ಉಡುಪಿ ಜಿಲ್ಲೆಯಲ್ಲಿ ​1314 ವರದಿಗಳು ನೆಗೆಟಿವ್​, 278 ಪಾಸಿಟಿವ್  

ಉಡುಪಿ: ಉಡುಪಿ ಜಿಲ್ಲೆಯಲ್ಲಿ ಶುಕ್ರವಾರ ಒಟ್ಟು 278 ಮಂದಿಗೆ ಕೊರೋನಾ ಪಾಸಿಟಿವ್ ದೃಢಗೊಂಡಿದೆ. ಈ ಮೂಲಕ ಜಿಲ್ಲೆಯಲ್ಲಿ ಒಟ್ಟು ಕೊರೊನಾ ಸೋಂಕಿತರ ಸಂಖ್ಯೆ 9661ಕ್ಕೆ ಏರಿಕೆಯಾಗಿದೆ.​ ​ಸೋಂಕಿತರಲ್ಲಿ ಉಡುಪಿಯ 159, ಕುಂದಾಪುರದ 100, ಕಾರ್ಕಳದ 99 ಹಾಗೂ ಇತರೆ ಜಿಲ್ಲೆಗಳ 85 ರೋಗಿಗಳು ಇದ್ದಾರೆ. 85 ಸೋಂಕಿತರಿಗೆ ರೋಗದ ಗುಣಲಕ್ಷಣಗಳು ಕಂಡು ಬಂದರೆ 193 ಮಂದಿಗೆ ಲಕ್ಷಣಗಳು ಇಲ್ಲ.​ ​ಪ್ರಾಥಮಿಕ ಸಂಪರ್ಕದಿಂದ 114, ಐಎಲ್ಐ ಲಕ್ಷಣಗಳಿರುವ 68, ಹಾಗೂ ಹೊರ ಜಿಲ್ಲೆ, ಹೊರದೇಶಗಳ ಪ್ರಯಾಣ ಹಿನ್ನೆಲೆ ಹೊಂದಿರುವ 1 ಮಂದಿಗೆ ಸೋಂಕು ತಗುಲಿದ್ದು, 89 ಜನರ ಸೋಂಕಿನ ಮೂಲವನ್ನು ಪತ್ತೆ ಹಚ್ಚಲಾಗುತ್ತಿದೆ.​ ​

ಸೋಂಕಿತರ ಪ್ರಾಥಮಿಕ ಸಂಪರ್ಕಕ್ಕೆ ಬಂದ, ಶೀತಜ್ವರ, ಉಸಿರಾಟದ ಸಮಸ್ಯೆ ಇರುವ 1516 ಜನರ ಗಂಟಲ ದ್ರವದ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ.​ ​ಜಿಲ್ಲೆಯಲ್ಲಿ ಶುಕ್ರವಾರ 365 ಮಂದಿ ಗುಣಮುಖರಾಗಿದ್ದು ಇದುವರೆಗೂ 6857 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಸದ್ಯ 2729 ಸಕ್ರಿಯ ಪ್ರಕರಣಗಳು ಬಾಕಿ ಇವೆ. ಜಿಲ್ಲೆಯಲ್ಲಿ ಇದುವರೆಗೆ ಕೊರೋನಾದಿಂದ ಒಟ್ಟು 82ಮಂದಿ ಸಾವನಪ್ಪಿದ್ದಾರೆ

 
 
 
 
 
 
 
 
 
 
 

Leave a Reply