ಉಡುಪಿ: ಕೋವಿಡ್ ಸೋಂಕಿನಿಂದ 90 ಮಂದಿ ಗುಣಮುಖ

ಜಿಲ್ಲೆಯಲ್ಲಿ ಸೋಮವಾರ 106 ಮಂದಿಗೆ ಸೋಂಕು ವರದಿಯಾಗಿದೆ. ಇದೇ ವೇಳೆ 90 ಮಂದಿ ಗುಣಮುಖರಾಗಿದ್ದಾರೆ. ಜಿಲ್ಲೆಯಲ್ಲಿ 837 ಸಕ್ರಿಯ ಪ್ರಕರಣಗಳಿವೆ.

ಇಂದು 2,420 ಮಂದಿಯನ್ನು ಪರೀಕ್ಷೆಗೊಳಪಡಿಸಲಾಗಿದ್ದು, ಆ ಪೈಕಿ 89 ಮಂದಿ ಮನೆ ಆರೈಕೆ ಹಾಗೂ 17 ಮಂದಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಸೋಂಕಿತರ ಪೈಕಿ ಉಡುಪಿಯ 33, ಕುಂದಾಪುರ 48, ಕಾರ್ಕಳ 23 ಹಾಗೂ ಹೊರಜಿಲ್ಲೆಗಳ 2 ಮಂದಿ ಸೇರಿದ್ದಾರೆ ಎಂದು ಡಿಎಚ್.ಓ ಡಾ. ನಾಗಭೂಷಣ ಉಡುಪ ತಿಳಿಸಿದ್ದಾರೆ

 
 
 
 
 
 
 
 
 
 
 

Leave a Reply