ಯ್ಯೂಟ್ಯೂಬ್‌ನಲ್ಲಿ ಹೊಸ ರೆಕಾರ್ಡ್ ಬರೆದ ತಮಿಳು ಸಿನಿಮ ‘ಖೈದಿ‘ ಹಿಂದಿ ಅವತರಣಿಕೆ

ಕಾರ್ತಿ ಅಭಿನಯದ ಸೂಪರ್ ಹಿಟ್ ತಮಿಳಿನಲ್ಲಿ ತೆರೆಕಂಡಿದ್ದ ‘ಖೈದಿ’ ಸಿನಿಮ
ಲೋಕೇಶ್ ಕನಗರಾಜ್ ನಿರ್ದೇಶನ ಆಕ್ಷನ್ ಥ್ರಿಲ್ಲರ್ ಚಿತ್ರ

ಉಡುಪಿ: ತಮಿಳಿನ ಸೂಪರ್ ಹಿಟ್ ಚಿತ್ರ, ಕಾರ್ತಿ ಅಭಿನಯದ ’ಖೈದಿ’ ಸಿನಿಮ ಹಿಂದಿ ಡಬ್ಬಿಂಗ್ ಯ್ಯೂಟ್ಯೂಬ್‌ನಲ್ಲಿ ಬಿಡುಗಡೆಗೊಂಡಿದ್ದು, ಒಂದೇ ದಿನದಲ್ಲಿ ಮೂರು ಮಿಲಿಯನ್ (3,431,192) ವೀಕ್ಷಣೆ ಮಾಡುವ ಮೂಲಕ ಹೊಸ ದಾಖಲೆ ಸೃಷ್ಟಿಸಿದೆ. ಲೋಕೇಶ್ ಕನಗರಾಜ್ ನಿರ್ದೇಶಿಸಿದ್ದ ಆಕ್ಷನ್ ಥ್ರಿಲ್ಲರ್ ಚಿತ್ರದಲ್ಲಿ ಕಾರ್ತಿ ಮತ್ತು ನರೈನ್  ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದರು.

2019ರ ಅಕ್ಟೋಬರ್‌ನಲ್ಲಿ ಬಿಡುಗಡೆಯಾಗಿದ್ದ ಈ ಚಿತ್ರ ಸೂಪರ್ ಹಿಟ್ ಆಗಿತ್ತು. ಪೊಲೀಸ್ ಹಾಗೂ ಖಳರ ನಡುವಿನ ಸಮರದಲ್ಲಿ ಸಿಕ್ಕಿಬೀಳುವ ’ಖೈದಿ’ಯೊಬ್ಬ ಜೀವಕ್ಕೆ ಎದುರಾಗುವ ಅಪಾಯಗಳನ್ನು ಲೆಕ್ಕಿಸದೆ ಪೊಲೀಸರ ಜೀವ ಉಳಿಸಲು ನೆರವಾಗುವ ಆಕ್ಷನ್ ಹಾಗೂ ಸಸ್ಪೆನ್ಸ್  ಮಯ ಕಥೆ ಇದರಲ್ಲಿದೆ.

ಜತೆಗೆ ಭಾವನಾತ್ಮಕ ನಂಟಿನ ಎಳೆಯೂ ಇದೆ. ಈ ಚಿತ್ರ ತಮಿಳಿನಲ್ಲಿ ಭಾರಿ ಮೆಚ್ಚುಗೆಗೆ ಪಾತ್ರವಾಗಿತ್ತು. ಒಂದೇ ದಿನದಲ್ಲಿ 10 ಸಾವಿರಕ್ಕೂ ಅಧಿಕ ಮಂದಿ ಸಿನಿ ಪ್ರೇಕ್ಷಕರು ಚಿತ್ರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದು, ದಕ್ಷಿಣ ಭಾರತೀಯರು ಚಿತ್ರಕ್ಕೆ ಫಿದಾ ಆಗಿದ್ದಾರೆ. ಹಿಂದಿಯಲ್ಲಿ ಡಬ್ ಮಾಡಿ ಚಿತ್ರ ಬಿಡುಗಡೆ ಮಾಡಿದ್ದಕ್ಕೆ ಧನ್ಯವಾದ ಹೇಳಿದ್ದಾರೆ. ಆದಷ್ಟು  ಬೇಗ ಚಿತ್ರದ ಪಾರ್ಟ್ 2 ಬಿಡುಗಡೆಗೊಳಿಸುವಂತೆ ಮನವಿ ಮಾಡಿಕೊಂಡಿದ್ದಾರೆ.

 
 
 
 
 
 
 
 
 

Leave a Reply