Janardhan Kodavoor/ Team KaravaliXpress
26 C
Udupi
Monday, May 17, 2021

​ ​ಜಿಲ್ಲೆಯಲ್ಲಿ ಹೆಚ್ಚು ಕೋವಿಡ್ ಟೆಸ್ಟ್ ನೆಡೆಸಿ, ಸೋಂಕಿತರಿಗೆ ಕೂಡಲೇ ಚಿಕಿತ್ಸೆ ನೀಡಿ :​ ಉಸ್ತುವಾರಿ ಸಚಿವ ಬೊಮ್ಮಾಯಿ

ಉಡುಪಿ​: ಜಿಲ್ಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕೋವಿಡ್ ​ಪರೀಕ್ಷೆಗಳನ್ನು ನೆಡೆಸಿ, ತ್ವರಿತವಾಗಿ​ ಸೋಂಕಿತರನ್ನು ಪತ್ತೆ ಹಚ್ಚಿ, ಕೂಡಲೇ ಅವರಿಗೆ ಚಿಕಿತ್ಸೆ ಆರಂಬಿಸುವುದರ ಮೂಲಕ ಜಿಲ್ಲೆಯಲ್ಲಿ ಕೋವಿಡ್ ಎರಡನೇ ಅಲೆ​ ಹರಡುವುದನ್ನು ನಿಯಂತ್ರಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು , ನಿಲರ್ಕ್ಷಿಸದರೆ ಸೋಂಕು ವ್ಯಾಪಕವಾಗಿ ಹರಡಲಿದೆ​ ಎಂದು ರಾಜ್ಯದ ಗೃಹ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಅವರು ಇಂದು ಬೆಂಗಳೂರಿನ ವಿಕಾಸಸೌಧದಿಂದ ವೀಡಿಯೋ ಕಾನ್ಫರೆನ್ಸ್ ಮೂಲಕ ಜಿಲ್ಲೆಯಲ್ಲಿ ಕೋವಿಡ್ ನಿಯಂತ್ರ ಣಕ್ಕೆ​ ತೆಗೆದುಕೊಂಡಿರುವ ಕ್ರಮಗಳ ಕುರಿತ ಸಭೆಯಲ್ಲಿ ಮಾತನಡಿದರು.​ ಪ್ರಸ್ತುತ ಜಿಲ್ಲೆಯಲ್ಲಿ ಪ್ರತೀ ದಿನ 3000 ಪರೀಕ್ಷೆಗಳನ್ನು ನಡೆಸುತ್ತಿದ್ದು ಈ ಪ್ರಮಾಣವನ್ನು 4000 ಕ್ಕೆ ಹೆಚ್ಚಿಸಿ, ಪರೀಕ್ಷೆ ವರದಿಯ​ ವಿವರಗಳನ್ನು ಶೀಘ್ರದಲ್ಲಿ ಪಡೆದು, ಸ್ವಾಬ್ ಸಂಗ್ರಹದ ಪರೀಕ್ಷೆಯನ್ನು ಅವಶ್ಯವಿದ್ದಲ್ಲಿ ಜಿಲ್ಲೆಯ ಖಾಸಗಿ ಲ್ಯಾಬ್ ಗಳ ಮೂಲಕ​ ಸಹ ನಡೆಸಿ, ಸೋಂಕಿತರನ್ನು ಶೀಘ್ರದಲ್ಲಿ ಪತ್ತೆ ಹಚ್ಚಿ ಅವರ ಚಿಕಿತ್ಸೆಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳಿ, 

 
ಪ್ರತೀ ಸೋಂಕಿತರ​ ಪ್ರಾಥಮಿಕ ಸಂಪರ್ಕದ 30 ಮಂದಿಯ ಕೋವಿಡ್ ಪರೀಕ್ಷೆ ನಡೆಸಿ, ಎಲ್ಲಾ ನಗರ ವ್ಯಾಪ್ತಿಯಲ್ಲಿ ಟಸ್ಟಿಂಗ್ ಗಳನ್ನು ಆದ್ಯತೆಯ​ ಮೇಲೆ ಕೈಗೊಳ್ಳಿ . ಆಸ್ಪತ್ರೆಗಳಲ್ಲಿ ದಾಖಲಾದ ಸೋಂಕಿತರ ಚಿಕಿತ್ಸೆಗೆ ಹೆಚ್ಚಿನ ಕಾಳಜಿ ವಹಿಸಿ , ಆಸ್ಪತ್ರೆಗಳಲ್ಲಿ ಬೆಡ್ ಗಳ​ ಕೊರತೆ​ಯಾಗದಂತೆ ಎಚ್ಚರವಹಿಸಿ ಎಂದು ಸಚಿವ ಬೊಮ್ಮಾಯಿ ಸೂಚನೆ ನೀಡಿದರು.

ಕೋವಿಡ್ ದೃಡಪಟ್ಟು ಮನೆಯಲ್ಲಿಯೇ ಚಿಕಿತ್ಸೆ ಪಡೆಯುತ್ತಿರುವವರ ಆರೋಗ್ಯದ ಸುದಾರಣೆಯನ್ನು ಆಶಾ ಕಾರ್ಯ ಕರ್ತೆಯರು,​ ಆರೋಗ್ಯ ಕಾರ್ಯಕರ್ತರು ಆಗಿಂದಾಗ್ಗೆ ಮನೆ ಬೇಟಿ ನೀಡಿ ಪರಿಶೀಲಿಸಬೇಕು, ಅವರು ಮನೆ ಬಿಟ್ಟು ಹೊರೆಗೆ ತಿರುಗಾಡದಂತೆ​ ನಿಗಾ ವಹಿಸಬೇಕು.​ ಕರೋನಾ ನಿಯಂತ್ರಣಕ್ಕೆ ಜಾರಿಗೆ ತರಲಾಗಿರುವ ರಾತ್ರಿ ಹಾಗೂ ವೀಕೆಂಡ್ ಕೊರೋನಾ ಕರ್ಫ್ಯೂ ವನ್ನು ಸಾರ್ವಜನಿರನ್ನು​ ವಿಶ್ವಾಸಕ್ಕೆ ತೆಗೆದಕೊಳ್ಳುವದರೊಂದಿಗೆ ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸಬೇಕು. 
 
ಸಾರ್ವಜನಿಕರು ಹೆಚ್ಚು ಹೆಚ್ಚು ಒಂದಡೆ​ ಸೇರದಂತೆ ಎಚ್ಚರವಹಿಸಿಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾದಿಕಾರಿಗೆ ಸೂಚನೆ ನೀಡಿದರು.​ ಕರೋನ ಪೀಡಿತರು ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುವುದು ಅವಶ್ಯವೆಂದು ಕಂಡು​ಬಂದಲ್ಲಿ ತಕ್ಷಣದಲ್ಲಿಯೇ ಖಾಸಗಿ​ ಆಸ್ಪತ್ರೆಗಳಲ್ಲಿ ಎಬಿಆರ್‌ಕೆ ಅಡಿಯಲ್ಲಿ ಚಿಕಿತ್ಸೆ ಪಡೆಯಲು ಶಿಫಾರಸ್ಸು ಮಾಡ ಬೇಕೆಂದ ಅವರು ಸಾಮಾನ್ಯ ರೋಗಿಗಳಾಗಿದ್ದಲ್ಲಿ​ ಸರ್ಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಬೇಕೆಂದು ಸೂಚನೆ ನೀಡಿದರು.

ಜಿಲ್ಲೆಯಲ್ಲಿ ಸಾಮಾಜಿಕ ಅಂತರ ಉಲ್ಲಂಘನೆಯಾಗುವ ಕಾರ್ಯಕ್ರಮಗಳಿಗೆ ಅನುಮತಿ ನೀಡಬೇಡಿ , ಧಾರ್ಮಿಕಕಾರ್ಯಗಳನ್ನು ದೇವಾಲಯದೊಳಗೆ ನಿಗಧಿತ ಸಂಖ್ಯೆಗೆ ಸೀಮಿತಗೊಳಿಸಿ ಆಚರಣೆ ನಡೆಸಿ, ಮೆರವಣಿಗೆಗೆ ಅವಕಾಶನೀಡಬೇಡಿ. ಕುಂಭಮೇಳ​ದಂತಹ ಮಹಾ ಆಚರಣೆಯನ್ನೆ ಪ್ರದಾನಮಂತ್ರಿಗಳು ಮೊಟಕುಗೊಳಿಸಿದ್ದಾರೆ ಅಲ್ಲದೇ ಸುಪ್ರಸಿದ್ದ​ ಬೆಂಗಳೂರು ಕರಗವನ್ನೂ ಸಹ ನಿಲ್ಲಿಸಲಾಗಿದೆ , ಕೋವಿಡ್ ನಿಯಮಾವಳಿ ಉಲ್ಲಂಘನೆ ಆಗದಂತೆ ಧಾರ್ಮಿಕ ಕಾರ್ಯಕ್ರಮ​ ನಡೆಸಿ ಎಂದು ಸಚಿವರು ಸೂಚನೆ ನೀಡಿದರು.​​

ಪ್ರಸ್ತುತ ಮುಂಬೈ ಲಾಕ್ ಡೌನ್ ಆಗಿರುವ ಕಾರಣ ಅಲ್ಲಿಂದ ಹೆಚ್ಚಿನ ಸಂಖ್ಯೆಯಲ್ಲಿ ಹಾಗೂ ಕೇರಳದಿಂದ ಸಹ ನಾಗರೀಕರು​ ಜಿಲ್ಲೆಗೆ ಆಗಮಿಸುತ್ತಿದ್ದು, ಇದರಿಂದ ಜಿಲ್ಲೆಯಲ್ಲಿ ಸೋಂಕು ಉಲ್ಬಣಗೊಳ್ಳುವ ಸಾಧ್ಯತೆಗಳಿದ್ದು , ಹೊರಗಿನಿಂದ ಬಂದವರ ಸ್ವಾಬ್​ ಸಂಗ್ರಹಿಸಿ ಪರೀಕ್ಷೆ ನಡೆಸಿ, ಜಿಲ್ಲೆಗೆ ಅಗತ್ಯಕ್ಕನುಗುಣವಾಗಿ ರೆಮಿಡಿಸಿವರ್ ಮತ್ತು ಕೋವಿಡ್ ಲಸಿಕೆಯನ್ನು ಸರಬರಾಜು​ ಮಾಡುವ ಬಗ್ಗೆ ಕ್ರಮ ಕೈಗೊಳ್ಳಲಾಗುವುದು, 

 
ಆಕ್ಷಿಜಿನ್ ಕೊರೆತೆಯಾಗಂತೆ ಎಚ್ಚರವಹಿಸಿ, ಮೀನುಗಾರಿಕೆಗೆ​ ತೊಂದರೆಯಾಗ​ದಂತೆ  ಕ್ರಮಗಳನ್ನು ಕೈಗೊಳ್ಳಿ ಎಂದು ಸಚಿವರು ಹೇಳಿದರು.​ ಕೋವಿಡ್ ನಿಯಂತ್ರಣ ಕಾರ್ಯಗಳಿಗೆ ಅಗತ್ಯವಿದ್ದಲ್ಲಿ ವೈದ್ಯಕೀಯ ಸಿಬ್ಬಂದಿ ವರ್ಗ ಒಳಗೊಂ​ಡಂತೆ ಇತರೆ ಇಲಾಖೆಗಳ​ ಅಧಿಕಾರಿ ಮತ್ತು ಸಿಬ್ಬಂದಿ ವರ್ಗದವನ್ನು ಬಳಕೆ ಮಾಡಿಕೊಳ್ಳಬೇಕೆಂದು ಸೂಚನೆ ನೀಡಿದರು.

ಜಿಲ್ಲೆಯಲ್ಲಿ ಎರಡನೇ ಅಲೆ ನಿಯಂತ್ರಣಕ್ಕೆ ಕೈಗೊಂಡಿರುವ ಕ್ರಮಗಳ ಕುರಿತು ವಿವರಿಸಿದ ಜಿಲ್ಲಾಧಿಕಾರಿ ಜಿ.ಜಗದೀಶ್,​ ಕೋವಿಡ್ ಪರೀಕ್ಷೆಗಳನ್ನು ಹೆಚ್ಚಿಸಲು ಕ್ರಮ ಕೈಗೊಳ್ಳಲಾಗುವುದು , ಎಲ್ಲಾ ಖಾಸಗಿ ಆಸ್ಪತ್ರೆಗಳಲ್ಲಿ ಬೆಡ್ ಗಳನ್ನು ಮೀಸಲಿಡಲು​ ಈಗಾಗಲೇ ಸೂಚನೆ ನೀಡಲಾಗಿದೆ ಎಂದರು.​ ಸಭೆಯಲ್ಲಿ ಶಾಸಕ ರಘುಪತಿ ಭಟ್, ಲಾಲಾಜಿ ಮೆಂಡನ್, ಕರಾವಳಿ ಅಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ,​ ಜಿಲ್ಲಾ ಪಂಚಾಯತ್ ಸಿಇಓ ಡಾ.ನವೀನ್ ಭಟ್, ಎಸ್ಪಿ ವಿಷ್ಣುವರ್ಧನ್, ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಕುಂದಾಪುರ​ ಉಪವಿಭಾಗಾಧಿಕಾರಿ ರಾಜು, ಡಿಹೆಚ್‌ಓ ಡಾ.ಸುದೀರ್ ಚಂದ್ರ ಸೂಡಾ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.
- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

ತೌಕ್ತೆ ಚಂಡಮಾರುತದ ಪರಿಣಾಮ ಕಾಪು  ಪರಿಸರದಲ್ಲಿ ಹಾನಿಗೊಳಗಾದ ಪ್ರದೇಶಕ್ಕೆ ಮಾಜಿ ಸಚಿವ ವಿನಯ್ ಕುಮಾರ್ ಸೊರಕೆಭೇಟಿ 

ಮಾಜಿ ಸಚಿವ ವಿನಯ್ ಕುಮಾರ್ ಸೊರಕೆಯವರು ಶನಿವಾರದಂದು ತೌಕ್ತೆ ಚಂಡಮಾರುತದ ಪರಿಣಾಮ ಕಾಪು  ಪರಿಸರದಲ್ಲಿ ಹಾನಿಗೊಳಗಾದ ಪರಿಸರಕ್ಕೆ ಭೇಟಿ ನೀಡಿ ಜನರಿಗೆ ಧೈರ್ಯ ತುಂಬುವ ಕೆಲಸ ಮಾಡಿದರು.  ಹಾನಿಗೊಳಗಾದ ಪ್ರದೇಶದ ಕುರಿತು...

ಸೋದೆ, ಶಿರೂರು ಉಭಯ ಶ್ರೀಗಳಿಂದ ಪಲಿಮಾರು ಮೂಲ ಮಠಕ್ಕೆ ಭೇಟಿ 

ಶೀರೂರು ಮಠಕ್ಕೆ ಪಟ್ಟಾಭಿಷಿಕ್ತರಾದ ಶ್ರೀ ವೇದವರ್ಧನ ತೀರ್ಥ ಶ್ರೀಪಾದರು ಸೋದೆ ಶ್ರೀವಿಶ್ವ ವಲ್ಲಭ ತೀರ್ಥರ ಜೊತೆಯಾಗಿ ಪಲಿಮಾರು ಮೂಲಮಠಕ್ಕೆ ಭೇಟಿ ನೀಡಿ ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದರಿಗೆ ಹಾಗೂ ಶ್ರೀವಿದ್ಯಾರಾಜೇಶ್ವರ ತೀರ್ಥ ಶ್ರೀಪಾದರಿಗೆ...

ಪೆರಂಪಳ್ಳಿ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದಲ್ಲಿ ನಡೆಯುತ್ತಿದೆ ಪ್ರಗತಿಕಾರ್ಯ

ಉಡುಪಿ: ಜಿಲ್ಲೆಯ ಶಿವಳ್ಳಿ ಗ್ರಾಮದ ಪೆರಂಪಳ್ಳಿ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದಲ್ಲಿ ಕೆಲವು ನವೀಕರಣ ಕಾರ್ಯಗಳನ್ನು ಕೈಗೆತ್ತಿಕೊಂಡಿದ್ದು ಮೊದಲ ಹಂತದಲ್ಲಿ ಶ್ರೀ ಮಹಾಗಣಪತಿಯ ಗುಡಿ ತೀರ್ಥಮಂಟಪಗಳನ್ನು ನೂತನವಾಗಿ ನಿರ್ಮಿಸಲಾಗುತ್ತಿದೆ .‌ ಸೀಮಿತ ಅವಧಿಯೊಳಗೆ ಕಾರ್ಯಗಳನ್ನು...

​ಕಾಪು ಸಮುದ್ರ ಮಧ್ಯೆ ಸಿಲುಕಿಕೊಂಡಿರುವ 9 ಕಾರ್ಮಿಕರ ರಕ್ಷಣೆಗೆ ಪ್ರಧಾನಿ, ರಕ್ಷಣಾ ಸಚಿವರಿಗೆ ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಮನವಿ

ಭಾರತ ಸರಕಾರದ ರಕ್ಷಣಾ ಸಚಿವರಾದ ಶ್ರೀ ರಾಜನಾಥ್ ಸಿಂಗ್ ಮತ್ತು ಗೌರವಾನ್ವಿತ ಪ್ರಧಾನಮಂತ್ರಿಯವರಾದ ಶ್ರೀ ನರೇಂದ್ರ ಮೋದಿಯವರೇ, ಉಡುಪಿ ಜಿಲ್ಲೆಯ ಕಾಪು ಸಮುದ್ರ ತೀರದಿಂದ ಸಮುದ್ರದ ಮಧ್ಯದಲ್ಲಿ ಈ ಬಡಪಾಯಿ ಕಾರ್ಮಿಕರು ಸಿಕ್ಕಿಬಿದ್ದಿರುತ್ತಾರೆ, ಸಮುದ್ರ...
error: Content is protected !!