Janardhan Kodavoor/ Team KaravaliXpress
28.6 C
Udupi
Thursday, August 11, 2022
Sathyanatha Stores Brahmavara

ಮಣಿಪಾಲ: ಸ್ವಯಂಪ್ರೇರಿತ ರಕ್ತದಾನ ಶಿಬಿರ ಉದ್ಘಾಟನೆ

ಕರಾವಳಿ ಯೂತ್ ಕ್ಹಬ್ (ರಿ) ಉಡುಪಿ, ಅಭಯಹಸ್ತ ಹೆಲ್ಪ್ ಲೈನ್, ಲಯನ್ಸ್ ಕ್ಹಬ್ ಉಡುಪಿ ಚೇತನಾ, ರಕ್ತನಿಧಿ ವಿಭಾಗ ಕೆಎಂಸಿ ಮಣಿಪಾಲ ಇವರ ಸಹಕಾರದಲ್ಲಿ ರಕ್ತನಿಧಿ ವಿಭಾಗ ಕೆಎಂಸಿ ಮಣಿಪಾಲದಲ್ಲಿ ಭಾನುವಾರ  ನಡೆದ ರಕ್ತದಾನ ಶಿಬಿರವನ್ನು ಉಡುಪಿ ನಗರಸಭಾ ಸದಸ್ಯ ಮಂಜುನಾಥ್ ಮಣಿಪಾಲ್ ದೀಪ ಬೆಳಗಿಸಿ ಉದ್ಘಾಟಿಸಿದರು.ಬಳಿಕ ಮಾತನಾಡಿದ ಅವರು ಸಂಘಟನೆಗಳ ಉದ್ದೇಶಗಳು ಸಾಮಾಜಿಕವಾಗಿ ಪ್ರಾಮುಖ್ಯತೆ ಹೊಂದಿದಾಗ ಅವುಗಳ ಕಾರ್ಯವೈಖರಿಗೆ ಮಹತ್ವ  ಮತ್ತು ಸಾಮಾಜಿಕ ವಲಯದಲ್ಲಿ  ಸಹಕಾರ ಸಿಗುತ್ತದೆ ಎಂದ ಅವರು ರಕ್ತದಾನ ಶಿಬಿರಗಳ ಸಂಯೋಜನೆ ಇಂದಿನ ವಾತಾವರಣದಲ್ಲಿ ಅತ್ಯಂತ ಸಮಯೋಚಿತ ಎಂದು ಅವರು ಅಭಿಮತ ವ್ಯಕ್ತ ಪಡಿಸಿದರು. ಸಹಕಾರ ಭಾರತೀ ಅಧ್ಯಕ್ಷ ದಿನೇಶ್ ಹೆಗ್ಡೆ ಅತ್ರಾಡಿ, ಮಣಿಪಾಲ ಎಂಐಟಿಯ ಪ್ರಾದ್ಯಾಪಕ ಡಾ. ಬಾಲಕೃಷ್ಣ ಮದ್ದೋಡಿ, ಕರಾವಳಿ ಯೂತ್ ಕ್ಲಬ್ ಅಧ್ಯಕ್ಷ ಅಶೋಕ್ ಆಚಾರ್ಯ, ಲಯನ್ಸ್ ಕ್ಲಬ್ ಅಧ್ಯಕ್ಷ ರತ್ನಾಕರ್ ಶೆಟ್ಟಿ, ಅಭಯಹಸ್ತ ಅಧ್ಯಕ್ಷ ರಾಜೇಶ್ ಶೆಟ್ಟಿ ಮುನಿಯಾಲು, ಜಗದೀಶ್ ಆಚಾರ್ಯ ಲಯನ್ಸ್, ರಕ್ತದ ಅಪತ್ಭಾಂದವ ಸತೀಶ್ ಸಾಲ್ಯಾನ್ ಮಣಿಪಾಲ್ ಉಪಸ್ಥಿತರಿದ್ದರು.  

ಸತ್ಯ ದೇವಾಡಿಗ ಸ್ವಾಗತಿಸಿದರು. ರಾಮಾಂಜಿ ನಮ್ಮ ಭೂಮಿ ಕಾರ್ಯಕ್ರಮ ನಿರೂಪಿಸಿದರು. ಪ್ರಶಾಂತ್ ವಂದಿಸಿದರು

- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

error: Content is protected !!