ಶ್ರೀ ಧರ್ಮಸ್ಥಳ ಮ೦ಜುನಾಥೇಶ್ವರ ಆಯುರ್ವೇದ ಮಹಾವಿದ್ಯಾಲಯದ ರೆಡ್‌ಕ್ರಾಸ್ ಘಟಕ, ರಾಷ್ಟ್ರೀಯ ಸೇವಾ ಯೋಜನಾ ಘಟಕಗಳ ಸಹಭಾಗಿತ್ವದಲ್ಲಿ ರಕ್ತದಾನ ಶಿಬಿರವು ಶನಿವಾರದಂದು ಜರುಗಿತು.
ಜಿಲ್ಲಾ ರಕ್ತನಿಧಿ ಘಟಕದ ಅಧಿಕಾರಿ ಡಾ. ವೀಣಾ ಕುಮಾರಿ ಮುಖ್ಯ ಅತಿಥಿಯಾಗಿ ಆಗಮಿಸಿ, ರಕ್ತದಾನದಲ್ಲಿ ಸಂಸ್ಥೆ ವಹಿಸುತ್ತಿರುವ ಕಾಳಜಿಯನ್ನು ಶ್ಲಾಘಿಸಿ, ಮುಂದೆಯೂ ಇದೇ ರೀತಿಯ ಸಹಕಾರವನ್ನು ಅಪೇಕ್ಷಿಸುತ್ತೇವೆ ಎಂದುನುಡಿದರು.

ಎಸ್.ಡಿ.ಎಮ್. ಸಂಶೋಧನಾ ಕೇಂದ್ರದ ಸಂಶೋಧನಾಧಿಕಾರಿಯಾದ ಶ್ರೀ ನವೀನ್‌ಚಂದ್ರ ಎನ್.ಎಚ್. ಅವರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮವು ನೆರವೇರಿತು. ಎನ್ನೆಸ್ಸೆಸ್ ಯೋಜನಾಧಿಕಾರಿ ಡಾ. ವಿದ್ಯಾಲಕ್ಷ್ಮೀ ಕೆ. ಸ್ವಾಗತಿಸಿ ದರು. ರೆಡ್‌ಕ್ರಾಸ್ ಘಟಕದ ಅಧ್ಯಕ್ಷ ಡಾ. ಮೊಹಮ್ಮದ್ ಪೈಸಲ್ ವಿದ್ಯಾರ್ಥಿಗಳಿಗಾಗಿ ಆಯೋಜಿಸಲಾಗಿದ್ದ ಪ್ರಬಂಧ ಸ್ಪರ್ಧೆಯ ವಿಜೇತರ ಪಟ್ಟಿಯನ್ನು ಓದಿದರು. ಮುಖ್ಯ ಅತಿಥಿಗಳು ಬಹುಮಾನ ವಿತರಿಸಿದರು.
ತೃತೀಯ ವರ್ಷದ ಬಿ.ಎ.ಎಮ್.ಎಸ್. ವಿದ್ಯಾರ್ಥಿನಿಯರಾದ ನಿಖಿತಾ ಹಾಗೂ ಹರಿಪ್ರಿಯಾ ಕಾರ್ಯಕ್ರಮ ನಿರೂಪಿಸಿದರು. ಸಭಾ ಕಾರ್ಯಕ್ರಮದ ಬಳಿಕ ಎಸ್.ಡಿ.ಎಂ. ಆಯುರ್ವೇದ ಆಸ್ಪತ್ರೆಯಲ್ಲಿ ಜಿಲ್ಲಾ ರಕ್ತನಿಧಿ ಘಟಕದ ಸಹಯೋಗದಲ್ಲಿ ಕೊವಿಡ್ 19 ನಿಯಮಗಳಿಗನುಸಾರವಾಗಿ ರಕ್ತದಾನ ಶಿಬಿರ ಮುಂದುವರಿಯಿತು.
ವಿದ್ಯಾರ್ಥಿಗಳು, ಸಿಬ್ಬಂದಿ ವರ್ಗದವರಿಂದ ಸುಮಾರು 90 ಯೂನಿಟ್‌ಗಳಿಗೂ ಅಧಿಕ ರಕ್ತವನ್ನು ಸಂಗ್ರಹಿಸಲಾಯಿತು.