ಖಾಸಗಿ ಆಸ್ಪತ್ರೆಗಳಲ್ಲಿ ಆಯುಷ್ಮಾನ್ ಕಡ್ಡಾಯ: ಸಚಿವ ಕೋಟ ಎಚ್ಚರಿಕೆ

ಮಂಗಳೂರು: ಕರೊನಾ ಚಿಕಿತ್ಸೆ ನೀಡುತ್ತಿ ರುವ ಜಿಲ್ಲೆಯ ಎಲ್ಲ ಖಾಸಗಿ ಆಸ್ಪತ್ರೆಗಳು ಕಡ್ಡಾಯವಾಗಿ ಆಯುಷ್ಮಾನ್ ಭಾರತ್ ಯೋಜನೆಯಡಿ ನೋಂದಾಯಿಸಿ ಕೊಳ್ಳ ಬೇಕು. ನೋಂದಣಿ ಮಾಡದೆ ಹೆಚ್ಚುವರಿ ಬಿಲ್ ನೀಡಿರುವ ಕುರಿತು ಜನರಿಂದ ದೂರು ಬಂದು ಅದರಲ್ಲಿ ಸತ್ಯಾಂಶವಿದ್ದರೆ ಅಂತಹ ಆಸ್ಪತ್ರೆಗಳ ವಿರುದ್ಧ ಜಿಲ್ಲಾಡಳಿತ ಸೂಕ್ತ ಕ್ರಮ ಕೈಗೊಳ್ಳಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಎಚ್ಚರಿಕೆ ನೀಡಿದ್ದಾರೆ.


ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ವೆನ್ಲಾಕ್ ಆಸ್ಪತ್ರೆ ಮತ್ತು ಮಂಗಳೂರು ಮಹಾನಗರ ಪಾಲಿಕೆ ಆಶ್ರಯದಲ್ಲಿ ಕುದ್ಮುಲ್ ರಂಗರಾವ್ ಪುರಭವನದಲ್ಲಿ ಬುಧವಾರ ‘ಕೋವಿಡ್-19, ಆಯುಷ್ಮಾನ್ ಭಾರತ್’ ಯೋಜನೆ ಕುರಿತ ವಿಶೇಷ ಜನ

ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಜಿಲ್ಲೆಯಲ್ಲಿ 8 ವೈದ್ಯಕೀಯ ಕಾಲೇಜುಗಳ ಸಹಿತ 92 ಖಾಸಗಿ ಆಸ್ಪತ್ರೆ ಗಳಿದ್ದು, ಇವುಗಳಲ್ಲಿ 12 ಖಾಸಗಿ ಆಸ್ಪತ್ರೆ ಗಳು ಈಗಾಗಲೇ ಆಯುಷ್ಮಾನ್ ಯೋಜನೆ ಯಡಿ ಚಿಕಿತ್ಸೆ ನೀಡುತ್ತಿವೆ.

ಹೆಚ್ಚುವರಿ 12 ಆಸ್ಪತ್ರೆಗಳು ನೋಂದಣಿ ಹಂತದಲ್ಲಿದ್ದು, ಶೀಘ್ರ ಅನುಮತಿ ಪಡೆಯ ಲಿವೆ. ಉಳಿದ ಆಸ್ಪತ್ರೆಗಳೂ ನೋಂದಣಿ ಮಾಡಿಸಿಕೊಳ್ಳುವ ಮೂಲಕ ಎಲ್ಲರಿಗೂ ಕರೊನಾ ಚಿಕಿತ್ಸೆ ಉಚಿತವಾಗಿ ಸಿಗುವಂತಾಗ ಬೇಕು ಎಂದರು.

ಶಾಸಕ ವೇದವ್ಯಾಸ ಕಾಮತ್ ಅಧ್ಯಕ್ಷತೆ ವಹಿಸಿದ್ದರು. ಶಾಸಕ ಡಾ.ವೈ.ಭರತ್ ಶೆಟ್ಟಿ, ಮೇಯರ್ ದಿವಾಕರ್ ಪಾಂಡೇಶ್ವರ, ಉಪ ಮೇಯರ್ ವೇದಾವತಿ, ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಸೆಲ್ವಮಣಿ ಆರ್, ಪಾಲಿಕೆ ಜಂಟಿ ಆಯುಕ್ತ ಸಂತೋಷ್ ಕುಮಾರ್, ಡಿಸಿಪಿ ಅರುಣಾಂಶುಗಿರಿ, ವೆನ್ಲಾಕ್ ಅಧೀಕ್ಷಕ ಡಾ.ಸದಾಶಿವ ಶ್ಯಾನು ಭಾಗ್ ಉಪಸ್ಥಿತರಿದ್ದರು.

 
 
 
 
 
 
 
 
 

Leave a Reply