ಕೊರೊನಾ 3ನೇ ಅಲೆ ಸ್ಫೋಟ, ಬೆಂಗಳೂರು ಅಪಾರ್ಟ್​​​ಮೆಂಟ್​​ನಲ್ಲಿ ಸೋಂಕು, ಸೀಲ್​​ಡೌನ್​​!

ಧಾರವಾಡ , ದೆಹಲಿಗೆ ಪ್ರಯಾಣ ಮಾಡಿ ವಾಪಸ್ ಆದವರಲ್ಲಿ ಕೊರೊನಾ ಪತ್ತೆಯಾಗಿದೆ. ಅಪಾರ್ಟ್​​ಮೆಂಟ್​ ನಿವಾಸಿಗಳಲ್ಲಿ ಕೊರೊನಾ ಕಾಣಿಸಿಕೊಂಡ ಹಿನ್ನೆಲೆ ಸೋಂಕು ನಿಯಂತ್ರಿಸಲು ಅಪಾರ್ಟ್ ಮೆಂಟ್ A ಬ್ಲಾಕನ್ನು ಸೀಲ್ ಡೌನ್ ಮಾಡಲಾಗಿದೆ. A ಬ್ಲಾಕ್‌ನ 72 ಮನೆಗಳು ಸೀಲ್ ಡೌನ್​ಗೆ ಒಳಪಟ್ಟಿವೆ. ಈ ಭಾಗದ ನಿವಾಸಿಗಳು ಕೆಲಸ‌, ಊರು , ಟೂರು ಏನು ಮಾಡುವಂತಿಲ್ಲ, ಮನೆಯಲ್ಲಿ ಇರಲೇಬೇಕು, ಕಂಟೈನ್ ಮೆಂಟ್ ಆಗಲೇ ಬೇಕು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪಕ್ಕದ ಕೇರಳ, ಮಹಾರಾಷ್ಟ್ರದಲ್ಲಿ ಕೊರೋನಾ ಸ್ಪೋಟಗೊಂಡಿದೆ. ಈ ನಡುವೆ ಬೆಂಗಳೂರು ಸೇರಿದಂತೆ ಗಡಿ ಭಾಗದಲ್ಲಿ ಸೋಂಕಿನ ಪ್ರಮಾಣ ಏರಿಕೆಯಾಗ್ತಿದೆ. ಹೀಗಿದ್ರೂ ಸರ್ಕಾರ ಎಚ್ಚೆತ್ತುಕೊಳ್ಳದೆ ದಿವ್ಯ ನಿರ್ಲಕ್ಷ್ಯ ತೋರುತ್ತಿದೆ. ಲಸಿಕೆ ಹಂಚಿಕೆಯನ್ನೂ ಸೂಕ್ತ ರೀತಿಯಲ್ಲಿ ಮಾಡದೆ ನಿರ್ಲಕ್ಷ್ಯ ಮಾಡಿದೆ. ಕೊರೊನಾ ಮೂರ‌ನೇ ಅಲೆ ಆರಂಭದಲ್ಲಿ ಗಡಿ ಭಾಗದ ಜಿಲ್ಲೆಗಳಿಗೆ ವಿಶೇಷ ವೈದ್ಯಕೀಯ ತಂಡ ರಚಿಸಿ‌ ಕಳುಹಿಸಿಕೊಡಬೇಕು. 

ಕೊರೋನಾ ಪರೀಕ್ಷೆ ವರದಿ ಕೇವಲ ಕಡ್ಡಾಯ ಮಾಡುವುದಲ್ಲ, ತಪಾಸಣೆ ಮಾಡಿ ಪ್ರಯಾಣಿಕರಿಗೆ ನೆಗೆಟಿವ್ ಎಂದು ಖಚಿತ ಪಡಿಸಬೇಕು. ಇದ್ಯಾವುದನ್ನೂ ಮಾಡದೆ ಸಭೆ ಮಾಡಿ ಮಾಸ್ಕ್ ಹಾಕಿ ಸಾಮಾಜಿಕ ಅಂತರ ಕಾಪಾಡಿ ಎಂದು ಜನರಿಗೆ ಹೇಳಿದರೆ ನಡೆಯುವುದಿಲ್ಲ.

ಸೂಕ್ತ ಸಮಯದಲ್ಲಿ ಸೂಕ್ತ ನಿರ್ಧಾರ ತೆಗೆದುಕೊಳ್ಳಬೇಕು. ಆಗಸ್ಟ್ ಮಧ್ಯಕ್ಕೆ ಕೊರೋ‌ನಾ ಮೂರ‌ನೇ ಅಲೆ ಅಪ್ಪಳಿಸುವ ಸಾಧ್ಯತೆ ಇದೆ. ಇನ್ನೇನು ಕೆಲವೇ ದಿನಗಳು ಬಾಕಿ, ಅದರ ಮುನ್ಸೂಚನೆ ಇದು ಎಂದು ಸಾರ್ವ ಜನಿಕರ  ಅಭಿಪ್ರಾಯ 

 
 
 
 
 
 
 
 
 
 
 

Leave a Reply