ಹೆಣ್ಣು ಭ್ರೂಣ ಹತ್ಯೆ ತಡೆಗೆ ಮುಂಜಾಗೃತಾ ಕ್ರಮ ಅಗತ್ಯ-ಡಾ. ಪ್ರತಾಪ್​ ಕುಮಾರ್​​

ಉಡುಪಿ: ಗಂಡು ಮತ್ತು ಹೆಣ್ಣು ಅನುಪಾತದಲ್ಲಿ ಅಸಮತೋಲನ ಉಂಟಾಗದಂತೆ​ ​ನೋಡಿಕೊಳ್ಳುವುದು ಪ್ರತಿಯೊಬ್ಬ ನಾಗರಿಕರ ಕರ್ತವ್ಯ ಎಂದು ಪ್ರಸವಪೂರ್ವ ಭ್ರೂಣಲಿಂಗ ಪತ್ತೆ ಕಾಯಿದೆಯ ಸಲಹಾ​ ಸಮಿತಿ ಸಭೆಯ ಅಧ್ಯಕ್ಷ ಡಾ ಪ್ರತಾಪ್ ಕುಮಾರ್ ಹೇಳಿದರು.
​​
ಅವರು ಇಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದಗರ್ಭಪೂರ್ವ ಮತ್ತು ಪ್ರಸವ ಪೂರ್ವ ಭ್ರೂಣ ಲಿಂಗ ಪತ್ತೆ (ಪಿ.ಸಿ & ಪಿ.ಎನ್.ಡಿ.ಟಿ) ಕಾಯಿದೆ ಸಲಹಾ ಸಮಿತಿ ಸಭೆಯ​ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸಮಾಜದಲ್ಲಿ ಹೆಣ್ಣು ಮತ್ತು ಗಂಡು ಲಿಂಗಾನುಪಾತದಲ್ಲಿ ಆಗುವ ವ್ಯತ್ಯಾಸ​ ​ದಿಂದ ದುಷ್ಪರಿಣಾಮವನ್ನು ತಡೆಗಟ್ಟಲು​ ಹೆಣ್ಣು ಭ್ರೂಣ ಹತ್ಯೆಗಳು ಆಗದಂತೆ ಅಗತ್ಯ ಮುಂಜಾಗೃತಾ ಕ್ರಮಗಳನ್ನು ಕೈಗೊಳ್ಳಬೇಕಿದೆ ಎಂದರು.

ಜಿಲ್ಲೆಯಲ್ಲಿ ಪ್ರಸುತ್ತ 1,000 ಪುರುಷರಿಗೆ 956 ಮಹಿಳೆಯರಿದ್ದಾರೆ ಎಂದ ಅವರು ಗರ್ಭ ಪೂರ್ವ ಮತ್ತು ಪ್ರಸವ ಪೂರ್ವ​ ಭ್ರೂಣಲಿಂಗ ಪತ್ತೆ ಮಾಡುವುದು ಕಾನೂನು ಬಾಹಿರ ಹಾಗೂ ಶಿಕ್ಷಾರ್ಹ ಅಪರಾಧವಾಗಿದೆ ಎಂದರು..​ ​ಸ್ಕ್ಯಾನಿಂಗ್  ಸೆಂಟರ್‌ಗಳಲ್ಲಿ ಸರಕಾರ ನಿಯಮಾನುಸಾರ ನಿಗಧಿಪಡಿಸಿರುವ ನಮೂನೆಗಳ ದಾಖಲೆಗಳ​ ​ನಿರ್ವಹಣೆಯನ್ನು ತಪ್ಪದೇ ಮಾಡಬೇಕು, ತಪ್ಪಿದ್ದಲ್ಲಿ  ಸ್ಕ್ಯಾನಿಂಗ್  ಸೆಂಟರ್‌ಗಳ ಮೇಲೆ ಕಾನೂನಿನ ಅಡಿಯಲ್ಲಿಕ್ರಮ ಕೈಗೊಳ್ಳಲಾಗುವುದು ಎಂದರು.

ಸಮಿತಿಯ ಸದಸ್ಯರುಗಳು  ಸ್ಕ್ಯಾನಿಂಗ್ ಸೆಂಟರ್‌ಗಳಿಗೆ ಅನಿರೀಕ್ಷಿತವಾಗಿ ಭೇಟಿ ನೀಡಿ, ದಾಖಲೆಗಳನ್ನುಪರಿಶೀಲಿಸುವುದು ಸೇರಿದಂತೆ ಅಲ್ಲಿನ ಕಾರ್ಯಚಟುವಟಿಕೆಗಳ ಬಗ್ಗೆ ಪರಿಶೀಲಿಸಬೇಕು ಎಂದ​.​ ​ಸೆಂಟರ್‌ಗಳಲ್ಲಿ ಸರಕಾರ ಸೂಚಿಸಿರುವಂತೆ ನಿಯಮಗಳ ಫಲಕವನ್ನು ಪ್ರದರ್ಶಿಸಬೇಕು, ತಪ್ಪಿದ್ದಲ್ಲಿ​ ಕಾನೂನು ಕ್ರಮ ಕೈಗೊಳ್ಳ ಲಾಗುವುದು ಎಂದ ಅವರು ಅಲ್ಟ್ರಾಸೌಂಡ್ ಸ್ಕ್ಯಾನಿಂಗ್ ಸೌಲಭ್ಯ ಹೊಂದಿರುವ ಎಲ್ಲಾ​ ಚಿಕಿತ್ಸಾಲಯಗಳು, ಜೆನಿಟಿಕ್ ಕ್ಲಿನಿಕ್‌ಗಳು ಹಾಗೂ ಜೆನಿಟಿಕ್ ಪ್ರಯೋಗಾಲಯಗಳು ​ಸಂಬಂಧಪಟ್ಟ ಜಿಲ್ಲಾ ಸಕ್ಷಮ​ ಪ್ರಾಧಿಕಾರದಲ್ಲಿ ನೋಂದಾಯಿಸಿ ಕೊಳ್ಳುವುದು ಕಡ್ಡಾಯ ಎಂದರು.​ 

ಸಭೆಯಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಸುಧೀರ್ ಚಂದ್ರ ಸೂಡಾ, ತಪಾಸಣಾ ಸಮಿತಿ ಅಧ್ಯಕ್ಷ ಡಾ.ರಾಮರಾವ್, ಸರಕಾರಿ ನೌಕರರ ಸಂಘದ ಅಧ್ಯಕ್ಷ ಸುಬ್ರಹ್ಮಣ್ಯ ಶೇರಿಗಾರ್, ಜಿಲ್ಲಾ ವಾರ್ತಾಧಿಕಾರಿ ಬಿ. ಮಂಜುನಾಥ್,​ ಸದಸ್ಯರುಗಳಾದ ಡಾ ಆಮ್ನ ಹೆಗ್ಡೆ, ಡಾ.ಶಶಿಕಲಾ ಕೆ ಉಪಸ್ಥಿತರಿದ್ದರು.
 
 
 
 
 
 
 
 
 

Leave a Reply