ದೇವರಗುಂಡಿ ಫಾಲ್ಸ್ ನಲ್ಲಿ ಅರೆಬೆತ್ತಲೆ ಫೋಟೋಗ್ರಾಫಿ 

ಮಂಗಳೂರು: ಇತಿಹಾಸ ಪ್ರಸಿದ್ಧ ದೇವರಗುಂಡಿ ಫಾಲ್ಸ್ ಬಳಿಯಲ್ಲಿ ಮಾಡೆಲ್ ಗಳು ಅರೆಬೆತ್ತಲೆ ಫೋಟೊಶೂಟ್ ನಡೆಸಿದ್ದು, ಇದಕ್ಕೆ ಸ್ಥಳೀಯರು ಆಕ್ರೋಶಕ್ಕೆ ವ್ಯಕ್ತಪಡಿಸಿದ್ದಾರೆ.  ಬೆಂಗಳೂರಿನ ಮಾಡೆಲ್ ಗಳು ಅರೆಬೆತ್ತಲಾಗಿ ಸುಳ್ಯ ತಾಲೂಕಿನ ತೋಡಿಕಾನ ಗ್ರಾಮದಲ್ಲಿರುವ ದೇವರಗುಂಡಿ ಫಾಲ್ಸ್​ ಬಳಿ ಫೋಟೋಗಳನ್ನು ತೆಗೆಸಿಕೊಂಡಿದ್ದಾರೆ. ಮಾಡೆಲ್ ಬೃಂಧಾ ಅರಸ್ ಸೇರಿದಂತೆ ಇಬ್ಬರು ಮಾಡೆಲ್​ಗಳು ಭಾಗಿ ಯಾಗಿದ್ದರು. ಇದೀಗ ಇಲ್ಲಿ ತೆಗೆಸಿಕೊಂಡ ಫೋಟೋಗಳು  ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿವೆ.
ಮಲ್ಲಿಕಾರ್ಜುನ ದೇವಸ್ಥಾನಕ್ಕೆ ಸಂಬಂಧಿಸಿದ ಈ ದೇವರಗುಂಡಿ ಫಾಲ್ಸ್, ದೇವಸ್ಥಾನದಿಂದ ಸುಮಾರು 2 ಕಿಲೋಮೀಟರ್ ದೂರದಲ್ಲಿದೆ. ಈ ಝರಿಯಲ್ಲಿ ಸಾಕ್ಷಾತ್ ಶಿವನೇ ಸ್ನಾನಕ್ಕೆ ಬರುತ್ತಿದ್ದ ಅನ್ನೊ ಇತಿಹಾಸವಿದೆ. ಈ ಕಾರಣಕ್ಕೆ ಸ್ಥಳೀಯರೇ ಫಾಲ್ಸ್​ಗೆ ಇಳಿದು ಸ್ನಾನ ಮಾಡು ವುದಿಲ್ಲ. ಆದರೆ ಈಗ ಅರೆಬೆತ್ತಲಾಗಿ ಫೋಟೋಶೂಟ್​ ಮಾಡಿಸಿರುವುದು  ಸ್ಥಳೀಯರ ಆಕ್ರೋಶಕ್ಕೆ ಮೂಲವಾಗಿದೆ.
ಈ ಕುರಿತಂತೆ ಸ್ಥಳೀಯರು ದೇವಸ್ಥಾನದ ಆಡಳಿತ ಮಂಡಳಿಗೆ  ದೂರು ನೀಡಿದ್ದಾರೆ. ಆಡಳಿತ ಮಂಡಳಿಯು ನಾವು ಫೋಟೋಶೂಟ್​ಗೆ ಅನುಮತಿ ನೀಡಿಲ್ಲ ಎಂದಿದೆ. ಗ್ರಾಮಸ್ಥರು ಮಾತ್ರ ಮಾಡೆಲ್ ಗಳ ಈ ನಡೆಯ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದು ಇಂತಹ ಘಟನೆ ಇನ್ನೊಮ್ಮೆ ಸಂಭವಿಸಿದಂತೆ ನೋಡಿಕೊಳ್ಳಲು ದೇವಳದ ಮಂಡಳಿಗೆ ಎಚ್ಚರಿಸಿದ್ದಾರೆ.
******†*†*******
ಘಟನೆ ಬಳಿಕ ಎಚೆತ್ತು ಫೋಟೋ ಶೂಟ್ ಮಾಡಿಸಿಕೊಂಡ ಮಾಡೆಲ್ ಕ್ಷಮೆಯಾಚನೆ:-
ನಮಗೆ ಇದು ಪವಿತ್ರ ಸ್ಥಳವೆಂದು ಗೊತ್ತಿರಲಿಲ್ಲ. ನಮ್ಮ ನಡೆಯಿಂದ ಧಾರ್ಮಿಕ ಭಾವನೆಗೆ ಧಕ್ಕೆಯಾಗಿದ್ದರೆ ಎಲ್ಲರಲ್ಲೂ ಕ್ಷಮೆ ಯಾಚಿಸುತ್ತೇನೆ” ~ ಬೃಂದಾ ಅರಸ್
 
 
 
 
 
 
 
 
 
 
 

Leave a Reply