ಮಾಧವ ಕೃಪಾ ಶಾಲೆಯಲ್ಲಿ COVID-19 ಲಸಿಕೆ ಅಭಿಯಾನ

ಮಾಧವ ಕೃಪಾ ಶಾಲೆಯಲ್ಲಿ COVID-19 ಲಸಿಕೆ ಅಭಿಯಾನದಲ್ಲಿ  9 ರಿಂದ 12 ನೇ ತರಗತಿಯ ಸುಮಾರು 350 ವಿದ್ಯಾರ್ಥಿಗಳುಇದರ  ಪ್ರಯೋಜನ ಪಡೆದರು. ಕಾರ್ಯಕ್ರಮವನ್ನು ಮಣಿಪಾಲದ ಕೆಎಂಸಿಯ ಕಮ್ಯುನಿಟಿ ಮೆಡಿಸಿನ್ ವಿಭಾಗದ ಸಹ ಪ್ರಾಧ್ಯಾಪಕ ಡಾ.ಅಶ್ವಿನಿ ಕುಮಾರ್ ಮತ್ತು ಮಣಿಪಾಲದ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಚಾರ್ಮೈನ್ ಜಂಟಿಯಾಗಿ ಉದ್ಘಾಟಿಸಿದರು.
ಡಾ. ಅಶ್ವಿನಿ ಕುಮಾರ್ ಕೋವಿಡ್-19 ವೈರಸ್, ಸರ್ಕಾರದ ಉಪಕ್ರಮಗಳು, ಲಸಿಕೆ ಹಾಕಿಸಿಕೊಳ್ಳುವ ಅಗತ್ಯತೆ ಮತ್ತು ಕಾರ್ಯಕ್ರಮದ ಪ್ರಗತಿಯ ಬಗ್ಗೆ ವಿದ್ಯಾರ್ಥಿಗಳಿಗೆ ವಿವರಿಸಿದರು. ಸಂಚಾಲಕರಾದ  ಶ್ರೀ ಪಿ.ಜಿ. ಪಂಡಿತ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಪ್ರಾಂಶುಪಾಲರಾದ ಶ್ರೀಮತಿ ಜೆಸ್ಸಿ ಆಂಡ್ರ್ಯೂಸ್, ಉಪಪ್ರಾಂಶುಪಾಲೆ ಶ್ರೀಮತಿ ಶಕಿಲಾಕ್ಷಿ ಕೆ ಮತ್ತು ಮುಖ್ಯೋಪಾಧ್ಯಾಯಿನಿ ಶ್ರೀಮತಿ ಆಶಾ ನಾಯಕ್ ಅಮ್ಮುಂಜೆ ಉಪಸ್ಥಿತರಿದ್ದರು.
10ನೇ ತರಗತಿಯ ವಿದ್ಯಾರ್ಥಿಗಳಾದ ಆರ್ಯ ಪ್ರಸೀದ್ ನಿರೂಪಿಸಿದರು . ಶ್ರೀದಾ ಕಾಮತ್ ಸ್ವಾಗತಿಸಿ, ಶ್ರೀ ಅಭಿಜಯ್ ಎನ್.ಎಸ್. ಧನ್ಯವಾದವಿತ್ತರು 

Leave a Reply