ಇಡೀ ಜಗತ್ತಿಗೆ ಲಸಿಕೆ ನೀಡುವ ಸಾಮರ್ಥ್ಯಭಾರತಕ್ಕಿದೆ- ಬಿಲ್ ಗೇಟ್ಸ್

ಹೊಸದಿಲ್ಲಿ: ಭಾರತದಲ್ಲಿ ತಯಾರಾಗುವ ಕೊರೋನಾ ಲಸಿಕೆಗಾಗಿ ಇಡೀ ಜಗತ್ತೇ ಎದುರು ನೋಡುತ್ತಿದೆ ಎಂದು ಮೈಕ್ರೋ ಸಾಫ್ಟ್ ಸಂಸ್ಥಾಪಕ ಬಿಲ್ ಗೇಟ್ಸ್ ಹೇಳಿ ದ್ದಾರೆ.

ಸುದ್ದಿ ಸಂಸ್ಥೆಯೊಂದಿಗೆ ದೂರವಾಣಿ ಮೂಲಕ ಮಾತನಾಡಿದ ಅವರು, ಭಾರತದ ದೊಡ್ಡ ಪ್ರಮಾಣದಲ್ಲಿ ಕೊರೊನಾ ಲಸಿಕೆ ಯನ್ನು ತಯಾರಿಸಿ, ಜಗತ್ತಿನ ಇತರೆ ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ಪೂರೈಸಲಿದೆ. ಈ ಕ್ಷಣವನ್ನು ಇಡೀ ಜಗತ್ತೆ ಎದುರು ನೋಡು ತ್ತಿದೆ ಎಂದರು.

ಸದ್ಯ ಕೊರೋನಾ ಲಸಿಕೆ ಉತ್ಪಾದನೆಯಲ್ಲಿ ಭಾರತ ಮುಂಚೂಣೆಯಲ್ಲಿದ್ದು, ಲಸಿಕೆ ತಯಾರಿಕೆಯಲ್ಲಿ ನಮಗೆ ಭಾರತದ ಸಹಕಾರ ಬೇಕಿದೆ ಎಂದಿದ್ದಾರೆ. ಇಡೀ ಜಗತ್ತಿಗೆ ಲಸಿಕೆ ರವಾನಿಸುವ ಸಾಮರ್ಥ್ಯ ಭಾರತಕ್ಕಿದ್ದು, ಕೆಲ ಅಭಿವೃದ್ಧಿ ಹೊಂದಿದ ದೇಶಗಳು ಕೂಡ ಭಾರತದ ಸಹಾಯಕ್ಕೆ ಎದುರು ನೋಡುತ್ತಿದೆ ಎಂದಿದ್ದಾರೆ.


ಮುಂದಿನ ವರ್ಷದ ವೇಳೆಗೆ ಭಾರತದಲ್ಲಿ ಹೆಚ್ಚಿನ ಮಟ್ಟದ ಕೊರೋನಾ ಲಸಿಕೆ ಉತ್ವಾದನೆಯಾಗಲಿದ್ದು, ಅದು ಉತ್ತಮ ಗುಣಮಟ್ಟ ಹಾಗೂ ಸುರಕ್ಷಿತವಾಗಿ ಪರಿಣಾಮಕಾರಿಯಾಗಲಿದೆ ಎಂದು ತಿಳಿಸಿದ್ದಾರೆ.

 
 
 
 
 
 
 
 
 

Leave a Reply