ಶ್ರೀ ಧರ್ಮಸ್ಥಳ ಮ೦ಜುನಾಥೇಶ್ವರ ಆಯುರ್ವೇದ ಕಾಲೇಜು ಹಾಗೂ ಆಸ್ಪತ್ರೆಯಲ್ಲಿ ವಿಜೃಂಭಣೆಯ ಶ್ರೀ ಧನ್ವಂತರಿಜಯಂತಿ ಆಚರಣೆ. 

ಶ್ರೀ ಮಹಾವಿಷ್ಣುವಿನ ಅವತಾರ ಎಂದು ಗುರುತಿಸಲ್ಪಟ್ಟು​ ವೈದ್ಯವಿದ್ಯೆಗೆ ಅಧಿದೇವತೆಯಾದ ಶ್ರೀ ಧನ್ವಂತರಿಯ​ ​ಜಯಂತಿಯನ್ನು ಶ್ರೀ ಧರ್ಮಸ್ಥಳ ಮ೦ಜುನಾಥೇಶ್ವರ ಆಯುರ್ವೇದ ಕಾಲೇಜು ಹಾಗೂ ಆಸ್ಪತ್ರೆ, ಕುತ್ಪಾಡಿ, ಉಡುಪಿಯಲ್ಲಿ​ ವಿಶಿಷ್ಟವಾಗಿ ಡಿಸೆಂಬರ್ ೧೨, ಕಾರ್ತಿಕ ಕೃಷ್ಣಪಕ್ಷದ​ ತ್ರಯೋದಶಿಯಂದು ​ ಪ್ರಾಂಶುಪಾಲ​ ​ ಪ್ರೊ. ಜಿ. ಶ್ರೀನಿವಾಸ ಆಚಾರ್ಯರವರ​ ಅಧ್ಯಕ್ಷತೆಯಲ್ಲಿ ಆಚರಿಸಲಾಯಿತು. 

ವಿದ್ವಾನ್ ಪುರೋಹಿತ​ ಬಾಲಕೃಷ್ಣ ಭಟ್ ಪೂಜಾ ಕಾರ್ಯಕ್ರಮವನ್ನು​ ನೆರವೇರಿಸಿದರು. ಸಹಾಯಕ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ​ ಡಾ. ವೀರ ಕುಮಾರ ಕೆ. ಹಾಗೂ ಅವರ ಧರ್ಮಪತ್ನಿ ಎಸ್.ಡಿ.ಎಮ್.​ ಆಯುರ್ವೇದ ಆಸ್ಪತ್ರೆಯ ವೈದ್ಯೆ ಡಾ. ಉಷಾ ಪಾರ್ವತಿ ಅವರು​ ಪೂಜಾ ಕಾರ್ಯಕ್ರಮದಲ್ಲಿ ಸಕ್ರೀಯವಾಗಿ ಪಾಲ್ಗೊಂಡರು.


​ಸಂಹಿತಾ ಸಿದ್ಧಾಂತ ವಿಭಾಗದ ಸಹಪ್ರಾಧ್ಯಾಪಕ ಸುಬ್ರಹ್ಮಣ್ಯ ಭಟ್ ಪಿ ಹಾಗೂ ಮಾನಸರೋಗ ವಿಭಾಗದ​ ಸಹಪ್ರಾಧ್ಯಾಪಕ ಡಾ. ವಿಜಯೇಂದ್ರ ಭಟ್‌ರವರ ನೇತೃತ್ವದಲ್ಲಿ ವಿದ್ಯಾರ್ಥಿಗ​ಳು ಸಂಕೀರ್ತನೆ​ ನೆರೆವೇರಿಸಿದರು . ವಿವಿಧ ಭಜನಾ​ ಅಭಂಗಗ​ಳಿಂದ ದೇವರನ್ನು ಪ್ರಾರ್ಥಿಸಿದರು. 
 
​ಬಳಿಕ  ಪಾರಿತೋಷಕ ವಿತರಣಾ ಸಮಾರಂಭದಲ್ಲಿ ಸ್ನಾತಕೋತ್ತರ​​ ದ್ಯಾರ್ಥಿಗಳ ಡೀನ್ ಆದಂತಹ ಪಂಚಕರ್ಮ ವಿಭಾಗದ​ ಪ್ರಾಧ್ಯಾಪಕ ಡಾ. ನಿರಂಜನ್‌ರಾವ್, ಸಹಾಯಕ ಡೀನ್ ಹಾಗೂ​ ರೋಗ​ ​ನಿಧಾನ ವಿಭಾಗದ ಪ್ರಾಧ್ಯಾಪಕ ಡಾ. ನಾಗರಾಜ್ ಎಸ್.,​ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ಮಮತಾ​  ಕೆ.ವಿ., ವಿದ್ಯಾರ್ಥಿ ಕ್ಷೇಮ​ ​ಪಾಲನಾಧಿಕಾರಿ ಡಾ. ಸುಚೇತ ಕುಮಾರಿ,​ ಸಹಾಯಕ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಡಾ.​ ವೀರಕುಮಾರ ಕೆ. ಇವರುಗಳು ಪಾರಿತೋಷಕವನ್ನು ವಿತರಿಸಿದರು. 
ವಿವಿಧ ಕ್ರೀಡೆ, ​ಸಾಂಸ್ಕೃತಿಕ ಹಾಗೂ​ ವಿಶ್ವವಿದ್ಯಾಲಯದ ಪರೀಕ್ಷೆಯಲ್ಲಿ ಸಾಧನೆಯನ್ನು​ ಮಾಡಿರುವಂತಹ ವಿದ್ಯಾರ್ಥಿಗಳಿಗೆ ನೈಪುಣ್ಯತೆಯ​ ಪಾರಿತೋಷಕಗಳನ್ನು ಪ್ರದಾನ ಮಾಡಲಾಯಿತು.​ ಕೊನೆಯಲ್ಲಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ​ ಪ್ರಾಂಶುಪಾಲರು ವಿದ್ಯಾರ್ಥಿಗಳನ್ನುದ್ದೇಶಿಸಿ ಎರಡು​ ಹಿತನುಡಿಗಳನ್ನಾಡಿದರು. ಡಾ. ರವಿ ಕೆ.ವಿ. ವಂದನಾರ್ಪಣೆಯನ್ನು​  ಸಲ್ಲಿಸಿದರು. ಕಾರ್ಯಕ್ರಮವನ್ನು ​ರಾಷ್ಟ್ರಗೀತೆಯೊಂದಿಗೆ​ ಮುಗಿಸಲಾಯಿತು.
 
 
 
 
 
 
 
 
 
 
 

Leave a Reply