ಜಿಲ್ಲೆಗೆ ಸರಕಾರದಿಂದ ಲಸಿಕೆ ಬಂದ ತಕ್ಷಣ ಸಾರ್ವಜನಿಕರಿಗೆ ಮಾಹಿತಿಯನ್ನು ನೀಡಲಾಗುವುದು  ​~ ಜಿಲ್ಲಾಧಿಕಾರಿ​ ಜಿ.ಜಗದೀಶ್  

 ಉಡುಪಿ: ಜಿಲ್ಲೆಯಲ್ಲಿ ಕೋವಿಶೀಲ್ಡ್ ಲಸಿಕೆಯ ದಾಸ್ತಾನು ಸಾಕಷ್ಟು ಇಲ್ಲದಿರುವುದರಿಂದ ಪ್ರಥಮಡೋಸ್ ಪಡೆದು 8 ವಾರ ಮೀರಿದವರು ಒಟ್ಟು 947 ಅರ್ಹ ಫಲಾನುಭವಿ​ ​ಗಳಿದ್ದು, ಇವರಿಗೆ ಆದ್ಯತೆ ಮೇರೆಗೆ ಲಸಿಕೆ​ ನೀಡಬೇಕಾಗಿರುವುದರಿಂದ ಆಶಾಕಾರ್ಯಕರ್ತೆಯರು, ಆರೋಗ್ಯ ಸಿಬ್ಬಂದಿಯವರು ಸದರಿಯವರಿಗೆ ಕರೆ ಮಾಡಿ ಲಸಿಕೆ​ ಪಡೆಯಲು ಕ್ರಮವಹಿಸುತ್ತಾರೆ. 

ಪ್ರಥಮ ಡೋಸ್ ಕೋವಿಶೀಲ್ಡ್ ಲಸಿಕೆ ಪಡೆದು 8 ವಾರ ಮೀರಿದವರು​ ಆಶಾಕಾರ್ಯಕರ್ತೆಯರಿಗೆ ಕರೆ ಮಾಡಿ 2ನೇ ಡೋಸ್ ಲಸಿಕೆ ಪಡೆಯಬಹುದಾಗಿದೆ.​ ಜಿಲ್ಲೆಯಲ್ಲಿ ಕೋವ್ಯಾಕ್ಸಿನ್ ಲಸಿಕೆ ಲಭ್ಯ ವಿರುವುದಿಲ್ಲವಾಗಿದ್ದು, ರಾಜ್ಯದಿಂದ ಸರಬರಾಜಾದ ತಕ್ಷಣ ಪ್ರಥಮ ಡೋಸ್​ ಪಡೆದು 6 ವಾರ ಮೀರಿದವರಿಗೆ ಆದ್ಯತೆ ಮೇರೆಗೆ ಲಸಿಕೆ ನೀಡುವ ಬಗ್ಗೆ ಆಶಾ ಕಾರ್ಯಕರ್ತೆಯರು, ಆರೋಗ್ಯ ಸಿಬ್ಬಂದಿಯವರು​ ಸದರಿಯವರಿಗೆ ಕರೆ ಮಾಡಿ ಲಸಿಕೆ ಪಡೆಯಲು ಕ್ರಮ​ ​ವಹಿಸುತ್ತಾರೆ.

ಮುಂದಿನ ದಿನಗಳಲ್ಲಿ ಲಸಿಕೆಯು ಸರಬರಾಜಾದ ತಕ್ಷಣ ಪ್ರಥಮ ಡೋಸ್ ಪಡೆದವರಿಗೆ ಆದ್ಯತೆ ಮೇರೆಗೆ 2ನೇ ಡೋಸ್​ ನೀಡಲಾಗುವುದು. ಮತ್ತು ಜಿಲ್ಲ್ಲೆಗೆ ಸಾಕಷ್ಟು ಲಸಿಕೆ ಬಂದ ತಕ್ಷಣ ಆಶಾ ಕಾರ್ಯಕರ್ತೆಯರು ಸಾರ್ವಜನಿಕರಿಗೆ ಮಾಹಿತಿ​ ನೀಡುವುದರ ಮೂಲಕ ಪ್ರಥಮ ಡೋಸ್ ಲಸಿಕೆ ಪಡೆಯಲು ವ್ಯವಸ್ಥೆ ಮಾಡಲಾಗುವುದು. ಅಲ್ಲಿಯವರೆಗೆ ಪ್ರಥಮ ಡೋಸ್ ಲಸಿಕೆ​ ಪಡೆಯಲು ಬಾಕಿ ಇರುವವರು ಆಸ್ಪತ್ರೆಗೆ ಹೋಗದೆ ಲಸಿಕೆಗಾಗಿ ಕಾಯಬೇಕು.
​​
18 ವರ್ಷ ಮೇಲ್ಪಟ್ಟವರಿಗೆ ಕೋವಿಡ್ ವ್ಯಾಕ್ಸಿನೇಷನ್ ಕಾರ್ಯಕ್ರಮವನ್ನು ರಾಜ್ಯ ಸರ್ಕಾರ ಲಸಿಕೆ ಖರೀದಿಸಿ ಸರಬರಾಜು​ ಮಾಡಿದ ನಂತರ ಪ್ರಾರಂಭಿಸಲಾಗುವುದು. ಈ ಬಗ್ಗೆ ಮುಂದಿನ ದಿನ ಗಳಲ್ಲಿ ತಿಳಿಸಲಾಗುವುದು. ಅಲ್ಲಿಯವರೆಗೆ​ selfregistration.cowin.gov.in​ ​ಅಥವಾ ಆರೋಗ್ಯ ಸೇತು ಆಪ್ ಮೂಲಕ ತಮ್ಮ ಮೊಬೈಲ್ ಸಂಖ್ಯೆಯನ್ನುಬಳಸಿ ನೋಂದಣಿ ಮಾಡ ಬಹುದಾಗಿದೆ.
 
​ರಿಜೆಸ್ಟ್ರೇಷನ್  ಜಿಲ್ಲೆಗೆ ಸರಕಾರದಿಂದ ಲಸಿಕೆ ಬಂದ ತಕ್ಷಣ ಸಾರ್ವಜನಿಕರಿಗೆ ಮಾಹಿತಿಯನ್ನು ನೀಡಲಾಗುವುದು ಎಂದು ಜಿಲ್ಲಾಧಿಕಾರಿ​ ಜಿ.ಜಗದೀಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
 
 
 
 
 
 
 
 
 
 
 

Leave a Reply