ಬೆಳಗಾವಿಯಲ್ಲಿ ಕಾರ್ಯ ನಿರತ 12 ಪತ್ರಕರ್ತರಿಗೆ ಕೊರೋನಾ ಪಾಸಿಟಿವ್

 ಬೆಳಗಾವಿ: ಭಾನುವಾರ ನಡೆಯಲಿರುವ ಲೋಕಸಭಾ ಉಪಚುನಾವಣೆಯ ಮತ ಎಣಿಕೆ ಕೇಂದ್ರಕ್ಕೆ ತೆರಳಲು ಕೊರೋನಾ ನೆಗೆಟಿವ್ ಸರ್ಟಿಫಿಕೇಟ್ ಕಡ್ಡಾಯ ಎಂದು ನಿಯಮವಿತ್ತು. ಹೀಗಾಗಿ ಒಟ್ಟೂ 70 ಪತ್ರಕರ್ತರು ಟೆಸ್ಟ್ ಗೆ ಒಳಗಾಗಿದ್ದರು. ಅವರಲ್ಲಿ 12 ಜನರಿಗೆ ಪಾಸಿಟಿವ್ ದೃಢಪಟ್ಟಿದೆ.

 ಈ ಪೈಕಿ 11 ಜನರಿಗೆ ಕೊರೋನಾದ ಯಾವುದೇ ಲಕ್ಷಣಗಳಿಲ್ಲ. ಇವರೆಲ್ಲರೂ ಹೋಮ್ ಐಸೋಲೇಶನ್ ಮಾಡಿಕೊಂಡರೆ ಸಾಕು, ಆಸ್ಪತ್ರೆಗೆ ದಾಖಲಾಗಬೇಕಿಲ್ಲ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಈ ಎಲ್ಲ ಪತ್ರಕರ್ತರಿಗೆ ಅಗತ್ಯ ಎಲ್ಲ ನೆರವು ಒದಗಿಸುವ ಭರವಸೆಯನ್ನು ಜಿಲ್ಲಾಧಿಕಾರಿಗಳು ನೀಡಿದ್ದಾರೆ.

ಒಂದೊಮ್ಮೆ ಮತ ಎಣಿಕೆಗಾಗಿ ಕೊರೋನಾ ಪರೀಕ್ಷೆ ನಡೆಸದಿದ್ದರೆ, ಈ ಪತ್ರಕರ್ತರಿಗೆ ಕೊರೋನಾ ಇರುವುದೇ ಪತ್ತೆಯಾಗುತ್ತಿರಲಿಲ್ಲ. ಅದು ಕುಟುಂಬದವರಿಗೆ ಹಾಗೂ ಅವರ ಸಂಪರ್ಕಕ್ಕೆ ಬರುವ ಇನ್ನಷ್ಟು ಜನರಿಗೆ ಹರಡುವ ಅಪಾಯವೂ ಇತ್ತು

 
 
 
 
 
 
 
 
 
 
 

Leave a Reply