ಬೃಹತ್ ರಕ್ತದಾನ, ಆಯುರ್ವೇದ ಆರೋಗ್ಯ ತಪಾಸಣೆ, ಉಚಿತ ಕಣ್ಣಿನ ತಪಾಸಣಾ ಶಿಬಿರ

ಲಯನ್ಸ್ ಕ್ಲಬ್ ಮುನಿಯಾಲು, ಮುನಿಯಾಲು ಉದಯ ಕೃಷ್ಣಯ್ಯ ಶೆಟ್ಟಿ ಚಾರಿಟೇಬಲ್ ಟ್ರಸ್ಟ್ (ರಿ.) ಮುನಿಯಾಲು ಮುನಿಯಾಲು ಆಯುರ್ವೇದ ಕಾಲೇಜು ಮತ್ತು ಆಸ್ಪತ್ರೆ ಮಣಿಪಾಲ್ ಡಾ.ಟಿ.ಎಂ.ಎ. ಪೈ ರೋಟರಿ ಆಸ್ಪತ್ರೆ ಕಾರ್ಕಳ (ಕ್ಯಾಂಪ್ ಆಸ್ಪತ್ರೆ)
ಪ್ರಾಥಮಿಕ ಆರೋಗ್ಯ ಕೇಂದ್ರ ದೊಂಡೆರಂಗಡಿ
ಯತೀಶ್ ಶೆಟ್ಟಿ ಅಭಿಮಾನಿ ಬಳಗ ದೊಂಡೆರಂಗಡಿ ಇವರ ಸಂಯುಕ್ತ ಆಶ್ರಯದಲ್ಲಿ
ದಿ. ಯತೀಶ್ ಶೆಟ್ಟಿ ದೊಂಡೆರಂಗಡಿ ಇವರ 13ನೇ ವರ್ಷದ ಸ್ಮರಣಾರ್ಥ
ಬೃಹತ್ ರಕ್ತದಾನ, ಆಯುರ್ವೇದ ಆರೋಗ್ಯ ತಪಾಸಣೆ, ಉಚಿತ ಕಣ್ಣಿನ ತಪಾಸಣಾ ಶಿಬಿರ
ದಿನಾಂಕ 30.12.2022ನೇ ಶುಕ್ರವಾರ ಬೆಳಿಗ್ಗೆ
ಪ್ರಾಥಮಿಕ ಆರೋಗ್ಯ ಕೇಂದ್ರ ದೊಂಡೆರಂಗಡಿಯಲ್ಲಿ ಲಯನ್ಸ್ ಕ್ಲಬ್ ನ ವಲಯ ಅಧ್ಯಕ್ಷರಾದ ಮಂಜುನಾಥ್.ಟಿ ಶಿಬಿರವನ್ನು ಉದ್ಘಾಟಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಲಯನ್ಸ್ ಕ್ಲಬ್ ನ ಅಧ್ಯಕ್ಷರಾದ ಸೀತಾರಾಮ್ ಕಡಂಬ ರವರುವಹಿಸಿದರು.
ಲಯನ್ ಗೋಪಿನಾಥ್ ಭಟ್ ದಿ.ಯತೀಶ್ ಶೆಟ್ಟಿ ಅವರ ಬಗ್ಗೆ ಪ್ರಾಸ್ತಾವಿಕವಾಗಿ ಮಾತನಾಡಿದರು.
ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಯಾದ ಡಾ. ಚಂದ್ರಿಕಾ ಕಿಣಿ ರಕ್ತದಾನದ ಬಗ್ಗೆ ಮತ್ತು ಆರೋಗ್ಯ ಇಲಾಖೆಯಲ್ಲಿ ಇರುವ ಸೌಲಭ್ಯದ ಕುರಿತು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ರಕ್ತ ನಿಧಿ ಕೇಂದ್ರದ ವೈದ್ಯಾಧಿಕಾರಿ ಡಾ.ವೀಣಾ, ಮುನಿಯಾಲು ಆಯುರ್ವೇದಿಕ್ ನ ವೈದ್ಯಾಧಿಕಾರಿ ಡಾ. ಪ್ರಮೋದ್ ಶೇಟ್, ಟಿ.ಎಂ.ಎ. ಪೈ ರೋಟರಿ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ನಿಹಿತ್, ಗ್ರಾಮ ಪಂಚಾಯತಿನ ಮಾಜಿ ಅಧ್ಯಕ್ಷರಾದ ಅರುಣ್ ಹೆಗ್ಡೆ, ರಾಘವ ದೇವಾಡಿಗ, ಹಿರಿಯರಾದ ಭೋಜ ಪೂಜಾರಿ ಗ್ರಾಮ ಪಂಚಾಯತ್ ಸದಸ್ಯರಾದ ರಾಘವ ನಾಯ್ಕ ಮತ್ತಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಇತ್ತೀಚೆಗೆ ನಿಧನರಾದ ದಿ. ಯತೀಶ್ ಶೆಟ್ಟಿ ಅವರ ಆಪ್ತರಾಗಿದ್ದ ಅರುಣ್ ಕುಲಾಲ್ ದೊಂಡೆರಂಗಡಿ ಇವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ನಂತರ ಅತಿಥಿಗಳು ಮತ್ತು ಅಭಿಮಾನಿಗಳು ದಿ.ಯತೀಶ್ ಶೆಟ್ಟಿ ಅವರ ಭಾವಚಿತ್ರಕ್ಕೆ ಪುಷ್ಪಾಂಜಲಿಯನ್ನು ಸಲ್ಲಿಸಿದರು.
ಲಯನ್ಸ್ ಕ್ಲಬ್ ನ ಡಾ. ಪ್ರಮೋದ್ ಕುಮಾರ್, ಶಂಕರ್ ಶೆಟ್ಟಿ, ಅಶೋಕ್ ಕುಮಾರ್, ಅಶೋಕ್ ಎಂ. ಶೆಟ್ಟಿ, ಅಖಿಲೇಶ್ ಶೆಟ್ಟಿ, ಪ್ರಸನ್ನ ದೇವಾಡಿಗ ಮತ್ತಿತರರು ಸಹಕರಿಸಿದರು.
ಪ್ರಾರ್ಥನೆಯನ್ನು ಸೌಮ್ಯ ಶ್ರೀ ನೆರವೇರಿಸಿದರು, ಸ್ವಾಗತ ಮತ್ತು ಕಾರ್ಯಕ್ರಮದ ನಿರೂಪಣೆಯನ್ನು ಪ್ರದೀಪ್ ಶೆಟ್ಟಿ ಕುಕ್ಕುಜೆ ನೆರವೇರಿಸಿದರು.
ಶಿಬಿರದಲ್ಲಿ 60 ಜನ ರಕ್ತದಾನ ಮಾಡಿದರು.
97 ಜನ ಕಣ್ಣಿನ ಪರೀಕ್ಷೆಯನ್ನು ಮಾಡಿದರು, 40 ಜನ ಆಯುರ್ವೇದ ತಪಾಸಣಾ ಶಿಬಿರದಲ್ಲಿ ಪಾಲ್ಗೊಂಡಿದ್ದರು.

 
 
 
 
 
 
 
 
 

Leave a Reply