ಹುಲಿ ವೇಷ ನರ್ತನ ಸೇವೆಗೆ ಅವಕಾಶ ಕಲ್ಪಿಸಿ~ ಮಂಗಳಾದೇವಿ ದಸರಾ ಶೋಭಾಯಾತ್ರೆ ಸಮಿತಿ 

ಮಂಗಳೂರು: ಮಂಗಳೂರಿನ ಶ್ರೀ ಮಂಗಳಾದೇವಿ ಮತ್ತು ಶ್ರೀ ಮಾರಿಯಮ್ಮ ದೇವಸ್ಥಾನದಲ್ಲಿ ಅ.24ರಿಂದ 26ರ ತನಕ ದಸರಾ ರಥೋತ್ಸವ ನಡೆಯಲಿದೆ.ಈ ಹಿನ್ನೆಲೆ ದೇವರ ಎದುರಿನಲ್ಲಿ ನಡಿಗೆಯಲ್ಲಿ ಮತ್ತು ತಳ್ಳುಗಾಡಿಯ ಮೂಲಕ ಹುಲಿ ವೇಷದ ನರ್ತನ ಸೇವೆಗೆ ಅವಕಾಶ ಕಲ್ಪಿಸಬೇಕೆಂದು ಮಂಗಳಾದೇವಿ ದಸರಾ ಶೋಭಾಯಾತ್ರೆ ಸಮಿತಿ ಆಗ್ರಹಿದೆ.

ಶನಿವಾರ ಸುದ್ದಿಗೋಷ್ಠಿಯಲ್ಲಿ ಸಮಿತಿ ಅಧ್ಯಕ್ಷ ದಿಲ್‌ರಾಜ್ ಆಳ್ವ ಮಾತನಾಡಿ, ಮಂಗಳಾದೇವಿ ಸುತ್ತುಮುತ್ತಲಿನ ಹುಲಿ ವೇಷ ತಂಡಗಳ ಸಭೆಯನ್ನು ಸಮಿತಿ ವತಿಯಿಂದ ಕರೆಯಲಾಗಿದೆ. ಕರೊನ ನಿಯಮಗಳನ್ನು ಪಾಲಿಸಿಕೊಂಡು ಹುಲಿ ವೇಷಕ್ಕೆ ತಂಡಗಳು ಒಪ್ಪಿಗೆ ನೀಡಿವೆ ಎಂದಿದ್ದಾರೆ. ದಸರಾ ಶೋಭಾಯಾತ್ರೆಯಲ್ಲಿ ಹುಲಿ ವೇಷ ಎಂಬುದು ದೇವರ ಸೇವೆಯೇ ಹೊರತು ಮನರಂಜನೆ ಅಥವಾ ಹಣ ಗಳಿಕೆಯ ಉದ್ದೇಶದಿಂದಲ್ಲ. ಒಂದೊಂದು ತಂಡದ ಒಬ್ಬರು ಅಥವಾ ಇಬ್ಬರು ಹುಲಿವೇಷ ಧಾರಿಗಳು ಮಾತ್ರ ದೇವರ ಮುಂದೆ ಕುಣಿತ ಸೇವೆ ಸಲ್ಲಿಸುವ ನಿರ್ಧಾರ ಮಾಡಲಾಗಿದೆ. ಅವಕಾಶ ಕಲ್ಪಿಸದರೆ ಮಾರ್ಗಸೂಚಿಯಂತೆಯೆ ಹುಲಿ ವೇಷ ನಡೆಯಲಿದೆ ಎಂದು ತಿಳಿಸಿದ್ದಾರೆ.

ಮಂಗಳೂರಿನಲ್ಲಿ ಹುಲಿ ವೇಷ ಇರದ ಮಂಗಳಾದೇವಿಯ ದಸರಾ ಜಂಬೂ ಸವಾರಿ ಇಲ್ಲದ ಮೈಸೂರು ದಸರದಂತೆ ಎಂದು ದಿಲ್‌ರಾಜ್ ಆಳ್ವ ಹೇಳಿದ್ದು, ಈ ಬಗ್ಗೆ ಅ.೮ರಂದು ಜಿಲ್ಲಾಧಿಕಾರಿಯವರಿಗೆ ಶೋಭಾಯಾತ್ರೆ ಸಮಿತಿ ಮನವಿ ಸಲ್ಲಿಸಿ ಹುಲಿವೇಷಕ್ಕೆ ಸಮ್ಮತಿಸುವಂತೆ ವಿನಂತಿಸಿದೆ. ಅ.೧೩ರಂದು ನಡೆಯುವ ಧಾರ್ಮಿಕ ಇಲಾಖೆ ಹಾಗೂ ಸಂಬಂಧ ಪಟ್ಟ ಅಧಿಕಾರಿಗಳ ಸಭೆಯಲ್ಲಿ ಚರ್ಚಿಸಿ ಮುಂದಿನ ಆದೇಶ ಹೊರಡಿಸುವುದಾಗಿ ಜಿಲ್ಲಾಧಿಕಾರಿ ಆಶ್ವಾಸನೆ ನೀಡಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಕೋವಿಡ್ ಕಾರಣಕ್ಕೆ ಹುಲಿ ವೇಷಕ್ಕೆ ಅಡ್ಡಿ ಪಡಿಸಬಾರದು ಎಂಬ ಅಭಿಪ್ರಾಯಗಳು ವ್ಯಾಪಕವಾಗಿ ಕೇಳಿಬರುತ್ತಿದೆ ಎಂದು ಮಂಗಳಾದೇವಿಯ ದಸರಾ ಶೋಭಾಯಾತ್ರೆ ಸಮಿತಿ ಅಧ್ಯಕ್ಷರು ಹೇಳಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಸಮಿತಿಯ ಉಪಾಧ್ಯಕ್ಷ ದಿನೇಶ ಕುಂಪಲ, ಪ್ರಧಾನ ಕಾರ್ಯದರ್ಶಿ ಗಿರೀಶ್ ಶೆಟ್ಟಿ, ಹನೀಷ್ ಎನ್.ಬೋಳಾರ ಮತ್ತು ರಾಬಿನ್ ಮೊಂತೆರೊ ಭಾಗವಹಿಸಿದ್ದರು.

 
 
 
 
 
 
 
 
 
 
 

Leave a Reply