ಆರೋಗ್ಯ ಭಾಗ್ಯ

ಹೆಂಗಸರಲ್ಲಿ ಕಾಡುವಂತಹ ಹಾರ್ಮೋನ್ ಸಮಸ್ಯೆಗಳಲ್ಲಿ ಪಿಸಿಒಡಿ ಮತ್ತು ಪಿಸಿಓಎಸ್ ಬಹಳ ಪ್ರಮುಖವಾದ ಕಾಯಿಲೆಗಳು. ಪಿಸಿಒಡಿ ಅಂದರೆ ಪಾಲಿಸಿಸ್ಟಿಕ್ ಒವೇರಿಯನ್ ಡಿಸೀಸ್ ಹಾಗೂ ಪಿಸಿಓಎಸ್ ಅಂದರೆ ಪಾಲಿಸಿಸ್ಟಿಕ್ ಒವೇರಿಯನ್ ಸಿಂಡ್ರೋಮ್. ಎಲ್ಲಾ ಹೆಂಗಸರಲ್ಲಿ ಎರಡು ಓವರೀಸ್ ಇರುತ್ತದೆ   ಹಾಗೂ ಆ ಎರಡು ಓವರೀಸ್ ಯಿಂದ ಪ್ರತಿ ತಿಂಗಳು  ಒಂದು  ಅಂಡಾಣು ಬಿಡುಗಡೆ ಆಗುತ್ತದೆ (alternatively). ಪಿಸಿಒಡಿ ಇರುವ ಹೆಂಗಸರಲ್ಲಿ  ಹಾರ್ಮೋನ್ಗಳ ಅಸಮತೋಲನದಿಂದ  ಓವರೀಸ್ ತುಂಬಾ ಅಪರಿಪೂರ್ಣ ಅಥವಾ ಭಾಗಶಃ ಪೂರ್ಣ ಅಂಡಾಣುಗಳನ್ನು ಬಿಡುಗಡೆ ಮಾಡುತ್ತದೆ . ಈ ಅಂಡಾಣುಗಳು ಕ್ರಮೇಣವಾಗಿ ಸಿಸ್ಟ್ ಆಗಿ ಪರಿವರ್ತನೆಗೊಳ್ಳುತ್ತದೆ .
ಪಿಸಿಒಎಸ್ ಇರುವಂಥ ಹೆಂಗಸರಲ್ಲಿ ಓವರೀಸ್ ಜಾಸ್ತಿ  ಪ್ರಮಾಣದಲ್ಲಿ ಆಂಡ್ರೋಜನ್ ಎನ್ನುವ ಹಾರ್ಮೋನ್ ಅನ್ನು ಬಿಡುಗಡೆ ಮಾಡುತ್ತದೆ. ಇದರಿಂದ ಅಂಡಾಣುಗಳ ಬಿಡುಗಡೆ ಸರಿಯಾದ ಸಮಯದಲ್ಲಿ ಆಗುವುದಿಲ್ಲ ಹಾಗೂ ಅಂಡಾಣುಗಳು ಸರಿಯಾಗಿ ಬೆಳೆಯುವುದು ಕೂಡ ಇಲ್ಲ .
ಮಹಿಳೆಯರಲ್ಲಿ ಪಿಸಿಓಡಿ ಅಥವಾ ಪಿಸಿಓಎಸ್ ಸಮಸ್ಯೆ ಇದೆ ಎಂದು ಹೇಗೆ ತಿಳಿಯಬಹುದು ?
*ಸರಿಯಾದ ಸಮಯದಲ್ಲಿ ಋುತುಚಕ್ರ ಆಗದೇ ಇರುವಂಥದ್ದು.  *ಗರ್ಭವತಿ ಆಗದೇ ಇರುವಂಥದ್ದು . *ಅನಗತ್ಯ ಕೂದಲ ಬೆಳವಣಿಗೆ ಮುಖದಲ್ಲಿ ಹಾಗೂ ದೇಹದಲ್ಲಿ ಆಗುವಂಥದ್ದು . *ದೇಹದ ತೂಕ ಜಾಸ್ತಿ ಆಗುವಂಥದ್ದು . ಇಂತಹ ಲಕ್ಷಣಗಳು ಕಂಡು ಬಂದಲ್ಲಿ ತಕ್ಷಣ ಪಿಸಿಒಡಿ ಅಥವಾ ಪಿಸಿಓಎಸ್  ಸಮಸ್ಯೆ ಇದೆ ಎಂದು ನಿಮ್ಮ ವೈದ್ಯರಲ್ಲಿ ಪರೀಕ್ಷಿಸಿಕೊಳ್ಳುವುದು ಒಳ್ಳೆಯದು .ಯಾವುದರಿಂದ ಪಿಸಿಓಡಿ ಪಿಸಿಒಎಸ್ ಸಮಸ್ಯೆ ಬರಬಹುದು 
*ಮೊದಲಿಗೆ ನಮ್ಮ ಆಹಾರ ಪದ್ಧತಿ. ಜಾಸ್ತಿ ಮಸಾಲೆಯುಕ್ತ ಅಥವಾ ಎಣ್ಣೆಯುಕ್ತ ಆಹಾರವನ್ನು ಯಾವಾಗ್ಲೂ ಸೇವನೆ ಮಾಡುವಂಥವರು.
*ಜಡ ಜೀವನಶೈಲಿಯಲ್ಲಿ ಇದ್ದವರು . *ಮಾನಸಿಕ ಒತ್ತಡದಲ್ಲಿ ಇದ್ದವರು . ಇಂತಹ ವ್ಯಕ್ತಿಗಳಲ್ಲಿ ಪಿಸಿಒಡಿ ಮತ್ತು ಪಿಸಿಓಎಸ್ ಸಮಸ್ಯೆಗಳು ಬರುವಂಥ ಎಲ್ಲಾ ಸಾಧ್ಯತೆಗಳು ಇರುತ್ತದೆ .

ಯಾವ ಯಾವ ಆಹಾರಗಳು ತಿನ್ನಬಾರದು ಎನ್ನುವುದರ ಬಗ್ಗೆ ತಿಳಿಯೋಣ
1) ಸಕ್ಕರೆ ಆಹಾರಗಳು ಅಂದರೆ  ಜ್ಯೂಸ್ ಇರಬಹುದು ಅಥವಾ ಕೇಕ್ಸ್ ಇರಬಹುದು. 2) ಬಿಳಿ ಹಿಟ್ಟು ಆಧಾರಿತ ಆಹಾರಗಳು ಅಥವಾ ಮೈದಾ ಹಿಟ್ಟಿನಿಂದ ಮಾಡಿರುವಂಥ ಆಹಾರಗಳು  ( ಬ್ರೆಡ್ಡು  ಕುಕ್ಕೀಸ್  ಸಮೋಸ ಕಚೋರಿ ಇತ್ಯಾದಿ ) 3) ಸೋಡಿಯಂ ಭರಿತ ಆಹಾರಗಳು ( ಸಾಸ್ , ಚಿಪ್ಸ್ ,ಉಪ್ಪು ಸಹಿತ ಬೀಜಗಳ ಆಹಾರಗಳು ಅಥವಾ ಸಾಲ್ಟೆಡ್ ನಟ್ಸ್ ) 4) ಅತಿಯಾಗಿ ಹಾಲು ಸೇವನೆ (ದನಗಳಲ್ಲಿ ,ಹಾಲು ಹೆಚ್ಚಾಗಲು ಆಂಟಿಬಯಾಟಿಕ್ಸ್  ಹಾಗೂ ಗ್ರೋತ್ ಹಾರ್ಮೋನ್ ಗಳನ್ನು ಚುಚ್ಚು ಮದ್ದಾಗಿ ಕೊಡುತ್ತಾರೆ. ಇಂತಹ ದನಗಳ ಹಾಲಿನ ಸೇವನೆಯಿಂದ ನಮ್ಮ ದೇಹದಲ್ಲಿ ಹಾರ್ಮೋನ್ಗಳ ಅಸಮತೋಲನ ಉಂಟಾಗುತ್ತದೆ ಇದರಿಂದ ಟೆಸ್ಟೊಸ್ಟಿರಾನ್ ಎನ್ನುವ ಹಾರ್ಮೋನ್ ಗಳ ಮಟ್ಟ ಹೆಚ್ಚಾಗಿ ಪಿಸಿಓಎಸ್ ಅಥವಾ ಪಿಸಿಒಡಿ ಸಮಸ್ಯೆ ಬರುವಂಥ ಸಾಧ್ಯತೆಗಳು ಇರುತ್ತದೆ. 5) ಅತಿಯಾದ ಮಾಂಸ ಸೇವನೆ. 6) ಸೋಯಾ ಫ್ಯಾಟ್ಸ್ ಗಳ ಸೇವನೆ. 7) ಟ್ರಾನ್ಸ್ ಕೊಬ್ಬುಗಳು ( ರಿಫೈಂಡ್  ಎಣ್ಣೆಗಳು ಅಥವಾ ಹೈಡ್ರೋಜನೇಟೆಡ್ ಕೊಬ್ಬು ಗಳಿಂದ ದೇಹದಲ್ಲಿ ಬೊಜ್ಜು  ಉತ್ಪಾದನೆ ಜಾಸ್ತಿಯಾಗಿ ಇನ್ಸುಲಿನ್ ರೆಸಿಸ್ಟೆನ್ಸ್ ಹಾಗೂ ಪಿಸಿಓಎಸ್ ಬರುವಂತಹ ಎಲ್ಲ ಸಾಧ್ಯತೆಗಳು ಇರುತ್ತದೆ. 8) ಕೆಫಿನ್ಯುಕ್ತ ಪಾನೀಯಗಳು.(ಹಾರ್ಮೋನ್ಸ್ ಗಳ ಬೆಳವಣಿಗೆಗೆ ಖನಿಜಗಳು ಬಹಳ ಅಗತ್ಯ . ಕೆಫಿನ್ಯುಕ್ತ ಪಾನೀಯಗಳು        ಮೂತ್ರ ವರ್ಧಕ ಹಾಗಾಗಿ ಅದು ನಮ್ಮ ದೇಹದಲ್ಲಿ ಇರುವಂತಹ ಖನಿಜಗಳನ್ನು ನಿರ್ಮೂಲ ಮಾಡುತ್ತದೆ.  ಇದರಿಂದ ಹಾರ್ಮೋನ್          ಗಳ  ಅಭಿವೃದ್ಧಿ ಕಡಿಮೆಯಾಗುತ್ತದೆ . 9)  ಅತಿಯಾದ ಮದ್ಯಪಾನ 10) ಕೃತಕ ಸಿಹಿಕಾರಕಗಳು  (ಇದರ ಸೇವನೆಯಿಂದ ಇಸ್ಟ್ರೋಜನ್ ಹಾಗೂ ಟೆಸ್ಟೊಸ್ಟಿರಾನ್ ಹಾರ್ಮೋನ್ ಗಳ ಅತಿಯಾದ ಉತ್ಪಾದನೆ ಆಗಿ ಪಿಸಿಒಡಿ ಅಥವಾ ಪಿಸಿಎಸ್ ಆಗುವಂತಹ ಸಾಧ್ಯತೆಗಳು ಇರುತ್ತದೆ  .

 
ಪಿಸಿಒಡಿ ಮತ್ತು ಪಿಸಿಓಎಸ್ ಸಮಸ್ಯೆಗಳಿಗೆ ಆಯುರ್ವೇದದಲ್ಲಿ ಬಹಳಷ್ಟು ಉಪಚಾರಗಳನ್ನು ತಿಳಿಸಿದ್ದಾರೆ ಕೆಲವೊಂದು ಉಪಚಾರಗಳನ್ನು ತಿಳಿಯೋಣ
ಮೊದಲಿಗೆ ಸಮತೋಲನ ಆಹಾರ ಅಥವಾ ವೆಲ್ ಬ್ಯಾಲೆನ್ಸಡ್ ಡಯಟ್ ಅನ್ನು ನಾವು ಅನುಸರಿಸಬೇಕು.ನಮ್ಮ ಆಹಾರದಲ್ಲಿ ಹಣ್ಣುಗಳು, ತರಕಾರಿಗಳು , ದ್ವಿದಳ ಧಾನ್ಯಗಳು, ಮಸೂರ ಧಾನ್ಯಗಳು ,ಕಾಳುಗಳು ಅಥವಾ ಹೋಲ್ ಗ್ರೇನ್ಸ್   ಇತ್ಯಾದಿಗಳ ಸೇವನೆ ಹೆಚ್ಚಾಗಿ ಮಾಡಬೇಕು. ಪಿಸಿಒಡಿ ಅಥವಾ ಪಿಸಿಓಎಸ್ ಅಲ್ಲಿ ದೇಹದ ತೂಕ ಹೆಚ್ಚಾಗಿ ಇರುವುದರಿಂದ ದಿನನಿತ್ಯ ವ್ಯಾಯಾಮದ ಅಭ್ಯಾಸಗಳು ಅಥವಾ ಯೋಗಾಸನದ ಅಭ್ಯಾಸಗಳನ್ನು  ಬೆಳೆಸಿಕೊಳ್ಳಬೇಕು. ಮಾನಸಿಕ ಒತ್ತಡಗಳು ಇದ್ದಲ್ಲಿ ಪ್ರಾಣಾಯಾಮ ಮತ್ತು ಧ್ಯಾನ ಮಾಡುವುದರಿಂದ ಬಹಳಷ್ಟು ಉಪಯೋಗವನ್ನು ಕಂಡುಕೊಳ್ಳಬಹುದು .
 
 
 
 
 
 
 
 
 

Leave a Reply