಿಸಿ, ಗಾಜಿನ ಸ್ಲೈಡ್ ನ ಮೇಲೆ ಸವರಿ, 95% ಮಿಥನಾಲ್ ನಿಂದ  fix ಮಾಡಲಾಗುತ್ತದೆ.  ಈ ಸ್ಲೈಡ್ ಗೆ Papanicalaou ಬಣ್ಣ ಹಚ್ಚಿ ಸೂಕ್ಷ್ಮ ದರ್ಶಕದ ಮೂಲಕ ವೀಕ್ಷಿಸಿದಾಗ ಜೀವಕೋಶದ ಬದಲಾವಣೆಗಳನ್ನು ಗಮನಿಸಬಹುದು

ಇಷ್ಟು ಸರಳ ಪರೀಕ್ಷೆಯಿಂದ ಈ ಭಯಂಕರ ಕ್ಯಾನ್ಸರನ್ನು ತಡೆಗಟ್ಟಲು ಸಾಧ್ಯವಿರುವಾಗ ಈ ಪರೀಕ್ಷೆ ಮಾಡಿಸಿಕೊಳ್ಳಲು ಹಿಂಜರಿಯದಿರಿ. ನಿಯಮಿತವಾಗಿ ಈ ಪರೀಕ್ಷೆಗೊಳಗಾಗಿ ಕ್ಯಾನ್ಸರ್ ನಿಂದ  ದೂರವಿರಿ

ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ  ಹೆರಿಗೆ ಮತ್ತು ಸ್ತ್ರೀ ರೋಗ   ತಜ್ಞರಿಂದ ಗರ್ಭಕೊರಳಿನ ಕ್ಯಾನ್ಸರ್ ಪತ್ತೆಹಚ್ಚಲು ಉಚಿತ ತಪಾಸಣೆ ಕೆಳಕಂಡ ಸ್ಥಳಗಳಲ್ಲಿ ನಡೆಯಲಿದೆ. 

ಶಿಬಿರ ನಡೆಯುವ  ಸ್ಥಳಗಳು :
1. ಸಮುದಾಯ ಅರೋಗ್ಯ ಕೇಂದ್ರ, ಬ್ರಹ್ಮಾವರ, 2. ಸಮುದಾಯ ಅರೋಗ್ಯ ಕೇಂದ್ರ, ಹೆಬ್ರಿ, 3. ತಾಲೂಕು ಆಸ್ಪತ್ರೆ, ಕಾರ್ಕಳ, 4. ಸುವಿಧಾ  ನರ್ಸಿಂಗ್ ಹೋಂ, ಹೊನ್ನಾವರ, 5. ಡಾ. ಎ. ವಿ ಬಾಳಿಗ ಆಸ್ಪತ್ರೆ, ದೊಡ್ಡನಗುಡ್ಡೆ, ಉಡುಪಿ, 6. ಸೋನಿಯಾ ಕ್ಲಿನಿಕ್ ಮತ್ತು ಆಸ್ಪತ್ರೆ, ಮಣಿಪಾಲ, 7. ಸಿಟಿ ಆಸ್ಪತ್ರೆ, ಉಡುಪಿ, 8. ಸಿಟಿ ಆಸ್ಪತ್ರೆ, ಕಾರ್ಕಳ, 9. ಹೈಟೆಕ್ ಆಸ್ಪತ್ರೆ, ಉಡುಪಿ, 10. ಮನೀಶ್ ಆಸ್ಪತ್ರೆ ಕುಂದಾಪುರ.
11. ಆದರ್ಶ ಆಸ್ಪತ್ರೆ, ಕುಂದಾಪುರ, 12. ವಿವೇಕ್ ಆಸ್ಪತ್ರೆ, ಕುಂದಾಪುರ, 13. ನವಮಾಸ ಮಹಿಳಾ ಸ್ಪೆಷಲಿಟಿ ಕ್ಲಿನಿಕ್, ಕುಂದಾಪುರ, 14. ಟಿ . ಮ್. ಎ ಪೈ ಆಸ್ಪತ್ರೆ, ಉಡುಪಿ, 15. ಕೆಎಂಸಿ, ಮಣಿಪಾಲ, 16. ವಾತ್ಸಲ್ಯ ಕ್ಲಿನಿಕ್, ಸಂತೆಕಟ್ಟೆ, ಉಡುಪಿ, 17. ಗಾಂಧಿ ಆಸ್ಪತ್ರೆ, ಉಡುಪಿ,  18. ಇಂಫ್ಯಾಂಟ್ ಜೀಸಸ್ ಸ್ಕೂಲ್, ಪೆರಂಪಳ್ಳಿ, ಉಡುಪಿ, 19. ಗೊರೆಟ್ಟಿ ಆಸ್ಪತ್ರೆ, ಕಲ್ಯಾಣಪುರ್, ಉಡುಪಿ, 20. ರೋಶನಿ  ಲಪಾರೋಸ್ಕಾಪಿಕ್ ಆಸ್ಪತ್ರೆ, ಉಡುಪಿ, 21. ನಾಯಕ್ಸ್ ಹೆಲ್ತ್ ಕೇರ್, ಭಟ್ಕಳ. 
 
 
 
 
 
 
 
 
 
 
 

Leave a Reply