ಕೊರೋನಾ ವೈರಸ್ ನಿಗ್ರಹಕ್ಕೆ ಅಭಿವೃದ್ಧಿ ಪಡಿಸಿದ ಲಸಿಕೆಯ ಪ್ರಯೋಗ

ಲಂಡನ್: ಕೊರೋನಾ ವೈರಸ್ ನಿಗ್ರಹಕ್ಕೆ ಬ್ರಿಟನ್ನ ಅಸ್ಟ್ರಾಜೆನೆಕಾ ಹಾಗೂ ಆಕ್ಸ್ಫರ್ಡ್ ವಿವಿ ತಂಡ ಜಂಟಿಯಾಗಿ ಅಭಿವೃದ್ಧಿಪಡಿಸಿದ ಲಸಿಕೆಯನ್ನು ಜಗತ್ತಿನಾದ್ಯಂತ ಈವರೆಗೆ 18,000 ಜನರಿಗೆ ನೀಡಲಾಗಿದೆ.


ಬ್ರಿಟನ್ ವ್ಯಕ್ತಿಯೊಬ್ಬನ ಮೇಲೆ ಕಳೆದ ವಾರ ಲಸಿಕೆ ಪ್ರಯೋಗಿಸಿದ ವೇಳೆ ಆ ವ್ತಕ್ತಿ ಗಂಭೀರ ಅಡ್ಡ ಪರಿಣಾಮ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಕ್ಲಿನಿಕಲ್ ಟ್ರಯಲ್ ಸ್ಥಗಿತ ಗೊಳಿಸಿತ್ತು. ಆದರೆ ಅಮೆರಿಕದ ಔಷಧ ಹಾಗೂ ಆರೋಗ್ಯ ನಿಯಂತ್ರಣ ಸಂಸ್ಥೆಯ ಪರವಾನಗಿ ಪಡೆದುಕೊಂಡು ಮತ್ತೆ ಶನಿವಾರ ಪರೀಕ್ಷಾ ಪ್ರಕ್ರಿಯೆ ಆರಂಭಿಸಿದೆ ಎಂದು ಆಕ್ಸ್ಫರ್ಡ್ ವಿವಿ ಮಾಹಿತಿ ನೀಡಿದೆ.


ಸದ್ಯ ಅಮೆರಿಕ, ಬ್ರಿಟನ್, ಬ್ರೆಜಿಲ್ ಹಾಗೂ ದಕ್ಷಿಣ ಆಫ್ರಿಕಾದಲ್ಲಿ ಈ ಲಸಿಕೆಯ ಅಂತಿಮ ಹಂತದ ಪ್ರಯೋಗ ನಡೆಯುತ್ತಿದ್ದು, ಭಾರತ ದಲ್ಲೂ ಕೂಡ ಮೈಸೂರಿನ ಜೆಎಸ್ಎಸ್ ಆಸ್ಪತ್ರೆ ಸೇರಿ 17 ಕಡೆಗಳಲ್ಲಿ 2ನೇ ಹಂತದ ಪ್ರಯೋಗ ನಡೆಯುತ್ತಿದೆ.

 
 
 
 
 
 
 
 
 
 
 

Leave a Reply