ಕತ್ತು ನೋವು ಮತ್ತು ಅತಿಸಾರದ ಉಚಿತ ತಪಾಸಣಾ ಹಾಗೂ ಚಿಕಿತ್ಸಾ ಶಿಬಿರ

ಮಣಿಪಾಲ: ಮುನಿಯಾಲು ಆಯುರ್ವೇದ ಕಾಲೇಜು ಮತ್ತು ಆಸ್ಪತ್ರೆ ಮುನಿಯಾಲಿನಲ್ಲಿ ಸೆ.1ರಿಂದ 30ರವರೆಗೆ ಪೂರ್ವಾಹ್ನ 9 ರಿಂದ ಅಪರಾಹ್ನ 4 ರವರೆಗೆ ಕತ್ತು ನೋವು (ಸರ್ವಯಿಕಲ್ ಸ್ಪೋನ್‌ಡೈಲೋಸಿಸ್) ಹಾಗೂ ಗ್ರಹಣಿ ರೋಗ( ಐ.ಬಿ.ಎಸ್) ಮತ್ತು ಅತಿಸಾರ (ದೀರ್ಘಕಾಲೀನ ಭೇದಿ) ಕ್ಕೆ ಸಂಬಂಧಿಸಿದ ರೋಗಗಳಿಗೆ ಉಚಿತ ತಪಾಸಣೆ ಹಾಗೂ ಚಿಕಿತ್ಸಾ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ. ಕಾಲೇಜಿನ ಕಾಯಚಿಕಿತ್ಸಾ ವಿಭಾಗದ ಮುಖ್ಯಸ್ಥ ಡಾ.ಶ್ರೀಪತಿ ಆಚಾರ್ಯ, ದಿಪೋಜ್ವಲನ ಮಾಡುವ ಮೂಲಕ ಸಾಂಕೇತಿಕವಾಗಿ ಉದ್ಘಾಟಿಸಿದರು.

ಉಪ ಪ್ರಾಂಶುಪಾಲ ಡಾ.ಹರಿಪ್ರಸಾದ್ ಶೆಟ್ಟಿ, ಸ್ನಾತಕೋತ್ತರ ಶಿಕ್ಷಣ ವಿಭಾಗದ ಡೀನ್ ಡಾ. ಗುರುರಾಜ ಡಿ, ಹಿರಿಯ ವೈದ್ಯ ಡಾ.ದಿನೇಶ್ ನಾಯಕ್, ವೈದ್ಯ ಡಾ.ಪ್ರೀತಿ ಪಾಟೀಲ್,ಡಾ.ವಿದ್ಯಾಶ್ರೀ, ಡಾ.ಮಾಲಿನಿ, ಡಾ.ಮಾಧವಿ, ಡಾ.ರಶ್ಮಿ ಕಲ್ಕೂರ, ಡಾ.ಲಕ್ಷ್ಮಿ, ಡಾ.ಆರತಿ ಉಪಸ್ಥಿತರಿದ್ದರು. ಈಗಾಗಲೇ ಅನೇಕ ರೋಗಿಗಳು ಈ ಚಿಕಿತ್ಸಾ ಶಿಬಿರದ ಪ್ರಯೋಜನವನ್ನು ಪಡೆದುಕೊಂಡಿದ್ದು ಸಾರ್ವಜನಿಕರುಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಸಂಸ್ಥೆಯ ಪತ್ರಿಕಾ ಪ್ರಕಟಣೆ ತಿಳಿಸಿದೆ.

 
 
 
 
 
 
 
 
 
 
 

Leave a Reply