ಮಾನವ ಸೋಲನ್ನು ಒಪ್ಪಿಕೊಳ್ಳಲಾರದ ಸ್ಥಿತಿ ತಲುಪಿದ್ದಾನೆ -ನಾದ ಮಣಿನಾಲ್ಕೂರು

ಕೊಕ್ಕರ್ಣೆ ಸಮೀಪದ ಬಲ್ಲೆಬೈಲುವಿನ ‘ನಂದಗೋಕುಲ’ ವೇದಿಕೆಯಲ್ಲಿ ‘ಕತ್ತಲ ಹಾಡು’ಕಾರ್ಯಕ್ರಮ ಅರೆಹೊಳೆ ಪ್ರತಿಷ್ಠಾನ ವತಿಯಿಂದ ಜರುಗಿತು. ಆರಂಭದಲ್ಲಿ ಬೆಂಗಳೂರಿನ ರಂಗ ಪಯಣ ತಂಡದ ರಾಜ್ ಗುರು ಹೊಸಕೋಟೆ ಮತ್ತು ಸಂಗಡಿಗರು ಹೊಸಕೋಟೆ ಶೈಲಿಯ ಜಾನಪದ ಹಾಗೂ ರಂಗ ಗೀತೆಗಳನ್ನು ಹಾಡಿದರು. ಕಲಾವಿದ ಸುದರ್ಶನ್ ತಬಲಾದಲ್ಲಿ ಸಹಕರಿಸಿದ್ದರು. ನಂತರ ನಾದ ಮಣಿನಾಲ್ಕೂರು ಹಾಡಿದರು. ಈರ್ವ ಕಲಾವಿದರನ್ನು ಸನ್ಮಾನಿಸಲಾಯಿತು. 

ಇಂದಿನ ತಂತ್ರಜ್ಞಾನದ ಯುಗದಲ್ಲಿ ಮನುಷ್ಯ ಇಡೀ ಹೊತ್ತು ಅನಗತ್ಯ ವಿಚಾರಗಳೆಡೆಯೆ ಗಮನ ಹರಿಸುವುದರ ಪರಿಣಾಮವಾಗಿ ಸೋಲನ್ನು ಒಪ್ಪಿಕೊಳ್ಳಲಾರದ ಸ್ಥಿತಿ ತಲುಪಿದ್ದು, ಇಂತಹ ಹತಾಶ ಭಾವ ಅವನನ್ನು ಆತ್ಮಹತ್ಯೆಯಂತಹ ಕೃತ್ಯಗಳಿಗೆ ಪ್ರೇರೇಪಿಸುತ್ತದೆ ಎಂದು ನಾದ ಮಣಿನಾಲ್ಕೂರು ಬೇಸರ ವ್ಯಕ್ತಪಡಿಸಿದರು. 

 ನಿವೃತ್ತ ಮುಖ್ಯೋಪಾಧ್ಯಾಯ ಸದಾಶಿವ ಶೆಟ್ಟಿ ಕಾರ್ಯಕ್ರಮದ ಕುರಿತು ತಮ್ಮ ಅಭಿಪ್ರಾಯ ತಿಳಿಸಿದರು. ಬಾಳೆಗುಂಡಿ ರಾಜ ಶೇಖರ್ ಭಟ್, ನಂದಗೋಕುಲದ ಪ್ರಥ್ವಿ ಎಸ್ ರಾವ್, ಶ್ವೇತಾ ಅರೆಹೊಳೆ, ಕಾರ್ತಿಕ್ ಬ್ರಹ್ಮಾವರ ಮತ್ತಿತರರು ಉಪಸ್ಥಿತರಿದ್ದರು. ಅರೆಹೊಳೆ ಸದಾಶಿವ ರಾವ್ ಸ್ವಾಗತಿಸಿ ನಿರೂಪಿಸಿದರು. 

 
 
 
 
 
 
 
 
 
 
 

Leave a Reply