ಪ್ರಸಾದ್ ನೇತ್ರಾಲಯ​ದಲ್ಲಿ ​ವಿಶ್ವ ದೃಷ್ಟಿ ದಿನಾಚರಣೆ

ಪ್ರಸಾದ್ ನೇತ್ರಾಲಯ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆ, ಉಡುಪಿ ಮತ್ತು ನೇತ್ರ ಜ್ಯೋತಿ ಇನ್ಸಿಟ್ಯೂಟ್ ಆಫ್ ಅಲೈಡ್ ಹೆಲ್ತ್ ಸೈನ್ಸಸ್ ಇವರ ಸಹಯೋಗದಿ೦ದ ಪ್ರಸಾದ್ ನೇತ್ರಾಲಯದಲ್ಲಿ ಅಕ್ಟೋಬರ್ ೮ರ೦ದು ‘ವಿಶ್ವ ದೃಷ್ಟಿ ದಿನಾಚರಣೆ’ಯನ್ನು ಆಚರಿಸಲಾಯಿತು. ಪೂರ್ವಭಾವಿಯಾಗಿ ಕಾಲೇಜಿನ ವಿದ್ಯಾರ್ಥಿಗಳಿಗಾಗಿ ನೇತ್ರ ರಕ್ಷಣೆಯ ಬಗೆಗಿನ ಭಿತ್ತಿ ಚಿತ್ರಗಳ ರಚನೆಮಾಡಿ, ಅವುಗಳನ್ನು ಸಾರ್ವಜನಿಕ ಸ್ಥಳಗಳಲ್ಲಿ ಪ್ರದರ್ಶಿಸುವ ಸ್ಪರ್ಧೆ ಯನ್ನು ನಡೆಸಲಾಯಿತು. 
 
ತಾವು ಮನೆಯಲ್ಲಿಯೇ ರಚಿಸಿದ ಪೋಸ್ಟರ್‌ಗಳನ್ನು ತಮ್ಮ ತಮ್ಮ ಊರುಗಳ ಬಸ್‌ಸ್ಟಾ೦ಡ್, ಮಿಲ್ಕ್ ಬೂತ್, ಪ೦ಚಾಯತು ಕಛೇರಿ, ಶಾಲೆ ಮು೦ತಾದ ಸಾರ್ವಜನಿಕ ಸ್ಥಳಗಳಲ್ಲಿ ಪ್ರದರ್ಶಿಸಿ ಕಣ್ಣಿನ ಆರೋಗ್ಯ ರಕ್ಷಣೆಯ ಕುರಿತಾದ ಜಾಗೃತಿಯನ್ನು ಸಾರ್ವಜನಿಕರಲ್ಲಿ ಮೂಡಿಸುವ ಪ್ರಯತ್ನ ಮಾಡಿದರು. ಈ ದಿನಾಚರಣೆಯ ಅ೦ಗವಾಗಿ ಪ್ರಸಾದ್ ನೇತ್ರಾಲಯದಲ್ಲಿ 12 ಬಡರೋಗಿಗಳಿಗೆ ಕಣ್ಣಿನ ಉಚಿತ ಶಸ್ತçಚಿಕಿತ್ಸೆ ನಡೆಸಲಾಯಿತು.

ಸ೦ಜೆ ನಡೆದ ಸಭಾ ಕಾರ್ಯಕ್ರಮದಲ್ಲಿ ನೇತ್ರ ಆರೋಗ್ಯ ರಕ್ಷಣೆಯೆ ಬಗ್ಗೆ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ. ಕೃಷ್ಣಪ್ರಸಾದ್‌ ರವರಿ೦ದ ಉಪನ್ಯಾಸ ನಡೆಯಿತು. ರಶ್ಮಿ ಕೃಷ್ಣಪ್ರಸಾದ್, ಆಸ್ಪತ್ರೆಯ ವೈದ್ಯರುಗಳು, ಸಿಬ೦ದಿ ವರ್ಗ, ಕಾಲೇಜಿನ ಪ್ರಾ೦ಶುಪಾಲರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

 
 
 
 
 
 
 
 
 
 
 

Leave a Reply