ಮಹಾರಾಷ್ಟ್ರ, ಕೇರಳದಿಂದ ಬರುವವರಿಗೆ ಕೋವಿಡ್ ರಿಪೋರ್ಟ್ ಕಡ್ಡಾಯ-ಜಿಲ್ಲಾಧಿಕಾರಿ​ ಜಿ ಜಗದೀಶ್ ​

ಉಡುಪಿ: ಮಹಾರಾಷ್ಟ್ರ,​ ​ಕೇರಳದಿಂದ ಬರುವವರು ಕಡ್ಡಾಯವಾಗಿ ಕೋವಿಡ್ ರಿಪೋರ್ಟ್ ತರಬೇಕು ಎಂದು ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್ ಹೇಳಿದ್ದಾರೆ.

ಬೆಂಗಳೂರಿನಲ್ಲೂ ಪ್ರಕರಣಗಳ ಸಂಖ್ಯೆ ಸಾಕಷ್ಟು ಹೆಚ್ಚಾಗಿದೆ ಎಂದ ಅವರು,​ ​ಬೆಂಗಳೂರಿನಿಂದ ಬಂದವರು ಟೆಸ್ಟ್ ಮಾಡಿಸಿಕೊಳ್ಳಿ.​ ಸಾರ್ವಜನಿಕರು ಮತ್ತು ಕುಟುಂಬದ ಹಿತದೃಷ್ಟಿಯಿಂದ ಟೆಸ್ಟ್ ಮಾಡಿಸಿಕೊಳ್ಳಿ.​ ​ಹೆಲ್ಪ್ ಲೈನ್ ನಂಬರ್ ಗೆ ಕರೆ ಮಾಡಿದರೆ ಟೆಸ್ಟ್ ಗೆ ವ್ಯವಸ್ಥೆ ಮಾಡುತ್ತೇವೆ.​ ​ಸಮುದಾಯಕ್ಕೆ ಕೊರೋನ ಹಬ್ಬುವುದನ್ನು ತಡೆಯಲೇ ಬೇಕಾಗಿದೆ ಎಂದು ಮನವಿ ಮಾಡಿದ್ದಾರೆ.

ಜಿಲ್ಲೆಯಲ್ಲಿ ಪ್ರತಿದಿನ 3000 ಸ್ವಾಬ್ ಟೆಸ್ಟ್ ಮಾಡುತ್ತಿದ್ದೇವೆ.​ ​ಯಾವುದೇ ಒಂದು ಪ್ರದೇಶದಲ್ಲಿ ಹೆಚ್ಚು ಕೇಸುಗಳು ಪತ್ತೆಯಾಗುತ್ತಿಲ್ಲ.​ ಜಿಲ್ಲೆಯ ಅಲ್ಲಲ್ಲಿ ಪ್ರಕರಣಗಳು ಬೆಳಕಿಗೆ ಬರುತ್ತಿವೆ.​ ​ಇಂದು ಎರಡು ಮೈಕ್ರೋ ಕಂಟೋನ್ಮೆಂಟ್ ಝೋನ್ ಮಾಡುತ್ತಿದ್ದೇವೆ ಎಂದರು.​ ಕೇವಲ ಐದು ಪ್ರಕರಣ ಬಂದ ಪರಿಸರದಲ್ಲೂ ಮೈಕ್ರೋ ಕಂಟೋನ್ಮೆಂಟ್ ಝೋನ್ ಎಂದ ಅವರು,ಮಣಿಪಾಲದ ಎಂ ಐಟಿ ಎರಡು ದಿನದಲ್ಲಿ ಕಂಟೈನ್ಮೆಂಟ್ ಮುಕ್ತವಾಗಲಿದೆ ಎಂದರು.

ಜಿಲ್ಲೆಯಲ್ಲಿ ಐಸಿಯು ಗಳ ಕೊರತೆಯಿಲ್ಲ, ವೆಂಟಿಲೇಟರ್- ಆಕ್ಸಿಜನ್ ವ್ಯವಸ್ಥೆ ಕೂಡ ಪರಿಪೂರ್ಣವಾಗಿದೆ. ಆದರೆ ಜಿಲ್ಲೆಯ ಜನ ಮೈಮರೆಯಬಾರದು. ಸಾರ್ವಜನಿಕ ಕಾರ್ಯಕ್ರಮಗಳಿಗೆ, ಜನ ಸೇರುವ ಸ್ಥಳಗಳಿಗೆ ಹೋಗಬೇಡಿ ಎಂದು ಮನವಿ ಮಾಡಿದ್ದಾರೆ.
 
 
 
 
 
 
 
 
 

Leave a Reply