ಕುಂದಾಪುರ : ಆಂಬುಲೆನ್ಸ್ ನಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ ಮಹಿಳೆ

ಕುಂದಾಪುರ : ಆಲೂರು 108 ಆಂಬುಲೆನ್ಸ್ ನಲ್ಲಿ ಸೆ. 1ರಂದು ಮದ್ಯಾಹ್ನ ದೀಪಿಕಾ ಎಂಬ ಮಹಿಳೆಗೆ ಹೆರಿಗೆ ನೋವು ಕಾಣಿಸಿಕೊಂಡಿದ್ದು, ಆಗ 108 ಆಂಬುಲೆನ್ಸ್ ಗೆ ಕರೆ ಮಾಡಿ ತಿಳಿಸಲಾಯತು. 

ಆಗ ಸ್ಥಳಕ್ಕೆ ಧಾವಿಸಿದ ಆಲೂರ್ ಆಂಬುಲೆನ್ಸ್ ದೀಪಿಕಾಳನ್ನು ಕರೆದುಕೊಂಡು ಆಸ್ಪತ್ರೆಗೆ ಹೋಗುವಾಗ ಹೆರಿಗೆ ನೋವು ತುಂಬಾ ಜಾಸ್ತಿಯಾದಾಗ ದಾರಿ ಮದ್ಯೆ ಆಂಬುಲೆನ್ಸ್ ನಲ್ಲಿ ಹೆರಿಗೆ ಮಾಡಲಾಯತು. ಆ ಆಂಬುಲೆನ್ಸ್ ನಲ್ಲಿದ್ದ ಇಎಂಟಿ ರಾಘವೇಂದ್ರ ಶೆಟ್ಟಿ ಮತ್ತು ಚಾಲಕ ಅಶೋಕ್ ಮೊಗವೀರ ಇದ್ದರು.

ತಾಯಿ ಮತ್ತು ಮಗುವನ್ನು ಕೋಟ ಸಮುದಾಯ ಆರೋಗ್ಯ ಕೇಂದ್ರಕ್ಕೆ ಸೇರಿಸಲಾಯತು. ಅಲ್ಲಿನ ವೈದ್ಯಕಾರಿಗಳು ತಾಯಿ ಮತ್ತು ಮಗು ಆರೋಗ್ಯವಾಗಿದ್ದಾರೆ ಎಂದು ತಿಳಿಸಿದ್ದಾರೆ.

 
 
 
 
 
 
 
 
 
 
 

Leave a Reply