ದ.ಕ. ಜಿಲ್ಲೆಯಲ್ಲಿ ಹೆಚ್ಚಿದ ಆತಂಕ : ಕೊರೊನಾ ರೂಪಾಂತರಿ ವೈರಸ್ ‘ಇಟಾ’ ಪತ್ತೆ

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೊನಾ ರೂಪಾಂತರಿ ವೈರಸ್ ‘ಇಟಾ ‘ (B.1.525) ಪ್ರಕರಣ ಆ.05ರ ಗುರುವಾರ ಪತ್ತೆಯಾಗಿದೆ.ಎರಡು ತಿಂಗಳ ಹಿಂದೆ ಕತಾರ್ ನಿಂದ ಬಂದಿದ್ದ ವ್ಯಕ್ತಿಯೊಬ್ಬರಲ್ಲಿ ವಿಮಾನ ನಿಲ್ದಾಣದಲ್ಲಿ ಕೊರೊನಾ ತಪಾಸಣೆ ವೇಳೆ ಕೋವಿಡ್ ಪಾಸಿಟಿವ್ ಪತ್ತೆಯಾಗಿತ್ತು. 

ಅವರ ಗಂಟಲು ದ್ರವದ ಮಾದರಿಯನ್ನು ಅನ್ನು ಹೆಚ್ಚಿನ ಪರಿಶೀಲನೆಗಾಗಿ ಬೆಂಗಳೂರಿನ ವೈರಾಲಜಿ ವಿಭಾಗಕ್ಕೆ ಕಳುಹಿಸಲಾಗಿತ್ತು. ಈ ವೇಳೆ ಆ ವ್ಯಕ್ತಿಯಲ್ಲಿ ಕೊವೀಡ್ ವಂಶಾವಳಿಯು B.1.525, ‘ಇಟಾ’ ತಳಿಯ ವೈರಾಣು ಕಾಣಿಸಿಕೊಂಡಿರುವುದು ದೃಢಪಟ್ಟಿದೆ.ಈ ವೈರಾಣುವಿನ ತೀವ್ರತೆ ತಿಳಿಯಲು ಹೆಚ್ಚಿನ ಅಧ್ಯಯನಗಳು ನಡೆಯಬೇಕಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಈ ಹೊಸ ತಳಿಯ ಮೊದಲ ಪ್ರಕರಣವನ್ನು ಡಿಸೆಂಬರ್ 2020 ರಲ್ಲಿ ಯುಕೆ ಮತ್ತು ನೈಜೀರಿಯಾದಲ್ಲಿ ಪತ್ತೆ ಮಾಡಲಾಗಿತ್ತು. ಮಾರ್ಚ್ 5 ರ ವೇಳೆಗೆ, ಇದು 23 ದೇಶಗಳಲ್ಲಿ ಪತ್ತೆಯಾಗಿತ್ತು.ಇನ್ನು ಇಟಾ ತಳಿ ಕಂಡುಬಂದಿದ್ದ ವ್ಯಕ್ತಿ ಕತಾರ್ ಗೆ ವಾಪಾಸ್ ತೆರಳಿದ್ದು, ಅವರ ಸಂಪರ್ಕಕ್ಕೆ ಬಂದಿದ್ದ ಎಲ್ಲರೂ ಆರೋಗ್ಯವಾಗಿದ್ದಾರೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

 
 
 
 
 
 
 
 
 
 
 

Leave a Reply